ಕೆಲವರು ಫೋಟೋ ತೆಗಿಯುವುದರಲ್ಲಿ ನಿಸ್ಸೀಮರಾಗಿರ್ತಾರೆ. ಆದ್ರೆ ಫೋಟೋಗ್ರಾಫರ್ ಆಗಿರಲ್ಲ. ಫೋಟೋಗ್ರಾಫರ್ ಆಗಬೇಕು ಅನ್ನೋ ಆಸೆಯೇನೋ ಇರುತ್ತೆ. ಆದ್ರೆ ಅದನ್ನ ಹೇಗೆ ಶುರು ಮಾಡುವುದು ಅನ್ನೋದರ ಬಗ್ಗೆ ಮಾಹಿತಿ ಇರಲ್ಲ. ಅಂಥವರಿಗೆ ಕೆಲ ಟಿಪ್ಸ್‌ಗಳನ್ನ ನಾವಿವತ್ತು ನೀಡಲಿದ್ದೇವೆ.

ವಿವಿಧ ರೀತಿಯ ಫೋಟೋಗ್ರಫಿ ಇದೆ. ಫ್ಯಾಷನ್ ಫೋಟೋಗ್ರಾಫರ್, ಇವೆಂಟ್ ಫೋಟೋಗ್ರಾಫರ್, ಫುಡ್ ಫೋಟೋಗ್ರಾಫರ್, ವೆಡ್ಡಿಂಗ್ ಫೋಟೋಗ್ರಾಫರ್, ಕನ್ಸರ್ಟ್ ಫೋಟೋಗ್ರಾಫರ್, ಬೇಬಿ ಫೋಟೋಗ್ರಾಫರ್, ಟ್ರಾವೆಲ್ ಫೋಟೋಗ್ರಾಫರ್, ವೈಲ್ಡ್ ಲೈಫ್ ಫೋಟೋಗ್ರಾಫರ್, ಪೆಟ್ ಫೋಟೋಗ್ರಾಫರ್ ಹೀಗೆ ವಿವಿಧ ತರಹದ ಫೋಟೋಗ್ರಾಫರ್ ಆಗಬಹುದು.
ನೀವು ಹವ್ಯಾಸಿ ಫೋಟೋಗ್ರಾಫರ್ ಆಗಿದ್ದಲ್ಲಿ, ಪ್ರೊಫೇಶನಲ್ ಫೋಟೋಗ್ರಾಫರ್ ಆಗಲು ಬಯಸುವವರು, ಈಗಾಗಲೇ ಫೋಟೋಗ್ರಾಫರ್ ಆಗಿ ಸ್ಟುಡಿಯೋ ಇಟ್ಟುಕೊಂಡವರ ಬಳಿ ಕೆಲ ತಿಂಗಳು ಅವರ ಅಸಿಸ್ಟೆಂಟ್ ಆಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ನೀವೂ ಪ್ರೊಫೆಶನಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.
ನೀವು ಫೋಟೋ ಸ್ಟುಡಿಯೋ ಇಡುವುದಿದ್ದರೆ, ನಿಮ್ಮ ಬಳಿ ಕೆಲ ವಸ್ತುಗಳಿರಬೇಕಾಗುತ್ತದೆ. ಪ್ರಿಂಟರ್, ಕಂಪ್ಯೂಟರ್, ಕ್ಯಾಮೆರಾ ಕಿಟ್, ಯೂನಿಟ್ ಮತ್ತು ಫೋಟೋ ತೆಗಿಯಲು ಬ್ಯಾಗ್ರೌಂಡ್ ಅವಶ್ಯಕತೆ ಇರುತ್ತದೆ. ಇನ್ನು ಕ್ಯಾಮೆರಾ ಕಿಟ್‌ನಲ್ಲಿ ಡಿಎಸ್ ಎಲ್‌ಆರ್ ಕ್ಯಾಮೆರಾ ಅವಶ್ಯಕವಾಗಿ ಇರಬೇಕಾಗುತ್ತದೆ. ಇದು ಔಟ್‌ಡೋರ್ ಇನ್‌ಡೋರ್ ಎರಡೂ ಫೋಟೋಗ್ರಫಿಯೂ ಬಳಸಹುದಾಗಿದೆ. ಇದರ ಜೊತೆ ಒಂದು ಫ್ಲ್ಯಾಶ್, ಮತ್ತು ಇದರ ರಿಚಾರ್ಜೇಬಲ್ ಶೆಲ್ ಬಳಸುವುದು ಕೂಡ ಮುಖ್ಯವಾಗಿದೆ.
ಇನ್ನು ಇಂಡೋರ್‌ನಲ್ಲಿ ಫೋಟೋಶೂಟ್ ಮಾಡುವಾಗ ಕ್ಯಾಮೆರಾ ಜೊತೆ ಟ್ರಿಗರ್ ಇರುವುದು ಮುಖ್ಯ. ಇದು ಯೂನಿಟ್‌ಗೆ ಸಂಬಂಧಿಸಿದ್ದಾಗಿರುತ್ತದೆ. ಇದಕ್ಕಾಗಿಯೇ ಯೂನಿಟ್ ಮುಖ್ಯವಾಗಿರುತ್ತದೆ. ಇನ್ನು ನೀವು ಬಳಸೋ ಕಂಪ್ಯೂಟರ್‌ನಲ್ಲಿ ಫೋಟೋಶಾಪ್ ಸಾಫ್ಟ್‌ವೇರ್ ಇರುವುದು ಮುಖ್ಯವಾಗಿರುತ್ತದೆ.
ನೀವು ಆನ್‌ಲೈನ್ ಮೂಲಕವೂ ಕೂಡ ನಿಮ್ಮ ಫೋಟೋಗ್ರಫಿ ಪ್ರತಿಭೆ ಅನಾವರಣಗೊಳಿಸಬಹುದು. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮೂಲಕವೂ ನೀವು ತೆಗೆದ ಫೋಟೋವನ್ನ ಶೇರ್ ಮಾಡಬಹುದು. ಈ ಮೂಲಕ ನಿಮ್ಮ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.