Monday, December 23, 2024

Latest Posts

ಉತ್ತಮ ಉದ್ಯಮಿ ಆಗಬೇಕು, ನಿಮ್ಮ ಉದ್ಯಮ ಕೂಡ ಒಳ್ಳೆ ಲಾಭ ಗಳಿಸಬೇಕಂದ್ರೆ, ಹೀಗೆ ಮಾಡಿ..

- Advertisement -

ಹಲವರಿಗೆ ತಮ್ಮದೇ ಸ್ವಂತ ಉದ್ಯಮ ಇರಬೇಕು. ತಾವು ಒಳ್ಳೆಯ ಲಾಭ ಮಾಡಬೇಕು. ತಾವು ಪರರಿಗೆ ಉದ್ಯೋಗ ಕೊಡಬೇಕೆ ವಿನಃ, ತಾವು ಉದ್ಯೋಗಕ್ಕೆ ಹೋಗಬಾರದು ಅನ್ನೋ ಮನಸ್ಸಿರತ್ತೆ. ಹೀಗೆ ಅಂದುಕೊಂಡೇ ಹಲವರು ಉದ್ಯೋಗ ಮಾಡಲು ಮುಂದಾಗುತ್ತಾರೆ. ಆದ್ರೆ ಎಲ್ಲರೂ ಉದ್ಯಮದಲ್ಲಿ ಸಕ್ಸಸ್‌ ಕಾಣೋದಿಲ್ಲ. ಬದಲಾಗಿ ತಮ್ಮ ಜೀವನದಲ್ಲಿ ಕೆಲ ರೂಲ್ಸ್ ಪಾಲಿಸಿಕೊಂಡು ಬಂದವರಷ್ಟೇ ಆ ಉದ್ಯಮದಲ್ಲಿ ಲಾಭ ಗಳಿಸುತ್ತಾರೆ. ಹಾಗಾದ್ರೆ ಒರ್ವ ಒಳ್ಳೆ ಉದ್ಯಮಿಯಾಗೋಕ್ಕೆ ಫಾಲೋ ಮಾಡಬೇಕಾದ ರೂಲ್ಸ್ ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ನೀವು ಒಳ್ಳೆಯ ಉದ್ಯಮಿಯಾಗೋದಕ್ಕೆ ನಿಮ್ಮ ಆಲಸ್ಯ ಬಿಡಬೇಕು. ಸಮಯವನ್ನು ಹಾಳು ಮಾಡದೇ ನೀವು ನಿಮ್ಮ ಉದ್ಯೋಗವನ್ನ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ಯೋಚಿಸಬೇಕು. ಹಲವರು ಬಂಡವಾಳವನ್ನ ಹೂಡುತ್ತಾರೆ. ಆದ್ರೆ ಅದರ ಲಾಭವನ್ನೇ ಬಯಸುತ್ತಾರೆ ವಿನಃ, ಅದರಿಂದಾಗುವ ನಷ್ಟವನ್ನು ಸಹಿಸುವುದಿಲ್ಲ. ಆದ್ರೆ ಒಬ್ಬ ಉದ್ಯಮಿ ಹೇಗೆ ಬಂಡವಾಳ ಹೂಡುತ್ತಾನೋ, ಹಾಗೆ ಲಾಭವನ್ನು ತೆಗೆಯುವ ಯೋಗ್ಯತೆ ಹೊಂದಿರಬೇಕು. ಇಲ್ಲವಾದಲ್ಲಿ ನಷ್ಟವಾದಾಗ ಅದನ್ನು ಸಹಿಸಿಕೊಂಡು, ಉದ್ಯಮವನ್ನ ಮುಂದುವರಿಸಬೇಕು. ಮತ್ತು ಮುಂದೆ ಸಕ್ಸಸ್ ಆಗಲು ಬೇಕಾಗುವ ಕೆಲಸ ಮಾಡಬೇಕು.

