Hubballi News : ವಂಚನೆ ಪ್ರಕರಣಗಳಲ್ಲಿ ಆರೋಪಿಗಳ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ, ಇಡಿಯಿಂದ ಇಬ್ಬರು ಉದ್ಯಮಿಗಳ 40.22 ಕೋಟಿ ಆಸ್ತಿ ಜಪ್ತಿ ಮಾಡಿದೆ. ರಿಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಉದ್ಯಮಿಗಳಾದ ಶೀತಲ್ ಕುಮಾರ್, ಜಿನೇಂದ್ರ ಮಗ್ದುಮ್ ಎಂಬವರು ಸ್ಟಾರ್ ಏರ್ಲೈನ್ ಮಾಲೀಕ ಸಂಜಯ್ ಘೋಡಾವತ್ ಅವರಿಗೆ ವಂಚಿಸಿದ್ದ ಪ್ರಕರಣವಿದು.
ಶೀತಲ್ ಕುಮಾರ್ ಮತ್ತು ಜಿನೇಂದ್ರ ಮಗ್ದುಮ್ ಎಂಬವರು ರಿಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ 525 ಕೋಟಿ ಹಣ ತಮ್ಮ ವೈಯಕ್ತಿಕ ಖಾತೆಗಳು ಹಾಗೂ ಇತರರ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಸಂಜಯ್ ಘೋಡಾವತ್ ಅವರು ಹುಬ್ಬಳ್ಳಿಯ ಅಶೋಕನಗರ ಠಾಣೆ ಮೆಟ್ಟಿಲೇರಿದ್ದರು ಎನ್ನಲಾಗಿದೆ.
ಸಂಜಯ್ ದೂರಿನ ಅನ್ವಯ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದರು. ಬಹುಕೋಟಿ ವಂಚನೆ ಪ್ರಕರಣವಾಗಿರುವ ಕಾರಣ ಪ್ರಕರಣವನ್ನು ಅಶೋಕನಗರ ಠಾಣಾ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿದ್ದರು. ಅದರಂತೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಶೀತಲ್ ಕುಮಾರ್, ಜಿನೇಂದ್ರ ಅವರಿಗೆ ಸೇರಿರುವ ಮನೆ, ಅಪಾರ್ಟ್ಮೆಂಟ್, ವಿಂಡ್ಮಿಲ್ ಸೇರಿದಂತೆ 12 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಇದೆ.
Transgender : ಮಂಗಳಮುಖಿಯರಿಂದ ಸಾರ್ವಜನಿಕರಿಗೆ ಕಿರುಕುಳ : ಪ್ರಕರಣ ದಾಖಲು