Wednesday, February 5, 2025

Latest Posts

ಸಾತ್ವಿಕ ಕ್ಯಾರೆಟ್- ಜೀರಾ ಸೂಪ್ ರೆಸಿಪಿ..

- Advertisement -

ಇವತ್ತು ನಾವು ಕ್ಯಾರೆಟ್- ಜೀರಾ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ವಿಶೇಷ ಅಂದ್ರೆ ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನ ಬಳಕೆ ಮಾಡಲ್ಲಾ. ಯಾಕಂದ್ರೆ ಇದು ಸಾತ್ವಿಕ ಸೂಪ್. ಹಾಗಾದ್ರೆ ಬನ್ನಿ, ಸಾತ್ವಿಕ ಸೂಪ್ ಆದಂಥ ಕ್ಯಾರೆಟ್-ಜೀರಾ ಸೂಪ್ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ.

ಬೇಕಾಗುವ ಸಾಮಗ್ರಿ- ಜೀರಿಗೆ, ಧನಿಯಾ ಪುಡಿ, ಹಸಿ ಶುಂಠಿ, 2 ಕೆಂಪು ಕ್ಯಾರೆಟ್, ಇಲ್ಲವಾದಲ್ಲಿ ಕೇಸರಿ ಕ್ಯಾರೆಟ್. ಒಂದು ಕಪ್ ಹೂಕೋಸು, ಒಂದು ಪಲಾವ್ ಎಲೆ, ಪೆಪ್ಪರ್ ಪುಡಿ, ಕೊತ್ತೊಂಬರಿ ಸೊಪ್ಪು, ಪುದೀನಾ ಎಲೆ, ಕಾಯಿ ಹಾಲು, ರುಚಿಗೆ ತಕ್ಕಷ್ಟು ಉಪ್ಪು.

ಒಂದು ಪಾತ್ರೆಯಲ್ಲಿ ಒಂದು ಟೀ ಸ್ಪೂನ್ ಜೀರಿಗೆ, ಒಂದು ಟೀ ಸ್ಪೂನ್ ಧನಿಯಾ ಪುಡಿ, ಚಿಕ್ಕ ತುಂಡು ಶುಂಠಿಯನ್ನ ತುರಿದು ಸೇರಿಸಿ, ಚೆನ್ನಾಗಿ ಹುರಿಯಿರಿ. ಇದಕ್ಕೆ ಎಣ್ಣೆ, ತುಪ್ಪ-ಬೆಣ್ಣೆ ಏನೂ ಹಾಕುವಂತಿಲ್ಲ. ಹಾಗೇ ಹುರಿಯಬೇಕು. ಮಸಾಲೆಯ ಘಮ ಬರುವವರೆಗೂ ಇದನ್ನ ಹುರಿಯಬೇಕು. ನಂತರ ಇದಕ್ಕೆ ಕ್ಯಾರೆಟ್ ತುಂಡುಗಳು, ಒಂದು ಕಪ್ ಹೂಕೋಸು ಸೇರಿಸಿ 5 ನಿಮಿಷ ಹುರಿಯಿರಿ.

ನಂತರ ಇದಕ್ಕೆ ಒಂದು ಕಪ್ ನೀರು ಮತ್ತು ಒಂದು ಪಲಾವ್ ಎಲೆ ಸೇರಿಸಿ, ಕುದಿಸಿ. 20 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ನೀವು ಇದನ್ನು ಅರ್ಧ ಪ್ಲೇಟ್ ಮುಚ್ಚಿ ಕುದಿಸಬೇಕು. 20 ನಿಮಿಷದ ಬಳಿಕ, ಅದರಲ್ಲಿ ಪಲಾವ್ ಎಲೆ ತೆಗೆದು, ಬೆಂದ ತರಕಾರಿಗಳನ್ನ ನೀರಿನ ಸಮೇತ, ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್ ಮಾಡಿ. ಇದನ್ನ ಬೌಲ್‌ಗೆ ಹಾಕಿ, ಉಪ್ಪು, ಮತ್ತು ಪೆಪ್ಪರ್ ಪೌಡರ್ ಹಾಕಿ ಮಿಕ್ಸ್ ಮಾಡಿ.

ಸರ್ವ್ ಮಾಡುವ ಮುನ್ನ ಇದಕ್ಕೆ ಒಂದು ಕಪ್ ಕಾಯಿ ಹಾಲನ್ನ ಮಿಕ್ಸ್ ಮಾಡಿ. ಕೊತ್ತೊಂಬರಿ ಸೊಪ್ಪು, ಪುದೀನಾ ಎಲೆ ಮತ್ತು ಜೀರಿಗೆಯಿಂದ ಗಾರ್ನಿಶ್ ಮಾಡಿ ಸರ್ವ್ ಮಾಡಿ. ಉಪ್ಪಿನ ಬದಲು ಸೇಂಧವ ಲವಣ ಬಳಸಿದ್ರೆ ಇನ್ನೂ ಉತ್ತಮ. ಇನ್ನು ಮಣ್ಣಿನ ಪಾತ್ರೆ ಬಳಸಿ ಈ ಸೂಪ್ ತಯಾರಿಸಿದ್ರೆ, ಪರಫೆಕ್ಟ್ ಸಾತ್ವಿಕ ಸೂಪ್ ತಯಾರಾಗತ್ತೆ.

- Advertisement -

Latest Posts

Don't Miss