Business News: ಮ್ಯಾಗಿ ಅಂದ್ರೆ ಎಲ್ಲರಿಗೂ ಇಷ್ಟ. ಮಾರ್ಕೆಟ್‌ನಲ್ಲಿ ವೆರೈಟಿ ವೆರೈಟಿ ನೂಡಲ್ಸ್ ಬಂದ್ರು, ಹಲವು ರೀತಿಯ ಆರೋಪ ಇದ್ದರೂ, ಹಲವರು ಇನ್ನೂವರೆಗೂ ಇಷ್ಟಪಡೋದು ಮ್ಯಾಗಿಯನ್ನೇ. ಆದರೆ ಮ್ಯಾಗಿ ಶುರುವಾಗಿದ್ದು ಹೇಗೆ ಅಂತಾ ಹಲವರಿಗೆ ಗೊತ್ತಿಲ್ಲ. ಇಂದು ನಾವು ಮ್ಯಾಗಿ ಹೇಗೆ ಶುರುವಾಯ್ತು..? ಮ್ಯಾಗಿ ಲೇವ್ ಹೆಚ್ಚಿಸಲು ಯಾವ ರೀತಿಯ ಮಾರ್ಕೆಟಿಂಗ್ ತಂತ್ರ ರೂಪಿಸಲಾಗುತ್ತದೆ ಅಂತಾ ಹೇಳಲಿದ್ದೇವೆ.
ಮ್ಯಾಗಿ ಶುರುವಾಗಿದ್ದು ಹೇಗೆ..?
1884ರಲ್ಲಿ ವಿದೇಶದಲ್ಲಿ ಮಹಿಳೆಯರು, ಪುರುಷರು ಎಲ್ಲರೂ ಬೆಳಿಗ್ಗೆ ಬೇಗ ಎದ್ದು ಕೆಲಸಕ್ಕೆ ಹೊರಡುತ್ತಿದ್ದರು. ಹಾಗಾಗಿ ಮನೆಯಲ್ಲಿ ಅಡುಗೆ ಮಾಡಿ ತಿಂದು ಬರಲು, ಟಿಫಿನ್ ಕಟ್ಟಿಕೊಂಡು ಬರಲು ಕೂಡ ಅವರಿಗೆ ಸಮಯವಿರಲಿಲ್ಲ. ಅಲ್ಲದೇ, ಕೆಲಸಕ್ಕೆ ಬಂದಾಗ, ದುಡ್ಡು ಕೊಟ್ಟು ಊಟ ಮಾಡುವಷ್ಟು ಕೂಡ ಹಣವಿರಲಿಲ್ಲ.
ಆಗ ಜೂಲಿಯಸ್ ಮ್ಯಾಗಿ ಎಂಬ ಉದ್ಯಮಿ, ಇಂಥವರ ಹೊಟ್ಟೆ ತುಂಬಿಸಲು, ಏನಾದರೂ ಇನ್‌ಸ್ಟಂಟ್ ಆಗಿ ತಯಾರಿಸುವ ಆಹಾರ ಪರಿಚಯಿಸಬೇಕು ಎಂದು ನಿರ್ಧರಿಸಿದರು. ರುಚಿಯಾಗಿದ್ದು, ಕಡಿಮೆ ಬೆಲೆಗೆ ಸಿಗುವಂಥ, ಬೇಗ ತಯಾರಿಸಬಹುದಾದ ತಿಂಡಿಯಾಗಿ, ಸೂಪ್ ಪರಿಚಯಿಸಿದರು. ಮತ್ತು ಇದಕ್ಕೆ ತಮ್ಮದೇ ಹೆಸರಿನಲ್ಲಿರುವ ಮ್ಯಾಗಿ ಎಂಬ ಹೆಸರಿಟ್ಟರು.
ಇವರು ಪರಿಚಯಿಸಿದ ಸೂಪ್ ಪೌಡರ್ ತೆಗೆದುಕೊಂಡು, ಬಿಸಿ ನೀರಿನಲ್ಲಿ ಕೊಂಚ ಹೊತ್ತು ಕುದಿಸಿದರೆ, ಸೂಪ್ ರೆಡಿಯಾಗುತ್ತಿತ್ತು. ಮತ್ತು ಸವಿಯಲು ರುಚಿಯೂ ಇತ್ತು. ಬಳಿಕ ಈ ರೀತಿಯ ಇನ್ನೂ ಹಲವು ಪ್ರಾಡಕ್ಟ್‌ಗಳನ್ನು ಮ್ಯಾಗಿ ಪರಿಚಯಿಸಿದರು. ಬಳಿಕ ಇನ್‌ಸ್ಟಂಟ್ ನೂಡಲ್ಸ್ ಪರಿಚಯಿಸಿದರು.
