Financial Knowledge: ಶ್ರೀಮಂತರಾಗಬಯಸಿದ್ದೀರಾ..? ಹಾಗಾದ್ರೆ ಇಂಥ ಜನರಿಂದ ದೂರವಿರಿ

Financial Knowledge: ಇಂದಿನ ಕಾಲದಲ್ಲಿ ಹಣವಿಲ್ಲದೇ ಯಾವ ಕೆಲಸವೂ ಆಗುವುದಿಲ್ಲ. ಹಣವಿಲ್ಲದಿದ್ದರೆ, ಸಂಬಂಧಿಕರೇ ನಮ್ಮನ್ನು ನಾಯಿಗಿಂತ ಕೀಳಾಗಿ ನೋಡುತ್ತಾರೆ. ಬೇರೆಯವರ್ಯಾಕೆ ಖುದ್ದು ನಮ್ಮ ರಕ್ತ ಸಂಬಂಧಿಕರೇ ನಮ್ಮನ್ನು ಕೀಳಾಗಿ ನೋಡುತ್ತಾರೆ. ಹಾಗಾಗಿ ನಾವು ಜೀವನದಲ್ಲಿ ಉದ್ಧಾರವಾಗಿ ಸ್ವಲ್ಪ ಶ್ರೀಮಂತರಾಗಬೇಕಿದೆ. ಹಾಗಾದ್ರೆ ನಾವು ಶ್ರೀಮಂತರಾಗಬೇಕು ಅಂದ್ರೆ ಎಂಥ ಜನರಿಂದ ದೂರವಿರಬೇಕು ಎಂದು ತಿಳಿಯೋಣ ಬನ್ನಿ..

ಬರೀ ಎಂಜಾಯ್‌ ಮಾಡೋದ್ರಲ್ಲೇ ಸಮಯ ಕಳೆಯುವವರು: ಯಾರೂ ಜೀವನ ಅಂದ್ರೆ ಬರೀ ಎಂಜಾಯ್‌ಮೆಂಟ್ ಅಂತಾ ಇರ್ತಾರೋ ಅಂಥವರ ಜತೆ ಸೇರಬೇಡಿ. ಅಂಥವರಿಂದ ದೂರವಿರಿ. ಇಂಥವರ ಜತೆಗಿದ್ದರೆ, ನಿಮಗೆ ಯಾವ ಸ್ಪೂರ್ತಿಯೂ ಸಿಗುವುದಿಲ್ಲ.

ನಶೆಗಾಗಿ ಬದುಕುವವರು: ನಶೆ ಅಂದ್ರೆ ಕುಡಿತ, ಡ್ರಗ್ಸ್ ಮಾತ್ರವಲ್ಲ, ಮೂವಿ, ಪ್ರವಾಸ, ಇತ್ಯಾದಿಗಳ ನಶೆಯೂ ಅತೀಯಾದರೆ ಕಷ್ಟ. ಜೀವನದಲ್ಲಿ ಹಲವು ವಿಷಯಗಳನ್ನು ತಿಳಿಯಲು ಕಲಿಯಲು ನಾವು ಪ್ರವಾಸ ಮಾಡಬೇಕು. ಸಿನಿಮಾ ನೋಡಬೇಕು. ಅದನ್ನು ಬಿಟ್ಟು ಜೀವನ ಇರುವುದೇ ಪ್ರವಾಸ ಮಾಡಲು, ಮೂವಿ ನೋಡಲು, ಕುಡಿದು ಮಜಾ ಮಾಡಲು ಎಂದು ಭಾವಿಸುವವರಿಂದ ನೀವು ದೂರವಿರಿ.

ಇಎಮ್‌ಐಗೆ ಅಡಿಕ್ಟ್ ಆದವರು: ಇಎಮ್‌ಐ ನಂಬಿ ಎಲ್ಲ ವಸ್ತುಗಳನ್ನು ಪದೇ ಪದೇ ಖರೀದಿಸುವವರು ಎಂದಿಗಾದರೂ ಸಾಲದ ಸುಳಿಯಲ್ಲಿ ಸಿಲುಕುವವರೇ. ಹಾಗಾಗಿ ಇಎಮ್‌ಐ ನಂಬಿ ಜೀವನ ಮಾಡುವವರ ಸಂಗ ಮಾಡಿದ್ದಲ್ಲಿ, ನಿಮ್ಮ ಜೀವನವೂ ಸಾಲಮಯವಾಗಬಹುದು.

ಗಾಸಿಪ್ ಪ್ರಿಯರು: ನಾಲ್ಕು ಜನ ಸೇರಿದಾಗ ಬೇರೆಯವರ ಬಗ್ಗೆ ಗಾಸಿಪ್ ಮಾಡುವ ಜನರಿಂದ ದೂರವಿರಿ. ಇವರು ನಿಮ್ಮನ್ನು ಯಶಸ್ಸಿನತ್ತ ಹೋಗಲು ಬಿಡದವರು.

ನೆಪ ಹುಡುಕುವವರು: ಯಾವುದೇ ಕೆಲಸ ಮಾಡಲು ನೆಪ ಹುಡುಕುವವರು ಎಂದಿಗೂ ಸ್ಪೂರ್ತಿದಾಯಕರಾಗಲು ಸಾಧ್ಯವಿಲ್ಲ. ಹಾಗಾಗಿ ಎಲ್ಲ ಕೆಲಸದಲ್ಲೂ ಪದೇ ಪದೇ ನೆಪ ಹುಡುಕುವವರ ಜತೆ ಎಂದಿಗೂ ಸೇರಬೇಡಿ.

ನಕಾರಾತ್ಮಕವಾಗಿಯೇ ಯೋಚಿಸುವವರು: ನೀವು ಏನಾದರೂ ಮಾಡಲು ಹೋದಾಗ, ಅದರ ಬಗ್ಗೆ ಬರೀ ನಕಾರಾತ್ಮಕವಾಗಿ ಮಾತನಾಡುವವರಿಂದ ದೂರವಿರಿ. ಇಲ್ಲವಾದಲ್ಲಿ ನೀವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವೇ ಇಲ್ಲ.

About The Author