- Advertisement -
www.karnatakatv.net : ರಾಯಚೂರು : ಕೋವಿಡ್ ೧೯ ಮೂರನೇ ಅಲೆ ಭೀತಿ ಹಿನ್ನಲೆ ರಾಜ್ಯಾದ್ಯಂತ ಜಾತ್ರೆ, ಹಬ್ಬ, ಹರಿದಿನಗಳನ್ನ ರದ್ದು ಪಡಿಸಲಾಗಿದೆ. ಅದೇ ರೀತಿ ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮದ ಕರಿಯಪ್ಪ ತಾತನ ಜಾತ್ರೆಯನ್ನೂ ಜಿಲ್ಲಾಡಳಿತದಿಂದ ರದ್ದು ಪಡಿಸಲಾಗಿದೆ.
ಆದ್ರೆ ಜಾತ್ರೆ ರದ್ದಾಗಿದ್ದ ಮಾಹಿತಿ ಇಲ್ಲದ ನೂರಾರು ಜನ ಇಂದು ಜಾತ್ರೆಗೆ ಆಗಮಿಸಿದ್ದರು. ಹಾಗೆ ಬಂದ ಭಕ್ತರಿಗೆ ಆ ಕರಿಯಪ್ಪ ತಾತನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ದೇಗುಲದ ಬಾಗಿಲು ಹಾಕಿದ್ದು ಒಂದು ಕಿಲೋ ಮೀಟರ್ ಅಂತರದಲ್ಲಿ ತೆಂಗಿನಕಾಯಿ ಒಡೆಯಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು
- Advertisement -