Saturday, July 27, 2024

Latest Posts

ಶುಭ ಶುಕ್ರವಾರದಂದು ಅಪ್ಪಿ ತಪ್ಪಿ ಈ ಬಣ್ಣದ ಬಟ್ಟೆ ಧರಿಸಬೇಡಿ

- Advertisement -

ಪ್ರತಿ ತಿಂಗಳ ಹುಣ್ಣಿಮೆಯ ನಾಲ್ಕನೇ ದಿನ ಸಂಕಷ್ಟ ಚತುರ್ಥಿಯನ್ನು (Sankashta Chaturthi) ಆಚರಿಸಲಾಗುವುದು. ಈ ದಿನ ಗಣೇಶನಿಗೆ (Lord Ganesha) ವಿಧಿ ವಿಧಾನದೊಂದಿಗೆ ಪೂಜಿಸಿ ವ್ರತ ಕೈಗೊಂಡರೆ ಇಷ್ಟಾರ್ಥ ನೆರವೇರುವುದು ಎಂಬ ನಂಬಿಕೆ ಇದೆ. ಅದರಲ್ಲೂ ಈ ಬಾರಿ ಶುಕ್ರವಾರದಂದು (Friday) ಈ ಸಂಕಷ್ಟ ಚುತುರ್ಥಿ ಆಗಮಿಸಿರುವುದು ವಿಶೇಷ.
ಈ ದಿನ ಸಂಕಷ್ಟ ಚತುರ್ಥಿ ವ್ರತ ಕೈಗೊಂಡು, ಉಪವಾಸವನ್ನು ಆಚರಿಸುತ್ತಾರೆ. ರಾತ್ರಿ ಚಂದ್ರ (Moon) ದರ್ಶನವಾದ ನಂತರವೇ ಉಪವಾಸ ಮುರಿಯುವುದರಿಂದ ಇಷ್ಟಾರ್ಥಗಳು ಸಿದ್ದಿಸಲಿದೆ.

ಬಾಲಚಂದ್ರನಾಗಿ ಗಣೇಶನ ಪೂಜೆ, ನಾರದ ಪುರಾಣದ ಪ್ರಕಾರ ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ಮನೆ ಮತ್ತು ಕುಟುಂಬದಲ್ಲಿನ ಅಡೆತಡೆಗಳಿಂದ ಮುಕ್ತಿ ಪಡೆಯಬಹುದು. ಜೊತೆಗೆ ಬಾಕಿ ಉಳಿದಿರುವ ಶುಭ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಈ ದಿನದಂದು ಗಣೇಶನನ್ನು ಬಾಲಚಂದ್ರ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ. ಈ ಚತುರ್ಥಿಯಲ್ಲಿ ಚಂದ್ರನ ದರ್ಶನ ಮಾಡುವುದರಿಂದ ಗಣೇಶನ ದರ್ಶನ ಮಾಡಿದ ಪುಣ್ಯ ಫಲ ಸಿಗುತ್ತದೆ. ಈ ದಿನ, ಮಹಿಳೆಯರು ತಮ್ಮ ಮಕ್ಕಳ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಉಪವಾಸವನ್ನು ಆಚರಿಸುತ್ತಾರೆ. ಜೊತೆಗೆ ಗಣೇಶನ ಕಥೆಗಳನ್ನು ಕೇಳುವುದರಿಂದ ಪುಣ್ಯ ಫಲ ಸಿಗಲಿದೆ ಎಂಬ ನಂಬಿಕೆ ಇದೆ.

ಈ ಬಾರಿಯ ಸಂಕಷ್ಟ ಚತುರ್ಥಿಯಲ್ಲಿ ಎರಡು ರೀತಿಯ ಶುಭ ಯೋಗಗಳು ರೂಪುಗೊಳ್ಳುತ್ತಿದೆ. ಈ ಹಿನ್ನಲೆ ಗಣಪತಿಯನ್ನು ಪೂಜಿಸುವುದರಿಂದ ತುಂಬಾ ಶುಭ ಫಲ ದೊರೆಯುತ್ತದೆ. ಸಂಕಷ್ಟ ಚತುರ್ಥಿಯ ಈ ದಿನ ಚಂದ್ರನನ್ನು ಪೂರ್ವ ಫಾಲ್ಗುಣಿ ನಕ್ಷತ್ರ ಮತ್ತು ಸಿದ್ಧಿ ಯೋಗ ರೂಪುಗೊಂಡಿದೆ. ಇದಲ್ಲದೇ ಗ್ರಹಗಳ ಶುಭ ಸಂಯೋಜನೆಯಿಂದ ಸೌಭಾಗ್ಯ ಎಂಬ ಶುಭ ಯೋಗವೂ ರೂಪುಗೊಂಡಿದೆ. ಇದರಿಂದ ಸಕತ್ ಚೌತ್‌ನ ಮಹತ್ವ ಹೆಚ್ಚಿದೆ. ಶುಕ್ರವಾರದಂದು ಶುಕ್ರ, ಪೂರ್ವ ಫಾಲ್ಗುಣಿ ನಕ್ಷತ್ರದ ಸಂಯೋಜನೆ ಇರುವುದರಿಂದ ಈ ಚತುರ್ಥಿ ಬಹಳ ವಿಶೇಷವಾಗಿದೆ.

ಸಂಕಷ್ಟ ಚತುರ್ಥಿಯ ದಿನದಂದು ಉಪವಾಸವನ್ನು ಆಚರಿಸುವಾಗ, ಮಹಿಳೆಯರು ತಪ್ಪಾಗಿಯೂ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಈ ದಿನ ಹಳದಿ ಅಥವಾ ಕೆಂಪು ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ. ಅಂತಹ ಬಣ್ಣಗಳನ್ನು ಧರಿಸುವುದು ಮಂಗಳಕರ. ಹಿಂದೂ ಧರ್ಮದಲ್ಲಿ ಪೂಜೆ ಅಥವಾ ಶುಭ ಕಾರ್ಯಗಳ ಸಮಯದಲ್ಲಿ ಕಪ್ಪು ಬಣ್ಣವನ್ನು ಬಳಸಬೇಡಿ.

ಪೂಜೆಯ ಸಮಯದಲ್ಲಿ ಗಣಪತಿಗೆ ಮರೆತು ಕೂಡ ತುಳಸಿ ಎಲೆಗಳನ್ನು ಅರ್ಪಿಸಬೇಡಿ. ದಂತಕಥೆಯ ಪ್ರಕಾರ, ಗಣೇಶ ತುಳಸಿಗೆ ಶಪಿಸಿದರು. ಈ ವೇಳೆ ಗಣೇಶ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸಲು ನಿರಾಕರಿಸಿದರು.

ಗಣೇಶನ ವ್ರತದ ದಿನದಂದು ಚಂದ್ರನನ್ನು ನೋಡಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದನ್ನು ಮರೆಯಬೇಡಿ. ಈ ದಿನ, ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರವೇ ಉಪವಾಸವನ್ನು ಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ವಿನಾಯಕ ಚತುರ್ಥಿಯ ದಿನದಂದು ಚಂದ್ರನನ್ನು ನೋಡಬಾರದು ಎಂಬ ಪ್ರತೀತಿ ಇದೆ. ಪೂಜೆಯ ಸಮಯದಲ್ಲಿ ಹಾಲು ಮತ್ತು ಅಕ್ಷತೆಯನ್ನು ನೀರಿನಲ್ಲಿ ಬೆರೆಸಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದರಿಂದ ಪೂಜೆ ಸಂಪನ್ನ ಆಗುತ್ತದೆ.

- Advertisement -

Latest Posts

Don't Miss