ಅಮೇಜಾನ್‌ ಓನರ್ ಆಗಿರುವ ಜೆಫ್ ಬೆಜಾಜ್  ಹೇಳೋದೇನಂದ್ರೆ, ನಾವು ಉದ್ಯಮ ಆರಂಭಿಸಿದಾಗ, ಅಲ್ಲಿ ಕೆಲಸ ಮಾಡಲು ಕೆಲವರನ್ನಷ್ಟೇ ಇರಿಸಬೇಕೇ ವಿನಃ, ಲಾಭ ಬಂದಂತೆ, ಕೆಲಸಗಾರರನ್ನು ಹೆಚ್ಚು ಮಾಡಬಾರದು. ಕೆಲವರು ತಮಗೆ ಲಾಭ ಬಂತೆಂದು, ಹೆಚ್ಚು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ದೊಡ್ಡ ಆಫೀಸ್‌ನಲ್ಲಿ ಕೆಲಸ ಶುರು ಮಾಡ್ತಾರೆ. ಆದ್ರೆ ಲಾಭ ಬಂದ ಬಳಿಕ ಹೀಗೆ ಮಾಡೋದು ತಪ್ಪು, ನಿಮಗೆ ದೊಡ್ಡಲಾಭ ಬಂದಾಗ, ಹೆಚ್ಚು ಜನರನ್ನು ಕೆಲಸಕ್ಕೆ ತೆಗೆದುಕೊಂಡರೂ, ಅದನ್ನು ನಿಭಾಯಿಸಬಲ್ಲೆ ಎಂದು ನಿಮಗೆ ಅನ್ನಿಸಿದಾಗ ಮಾತ್ರ, ಹೀಗೆ ಮಾಡಬೇಕು ಅಂತಾರೆ ಜೆಫ್. ಇದರಿಂದ ಮುಂದೆ ತೊಂದರೆಯಾಗಬಹುದು. ಅಥವಾ ನಷ್ಟ ಸಂಭವಿಸಬಹುದು ಅನ್ನೋದು ಜೆಫ್ ಮಾತು.

ಇನ್ನು ನಿಮ್ಮ ಉದ್ಯೋಗ ಶುರುವಾದಾಗ, ಅಲ್ಲಿ ಬರುವ ಗ್ರಾಹಕರಲ್ಲಿ ಬರೀ ನಿಮ್ಮನ್ನು ಹೊಗಳುವ, ನಿಮ್ಮ ಪ್ರಾಡಕ್ಟ್‌ನ್ನ ಕೊಂಡಾಡುವ ಗ್ರಾಹಕರನ್ನಷ್ಟೇ ಅಲ್ಲ, ಅವರಿಗಿಂತ ಹೆಚ್ಚು, ನಿಮ್ಮ ಪ್ರಾಡಕ್ಟ್‌ನಲ್ಲಿ ತಪ್ಪು ಕಂಡು ಹಿಡಿಯುವ ಗ್ರಾಹಕರ ಬಗ್ಗೆಯೂ ನೀವು ಗಮನ ಕೊಡಬೇಕು. ಅವರು ನಿಮ್ಮ ಪ್ರಾಡಕ್ಟ್‌ನಲ್ಲಿರುವ ತಪ್ಪನ್ನು ಕಂಡು ಹಿಡಿಯುತ್ತಾರೆ. ಆಗ ನೀವು ನಿಮ್ಮ ಪ್ರಾಡಕ್ಟ್‌ನಲ್ಲಿರುವ ತಪ್ಪನ್ನು ಕಂಡು ಹಿಡಿದು, ಇನ್ನೂ ಉನ್ನತ ಮಟ್ಟಕ್ಕೇರಬಹುದು.

 ಇನ್ನು ಕೊನೆಯದಾಗಿ ನೀವು ನಿಮ್ಮ ಪ್ರಾಡಕ್ಟ್‌ನ ಕ್ವಾಂಟಿಟಿಗಿಂತ, ಕ್ವಾಲಿಟಿ ಬಗ್ಗೆ ಗಮನ ಹರಿಸಬೇಕು. ಅದರ ಕ್ವಾಲಿಟಿ ಒಳ್ಳೆಯದಿದ್ದಾಗಲೇ, ಜನ ನಿಮ್ಮ ಮೇಲೆ ವಿಶ್ವಾಸವಿಡೋದು. ಇನ್ನು ನಿಮ್ಮ ವಸ್ತು ಗ್ರಾಹಕರ ಬಳಿ ತಲುಪಲು ಬರೀ, ಸಾಮಾಜಿಕಕ ಜಾಲತಾವಷ್ಟೇ ಬಳಸೋದಲ್ಲ, ನಿಮ್ಮ ಬುದ್ಧಿಯನ್ನು ಬಳಸಬೇಕು. ಫೇಸ್‌ ಟೂ ಫೇಸ್ ಮಾತನಾಡಿ, ಕಮ್ಯೂನಿಕೇಶನ್ ಸ್ಕಿಲ್ಸ್ ಬಗ್ಗೆ ತಿಳಿದುಕೊಂಡಿರಬೇಕು. ಮಾರ್ಕೆಟಿಂಗ್ ಮಾಡುವ ಪರಿ ನಿಮಗೆ ಗೊತ್ತಿರಬೇಕು. ಹಾಗಿದ್ದಲ್ಲಿ, ಮಾತ್ರ ನೀವು ಓರ್ವ ಉತ್ತಮ ಉದ್ಯಮಿಯಾಗಲು ಸಾಧ್ಯ.

- Advertisement -

Latest Posts

Don't Miss