1912ನಲ್ಲಿ ಜೂಲಿಯಸ್ ಮ್ಯಾಗಿ ಸಾವನ್ನಪ್ಪಿದರು. ಬಳಿಕ ನೆಸ್ಲೆ ಕಂಪನಿ ಮ್ಯಾಗಿಯನ್ನು ಖರೀದಿಸಿ, ಇನ್ನೂ ಇಂಪ್ರೂವ್ ಮಾಡಿತು. ಈ ಮ್ಯಾಗಿ ನೂಡಲ್ಸ್ ಜನರಿಗೆ ತುಂಬಾ ಇಷ್ಟವಾಗಿ, ಅದು ಬೇರೆ ಬೇರೆ ದೇಶದಲ್ಲೂ ಫೇಮಸ್ ಆಗಿ, ಈಗ ಇಡೀ ಪ್ರಪಂಚದಾದ್ಯಂತ ಜನ ಮ್ಯಾಗಿ ರುಚಿ ನೋಡುವ ಹಾಗಾಗಿದೆ. 135 ವರ್ಷಗಳ ಹಿಂದೆ ಜೂಲಿಯಸ್ ಮ್ಯಾಗಿ ಹಳದಿ ಮತ್ತು ಕೆಂಪು ಬಣ್ಣದ ಪ್ಯಾಕೇಟ್‌ನಲ್ಲಿ ನೂಡಲ್ಸ್ ಮಾರಾಟ ಮಾಡಿದ್ದರು. ಈಗಲೂ ಸಹ ಮ್ಯಾಗಿ ಪ್ಯಾಕೇಟ್ ಹಳದಿ ಮತ್ತು ಕೆಂಪು ಬಣ್ಣದಲ್ಲೇ ಬರುತ್ತದೆ.
ಮ್ಯಾಗಿಯ ಮಾರಾಟ ತಂತ್ರ..
ಮ್ಯಾಗಿ ಅನ್ನೋದು ಹಲವು ವರ್ಷಗಳಿಂದಲೂ ಮಾರಾಟ ಮಾಡಲ್ಪಡುತ್ತಿದ್ದು, ಇದು ಬರೀ ತಿಂಡಿಯಾಗಿಲ್ಲ. ಎಷ್ಟೋ ಜನರ ಜೀವನದ ಒಂದು ಎಮೋಷನಲ್ ಭಾಗವಾಗಿದೆ. ಎಷ್ಟೋ ಜನ ರಾತ್ರಿ ಊಟದ ಬದಲು ಮ್ಯಾಗಿ ತಯಾರಿಸಿ ತಿಂದವರಿದ್ದಾರೆ. ಅನ್ನ-ಬೇಳೆ ತಂದು ಬೇಯಿಸಿ ತಿನ್ನಲಾಗದ ಬ್ಯಾಚುಲರ್ ಮ್ಯಾಗಿ ಬೇಯಿಸಿ, ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಪಿಕ್‌ನಿಕ್, ಟೂರ್, ಟ್ರಿಪ್‌ನಲ್ಲಿ ಮ್ಯಾಗಿ ಬಳಕೆಯಾಗಿದೆ.
ಹಾಗಾಗಿ ಇದೇ ರೀತಿಯ ಆ್ಯಡ್‌ಗಳನ್ನು ತಂದು ಮ್ಯಾಗಿ ಕಂಪನಿ, ತನ್ನ ಗ್ರಾಹಕರನ್ನು ಎಮೋಷನಲ್ ಮಾಡಿ, ಮ್ಯಾಗಿ ಮಾರಾಟ ಮಾಡುತ್ತಿದೆ. ಅಲ್ಲದೇ, ಕೆಲವು ಕಡೆ ಮ್ಯಾಗಿ ಫ್ರಿಯಾಗಿ ಟೇಸ್ಟ್ ನೋಡಲು ಮ್ಯಾಗಿ ಕೊಡುತ್ತಿತ್ತು. ಇದರ ರುಚಿ ನೋಡಿಯೇ, ಹಲವು ಮಕ್ಕಳು ಅಪ್ಪ ಅಮ್ಮನ ಬಳಿ ಮ್ಯಾಗಿ ತಿನ್ನಲು ಡಿಮ್ಯಾಂಡ್ ಮಾಡುತ್ತಾರೆ ಅನ್ನೋದು ಮ್ಯಾಗಿ ಕಂಪನಿ ಐಡಿಯಾ ಆಗಿತ್ತು.