- Advertisement -
www.karnatakatv.net:ಅಕ್ಟೋಬರ್ 30 ರಂದು 3 ಲೋಕಸಭಾ ಸ್ಥಾನ ಮತ್ತು ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಅಂತ ಚುನಾವಣಾ ಆಯೋಗ ತಿಳಿಸಿದೆ.
ದಾದ್ರಾ ಮತ್ತು ನಗರ ಹವೇಲಿ, ದಮನ್- ದಿಯು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಖಾಲಿ ಇರೋ ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳ ಸೀಟು ಭರ್ತಿಗೆ ಚುನಾವಣೆ ನಡೆಯಲಿದೆ.
ಅಸ್ಸಾಂನಲ್ಲಿ 5, ಪಶ್ಚಿಮ ಬಂಗಾಳದಲ್ಲಿ 4, ಮೇಘಾಲಯ, ಹಿಮಾಚಲ ಮತ್ತು ಮಧ್ಯಪ್ರದೇಶದಲ್ಲಿ ತಲಾ 3, ರಾಜಸ್ಥಾನ, ಕರ್ನಾಟಕ ಮತ್ತು ಬಿಹಾರದಲ್ಲಿ ತಲಾ 2 ಮತ್ತು ಆಂಧ್ರಪ್ರದೇಶ, ತೆಲಂಗಾಣ, ಮಿಜೋರಾಂ ನಾಗಾಲ್ಯಾಂಡ್, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ತಲಾ 1 ವಿಧಾನಸಭಾ ಸ್ಥಾನಕ್ಕೆ ಒಟ್ಟು 30 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಇನ್ನು ಇದೇ ನವೆಂಬರ್ ನಲ್ಲಿ ಮತ ಎಣಿಕೆ ನಡೆಯಲಿದೆ ಅಂತ ಚುನಾವಣಾ ಆಯೋಗ ಮಾಹಿತಿ ನೀಡಿದೆ.
- Advertisement -