Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್ ಮೇಳಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಯಾಕಂದ್ರೆ ರೋಲ್ಸ್ ರಾಯ್ಸ್ ಕಂಪನಿ ತನ್ನ ಕಾರ್‌ಗಳನ್ನು ಕಾರ್ ಮೇಳದಲ್ಲಿ ಪ್ರದರ್ಶನಕ್ಕೆ ಇಡೋದಿಲ್ಲ. ಬದಲಾಗಿ ಏರ್‌ಕ್ರಾಪ್ಟ್‌ನಲ್ಲಿ ಇರಿಸುತ್ತದೆ. ಏರ್‌ಕ್ರಾಪ್ಟ್ ಎಕ್ಸಿಬಿಷನ್ ಇದ್ದಾಗ, ಅಲ್ಲಿ ರೋಲ್ಸ್ ರಾಯ್ಸ್ ತನ್ನ ಕಾರನ್ನು ಪ್ರದರ್ಶನಕ್ಕೆ ಇಡುತ್ತದೆ.
ಯಾಕಂದ್ರೆ ರೋಲ್ಸ್ ರಾಯ್ಸ್ ಕಾರ್‌ನ್ನು ಜನ ಮಾಮೂಲಿ ಎಂದು ತಿಳಿಯದಿರಲಿ ಎಂದು ರೋಲ್ಸ್ ರಾಯ್ಸ್ ಕಂಪನಿ ಈ ತಂತ್ರ ರೂಪಿಸಿದೆ. ಇದರಿಂದ ಈ ಕಂಪನಿ ಕಾರ್ ವ್ಯಾಲ್ಯೂ ಆಟೋಮೆಟಿಕ್ ಆಗಿ ಹೆಚ್ಚಾಗುತ್ತದೆ. ರೋಲ್ಸ್ ರಾಯ್ಸ್ ಕಾರ್ ಬೆಲೆ 2ವರೆ ಕೋಟಿ ರೂಪಾಯಿ. ಏರ್‌ಕ್ರಾಫ್ಟ್ ಎಕ್ಸಿಬೇಷನ್‌ನಲ್ಲಿ ಕಾರ್ ಪ್ರದರ್ಶನಕ್ಕೆ ಇಟ್ಟಾಗ, 200, 300 ಕೋಟಿ ರೂಪಾಯಿ ಕಾರ್ ಮುಂದೆ 2ವರೆ ಕೋಟಿ ರೂಪಾಯಿ ಕಾರ್ ಕಡಿಮೆ ರೇಟ್‌ದು ಅನ್ನಿಸೋಕ್ಕೆ ಶುರುವಾಗತ್ತೆ. ಆಗ ಜನ ತಮ್ಮ ಕಾರ್ ಖರೀದಿಸುತ್ತಾರೆ ಅನ್ನೋದು ಕಂಪನಿಯ ತಂತ್ರ.
ಇನ್ನು ಏರ್‌ಕ್ರಾಫ್ಟ್ ಎಕ್ಸಿಬಿಷನ್‌ನಗೆಲ್ಲ ಮಾಮೂಲಿ ಜನ ಬರುವುದಿಲ್ಲ. ಬದಲಾಗಿ ಕೋಟ್ಯಂತರ ರೂಪಾಯಿ ಆಸ್ತಿ ಇರುವ ಗಣ್ಯರು, ಉದ್ಯಮಿಗಳೇ ಬರುತ್ತಾರೆ. ಅಂಥವರನ್ನು ಸೆಳೆಯಲು ರೋಲ್ಸ್ ರಾಯ್ಸ್ ಈ ರೀತಿ ಬ್ಯುಸಿನೆಸ್ಸ ಸ್ಟ್ರಾಟಜಿ ರೂಪಿಸುತ್ತದೆ.