ಈ ಮೊದಲು ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ಕೊಟ್ಟಿದ್ವಿ. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ವೆಬ್‌ಸೈಟ್ ರೈಟರ್: ನಿಮಗೆ ಕೆಲ ವಿಷಯಗಳ ಬಗ್ಗೆ ಅಥವಾ ಪ್ರತಿದಿನ ಬರುವ ನ್ಯೂಸ್‌ಗಳ ಬಗ್ಗೆ ಆರ್ಟಿಕಲ್ ಬರೆದು ಅಭ್ಯಾಸವಿದ್ದರೆ ನೀವು ವೆಬ್‌ಸೈಟ್ ರೈಟರ್ ಆಗಬಹುದು. ನಿಮ್ಮದೇ ವೆಬ್‌ಸೈಟ್ ಶುರು ಮಾಡಬಹುದು. ಅಲ್ಲದೇ, ಬೇರೆಯವರ ವೆಬ್‌ಸೈಟ್‌ನಲ್ಲೂ ಕೆಲಸ ಮಾಡಬಹುದು. ಕ್ಯಾಚಿ ಹೆಡ್‌ಲೈನ್ಸ್ ಹಾಕುವುದು, ನಿಮ್ಮ ಸ್ಟೋರಿಗಳನ್ನ ಫೇಸ್‌ಬುಕ್ ಪೇಜ್, ಟ್ವಿಟರ್, ವಾಟ್ಸಪ್ ಇತ್ಯಾದಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವುದನ್ನ ಮಾಡಬೇಕಾಗುತ್ತದೆ.
ಯೋಗಾ ಕ್ಲಾಸ್: ಇಂದಿನ ಕೆಲ ಮಹಿಳೆಯರು ಯೋಗ ಮಾಡಲು ಇಚ್ಛಿಸುತ್ತಾರೆ. ಆದ್ರೆ ಅವರಿಗೆ ಹೇಗೆ ಯೋಗ ಮಾಡಬೇಕೆಂದು ತಿಳಿದಿರುವುದಿಲ್ಲ. ಹಾಗಾಗಿ ಅವರಿಗೊಬ್ಬ ಗುರುವಿನ ಅವಶ್ಯಕತೆ ಇರುತ್ತದೆ. ನೀವೇನಾದ್ರೂ ಒಳ್ಳೆಯ ಯೋಗ ಪಟುವಾಗಿದ್ರೆ, ನೀವು ಕೂಡಾ ಮನೆಯಲ್ಲೇ ಯೋಗಾ ಕ್ಲಾಸ್ ಶುರು ಮಾಡಬಹುದು.
ಕುಕಿಂಗ್ ಕ್ಲಾಸ್: ಅಮ್ಮಂದಿರು ಅಡುಗೆ ಮಾಡೋದ್ರಲ್ಲಿ ಎಕ್ಸಪರ್ಟ್ ಆಗೇ ಆಗಿರ್ತಾರೆ. ಹೊಸ ಹೊಸ ರುಚಿಗಳನ್ನ ಮಾಡಿ ಬಡಿಸೋದ್ರಲ್ಲೇ ಅವರಿಗೆ ಖುಷಿ ಇರುತ್ತೆ. ರುಚಿ ರುಚಿಯಾದ ಅಡುಗೆ ಮಾಡಿ ಬಡಿಸುವ ಕಲೆಯುಳ್ಳವರು ಅದನ್ನೇ ಉದ್ಯೋಗವನ್ನಾಗಿ ಮಾರ್ಪಾಡು ಮಾಡಿಕೊಳ್ಳಬಹುದು. ಯುವತಿಯರಿಗೆ ಕುಕಿಂಗ್ ಕ್ಲಾಸ್ ತೆಗೆದುಕೊಳ್ಳಬಹುದು.
ಯೂಟ್ಯೂಬರ್: ಈಗಂತು ಯೂಟ್ಯೂಬ್ ಕಾಲ. ಜನ ಟಿವಿ ನೋಡದಿದ್ರೂ ಯೂಟ್ಯೂಬ್ ಅಂತೂ ನೋಡೇ ನೋಡ್ತಾರೆ. ಹಲವು ಮಾಹಿತಿಗಳನ್ನ ಯೂಟ್ಯೂಬ್‌ನಿಂದಾನೇ ಪಡಿತಾರೆ. ಕೆಲವು ಯುವತಿಯರು, ಅಡುಗೆ ಮಾಡಲು, ಫ್ಯಾಷನ್ ಟಿಪ್ಸ್, ಡಾನ್ಸ್, ಮ್ಯೂಸಿಕ್ ಎಲ್ಲದಕ್ಕೂ ಯೂಟ್ಯೂಬನ್ನೇ ಅವಲಂಬಿಸಿರುತ್ತಾರೆ. ಹಾಗಾಗಿ ನಿಮಗೂ ಯಾವುದಾದರೂ ವಿಷಯದಲ್ಲಿ ಪರಿಣಿತಿ ಇದ್ದರೆ, ಅಂಥಹ ವಿಷಯವನ್ನು ಹಂಚಿಕೊಳ್ಳಲು ಯೂಟ್ಯೂಬ್ ಸ್ಟಾರ್ಟ್ ಮಾಡಿದ್ರೆ ಉತ್ತಮ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