ಕುಂಟನಿಗೆ 8 ಚೇಷ್ಟೆ ಆದ್ರೆ ಕುರುಡನಿಗೆ ನಾನಾ ಚೇಷ್ಟೆ ಅನ್ನೋದು ಗಾದೆ ಮಾತು. ಬೆಂಗಳೂರಲ್ಲಿ ಯೋಗ ಗುರು ಒಬ್ಬ ತನ್ನ ಚೇಷ್ಟೆಯಿಂದಲೇ 8 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರೋ ಆರೋಪ ಕೇಳಿ ಬಂದಿದೆ. ತನ್ನ ಯೋಗ ಸೆಂಟರ್‌ಗೆ ಬರುತ್ತಿದ್ದ ಬಾಲಕಿ, ಯುವತಿಯರನ್ನೇ ಈತ ಬಳಸಿಕೊಂಡಿದ್ದಾನೆ. 8 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ದೂರು ಈ ಯೋಗ...
ಧರ್ಮಸ್ಥಳ ಪ್ರಕರಣ ಕ್ಲೈಮ್ಯಾಕ್ಸ್‌ಗೆ ಬಂದಿತ್ತು ಅನ್ನುವಷ್ಟರಲ್ಲಿ ಯಾರೂ ಊಹಿಸಿರದ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಬಂಗ್ಲೆಗುಡ್ಡದಲ್ಲಿ ಸೆಪ್ಟೆಂಬರ್ 17ರಂದು ನಡೆದ ಶೋಧ ಕಾರ್ಯದಲ್ಲಿ, ಬರೋಬ್ಬರಿ 5 ತಲೆಬುರುಡೆ, 100 ಮೂಳೆಗಳು ಪತ್ತೆಯಾಗಿವೆ. ಸೌಜನ್ಯ ಮಾವ ವಿಠಲ ಗೌಡ ಹೇಳಿಕೆ ಆಧರಿಸಿ, ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ರು. ಇಡೀ ದಿನ ಪ್ರತ್ಯೇಕ 3 ತಂಡಗಳಾಗಿ, ಶೋಧ ಕಾರ್ಯ...
ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ಅಧಿಕಾರಿಗಳಿಗೆ ಬಂಗ್ಲೆಗುಡ್ಡದಲ್ಲಿ ಮಹಜರು ಮಾಡಲು, ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿದೆ. ಬಂಗ್ಲೆಗುಡ್ಡದಲ್ಲಿ ಹಲವು ಶವಗಳು ಇರುವುದಾಗಿ, ಸೌಜನ್ಯ ಮಾವ ವಿಠಲ್ ಗೌಡ ಹೇಳಿದ್ರು. ಕಾಡಿನ ಮಧ್ಯೆ ವಿಠಲ್ ಗೌಡ ಹೇಳಿದ ಪಾಯಿಂಟ್‌ಗಳು ಇರೋದ್ರಿಂದ, ಅನಮತಿ ಅಗತ್ಯವಾಗಿತ್ತು. ಈಗ ಪರ್ಮಿಷನ್ ಸಿಕ್ಕಿದ್ದು, ಮಹಜರು ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಸಿದ್ಧತೆ...
ಬ್ಯಾಂಕ್‌ನಲ್ಲಿ ಇಟ್ಟರೂ ಜನರ ಹಣ, ಒಡವೆಗೆ ಸೇಫ್ಟಿಯೇ ಇಲ್ಲದಂತಾಗಿದೆ. ಯಾಕಂದ್ರೆ, ವಿಜಯಪುರ ಜಿಲ್ಲೆಯ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ದರೋಡೆ, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಬರೋಬ್ಬರಿ 8 ಕೋಟಿ ನಗದು, 50 ಕೆ.ಜಿ.ಗೂ ಹೆಚ್ಚು ಚಿನ್ನವನ್ನು ದೋಚಲಾಗಿದೆ.
ಪಿಸ್ತೂಲ್, ಮಾರಕಾಸ್ತ್ರಗಳೊಂದಿಗೆ ಸಂಜೆ 6.30ರ ಸುಮಾರಿಗೆ, 5ಕ್ಕೂ ಹೆಚ್ಚು ಮುಸುಕುಧಾರಿ ದರೋಡೆಕೋರರು ಎಂಟ್ರಿ ಕೊಟ್ಟಿದ್ದಾರೆ. ಮಿಲಿಟರಿ ಮಾದರಿಯ...
ಧರ್ಮಸ್ಥಳ ಪ್ರಕರಣ ಸಂಬಂಧ, ಇಲ್ಲಿಯವರೆಗೆ 30ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆಯಂತೆ. ಅವುಗಳಲ್ಲಿ ಅರ್ಹ ದೂರುಗಳ ಸಮಗ್ರ ತನಿಖೆಗೆ, ಎಸ್‌ಐಟಿ ಮುಂದಾಗಿದೆ. ಅವುಗಳಲ್ಲಿ ನಾಪತ್ತೆ ಪ್ರಕರಣಗಳು, ಅಸಹಜ ಸಾವುಗಳು, ಶಂಕಿತ ಕೊಲೆ ಪ್ರಕರಣಗಳು, ಮೃತದೇಹಗಳನ್ನು, ಅಕ್ರಮವಾಗಿ ವಿಲೇವಾರಿ ಮಾಡಿರುವ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯಿತಿ ಹಾಗೂ ಪೊಲೀಸರು ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದಾರೆಂದು, ಹಲವರು ಕಂಪ್ಲೇಂಟ್ ಕೊಟ್ಟಿದ್ದಾರೆ....
ತಮಿಳುನಾಡಿನಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ಒಂದು ನವಜಾತ ಶಿಶುವಿನ ಜೀವವನ್ನೇ ಬಲಿ ತೆಗೆದುಕೊಂಡಿದೆ. ಕೇವಲ 40 ದಿನಗಳ ಮಗುವಿನ ಬಾಯಿನಲ್ಲಿ ತಾಯಿಯೇ ಟಿಶ್ಯೂ ಪೇಪರ್ ತುರುಕಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ ಭೀಕರ ಕೃತ್ಯ ಎಸಗಿರುವುದಾಗಿ ತಾಯಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಈ ಘಟನೆ ತಮಿಳುನಾಡಿನ...
ಶಿಕ್ಷಕಿಯ ಮೇಲೆ ಪೋಷಕರೊಬ್ಬರು ಥಳಿಸಿರುವ ಘಟನೆ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕ್ಷೇತ್ರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಕ್ಷಕಿ ಮಂಜುಳಾ ಬಂಗಾರಪೇಟೆ ತಾಲೂಕಿನ ಪಲವತಿಮ್ಮನಹಳ್ಳಿ ಗ್ರಾಮದ ನಿವಾಸಿ. ಕ್ಷೇತ್ರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡ್ತಿದ್ರು.
ಸೆಪ್ಟೆಂಬರ್ 11ರಂದು ಎಂದಿನಂತೆ, 6ನೇ ತರಗತಿ ಕೊಠಡಿಗೆ ಮಂಜುಳಾ...
ಹಾಸನದಲ್ಲಿ 9 ಅಮಾಯಕ ಜೀವಗಳ ಸಾವಿಗೆ ಕಾರಣನಾದ ಟ್ರಕ್ ಚಾಲಕ ಭುವನೇಶ್, ಸದ್ಯ ಎಲ್ಲಿದ್ದಾನೋ ಗೊತ್ತಿಲ್ಲ. ಪೊಲೀಸರು ಈ ಬಗ್ಗೆ ಸುಳಿವು ಬಿಟ್ಟು ಕೊಡ್ತಿಲ್ಲ. ಸೆಪ್ಟೆಂಬರ್ 12ರಂದು ಮೊಸಳೆ ಹೊಸಹಳ್ಳಿ ಬಳಿ, ಗಣೇಶ ಮೆರವಣಿಗೆ ವಿಸರ್ಜನಾ ಮೆರವಣಿಗೆ ಮೇಲೆ ಭುವನೇಶ್ ಟ್ರಕ್ ಹರಿಸಿದ್ದ. ಸದ್ಯ ಹಾಸನ, ಹೊಳೆನರಸೀಪುರ ನಗರ ವ್ಯಾಪ್ತಿಯಲ್ಲಿ, ಪರಿಸ್ಥಿತಿ ಬೂದಿ ಮುಚ್ಚಿದ...
ಹಾಸನ ಜಿಲ್ಲೆಯಲ್ಲಿ ನಡೆದ ಭೀಕರ ದುರಂತದ ಘಟನೆಯೂ ಯಾರು ಮರೆಯಲು ಸಾಧ್ಯವಾಗುತ್ತಿಲ್ಲ. 9 ಮಂದಿ ಬಲಿಯಾಗಿರುವ ಕರಾಳ ದೃಶ್ಯದ ಮಧ್ಯೆ ಬೆಂಗಳೂರಲ್ಲೂ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬೆಳ್ಳಂಬೆಳಗ್ಗೆ ನಡೆದ ಅಪಘಾತದಲ್ಲಿ, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಮುಖ್ಯ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಾಗರಬಾವಿ ಕಡೆಯಿಂದ ಬರುತ್ತಿದ್ದ ಲಾರಿ, ಸುಮ್ಮನಹಳ್ಳಿ ರಸ್ತೆ ಬಳಿ ನಿಯಂತ್ರಣ ತಪ್ಪಿದ್ದು,...
9 ಜನರ ಸಾವಿಗೆ ಕಾರಣನಾದ ಟ್ರಕ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಾಸನದ ಮೊಸಳೆ ಹೊಸಹಳ್ಳಿ ಬಳಿ ಸೆಪ್ಟೆಂಬರ್ 12ರ ರಾತ್ರಿ ಘೋರ ದುರಂತ ಸಂಭವಿಸಿತ್ತು. ಟ್ರಕ್ ಚಾಲಕ ಭುವನೇಶ್ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎನ್ನಲಾಗ್ತಿದೆ. ಈಗ ಆರೋಪಿ ಭುವನೇಶ್ ವಿರುದ್ಧ, ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಮೃತ ಈಶ್ವರ್ ಚಿಕ್ಕಪ್ಪ ಮಂಜೇಗೌಡ್ರು ದೂರು...