ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳ ವಾಕ್ಸಮರವೂ ಜೋರಾಗಿದೆ. ಬಿಜೆಪಿ ಮತ್ತು ಜೆಡಿಯು ಪಾರ್ಟಿಯನ್ನು, ಮೀಸಲಾತಿ ಕಳ್ಳರೆಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಬಿಹಾರದಲ್ಲಿ ನಿತಿಶ್ ಕುಮಾರ್ ಅವರದ್ದು ಏನೂ ಉಳಿದಿಲ್ಲ. ನಿತೀಶ್ ಕುಮಾರ್ ಅವರನ್ನು ಬಿಜೆಪಿ ಹೈಜಾಕ್ ಮಾಡಿದೆ. ಅಲ್ಲೇನಿದ್ರೂ, ಮೋದಿ, ಅಮಿತ್ ಶಾ ಸರ್ಕಾರವಿದೆ. ಭ್ರಷ್ಟ ಅಧಿಕಾರಿಗಳನ್ನು ಮುಂದಿಟ್ಟುಕೊಂಡು, ರಾಜ್ಯಭಾರ...
ರಾಜ್ಯಾದ್ಯಂತ ನಡೆಯುತ್ತಿರುವ ಜಾತಿಗಣತಿ ಹಲವು ಸಮಸ್ಯೆಗಳ ಕೇಂದ್ರಬಿಂದು ಆಗಿದೆ. ಸರ್ವರ್ ಸಮಸ್ಯೆಯಲ್ಲಿ ಫೀಲ್ಡಿಗಿಳಿದ ಶಿಕ್ಷಕರು ಪರದಾಡುತ್ತಿದ್ದಾರೆ. ಜಾತಿಗಣತಿಯ ಟ್ರಬಲ್ ಈಗ ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೂ ತಟ್ಟಿದೆ.
ಬೆಸ್ಕಾಂ ಮೀಟರ್ ರೀಡರ್ಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸ ನೀಡಲಾಗಿದೆ. ಬೆಸ್ಕಾಂ ಸಿಬ್ಬಂದಿ ಜಾತಿಗಣತಿಯಲ್ಲಿ ತಲ್ಲೀನರಾಗಿದ್ದ ಪರಿಣಾಮ ಆಗಸ್ಟ್ನಲ್ಲಿ ತಡವಾಗಿ ಮೀಟರ್...
2019ರಿಂದ 2023ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ, ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಇದೀಗ ಈ ಆಯೋಗದ ಅವಧಿ ಮುಗಿಯುವುದಕ್ಕೂ ಮುನ್ನವೇ ವಿಸರ್ಜನೆ ಮಾಡಲಾಗಿದೆ. ಸೆಪ್ಟೆಂಬರ್ 30ರವರೆಗೆ ಅಧಿಕಾರ ಅವಧಿ ವಿಸ್ತರಿಸುವಂತೆ ಆಯೋಗ ಮನವಿ ಮಾಡಿತ್ತು. ಈ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ ಎನ್ನಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯ 40%...
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ, 39 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಇರುವಾಗಲೇ ಎಐಸಿಸಿ ನಿಗಮ, ಮಂಡಳಿ ನೂತನ ಅಧ್ಯಕ್ಷರ ಪಟ್ಟಿಯನ್ನು ರವಾನಿಸಿದೆ.
ಈ ಪಟ್ಟಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕೂಡ ಸ್ಥಾನ ಪಡೆದಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ...
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ತೋರಿಸುವುದೇ ಬಿಜೆಪಿಯ ಏಕೈಕ ಕಾರ್ಯಸೂಚಿ ಎಂದು ಆರೋಪಿಸಿದರು. ಮಡಿಕೇರಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್ ಎಂಬುದನ್ನು ನಾವು ಸಮೀಕ್ಷೆಯಲ್ಲಿ ಸೇರಿಸಿದಂತಿಲ್ಲ. ಇದಕ್ಕೂ ಸಿದ್ದರಾಮಯ್ಯ ಅವರಿಗೆ ಸಂಬಂಧವಿಲ್ಲ....
ಜಿಂದಾಬಾದ್ ಜಿಂದಾಬಾದ್ ಸಿದ್ದರಾಮಯ್ಯ ಜಿಂದಾಬಾದ್. ಜಿಂದಾಬಾದ್ ಜಿಂದಾಬಾದ್ ಸಿದ್ದರಾಮಯ್ಯ ಜಿಂದಾಬಾದ್. ಜಿಂದಾಬಾದ್ ಜಿಂದಾಬಾದ್ ಕಾಂಗ್ರೆಸ್ ಜಿಂದಾಬಾದ್. ಈ ರೀತಿಯಾಗಿ ಬಹುಪಾರಕ್ ಕೂಗಿರುವುದು ಸಿಎಂ ಸಿದ್ದರಾಮಯ್ಯಗೆ. ಇದು ಎಲ್ಲೊ ಬೆಂಗಳೂರು, ಬೀದರ್, ರಾಯಚೂರು, ಮೈಸೂರು ಮತ್ತೆಲ್ಲೊ ಅಲ್ಲ. ಬಿಹಾರ ರಾಜ್ಯದಲ್ಲಿ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಟ್ನಾಗೆ ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿ ಏರ್ಪೋರ್ಟ್ಗೆ ಬರುತ್ತಿದ್ದಂತೆ...
93ರ ಇಳಿವಯಸ್ಸಲ್ಲೂ ರಾಜಕೀಯ ಹೋರಾಟ ನಿಲ್ಲಲ್ಲ ಎಂಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆ, ಜೆಡಿಎಸ್ಗೆ ಹೊಸ ಹುಮ್ಮಸ್ಸು ನೀಡಿದೆ. ಆದ್ರೆ, ಮಿತ್ರಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ದೇವೇಗೌಡರ ರಾಜಕೀಯ ಮುಗಿಯಿತೆಂಬ ಲೆಕ್ಕಾಚಾರದಲ್ಲಿದ್ದವರಿಗೆ, ಹೆಚ್ಡಿಡಿ ಮಾತು ಕೇಳಿ ನಡುಕ ಉಂಟಾಗಿದೆ. ರಾಜ್ಯಸಭೆಗೆ ವ್ಹೀಲ್ಚೇರ್ನಲ್ಲೇ ಹೋಗುತ್ತೇನೆ. ಅವಧಿ ಪೂರ್ಣಗೊಂಡರೂ ನನ್ನ ಹೋರಾಟ ನಿಲ್ಲುವುದಿಲ್ಲ ಎನ್ನುವ...
ರಾಜ್ಯದೆಲ್ಲೆಡೆ ರಸ್ತೆ ಗುಂಡಿಗಳ ವಿಚಾರ, ಭಾರೀ ಸದ್ದು ಮಾಡ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟಕ್ಕೆ ಕರೆ ಕೊಡಲಾಗಿದೆ. ಈ ಬಗ್ಗೆ ಜೆಡಿಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಜನಸಾಮಾನ್ಯರಿಗೆ ಸೂಕ್ತ ರಸ್ತೆ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ರಸ್ತೆ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿರುವ ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ, ಕರ್ನಾಟಕದ ಬಹು ದೊಡ್ಡ ವರ್ಗಗಳ ಜನರನ್ನು ನಮ್ಮ ಪಕ್ಷದತ್ತ ಸೆಳೆಯುವ ಮೂಲಕ ಸಹಾಯ ಮಾಡುತ್ತಿರುವುದಕ್ಕಾಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತರಾತುರಿಯಲ್ಲಿ ಜಾತಿ ಜನಗಣತಿ...
ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಸಮರ ಸಾರಿದ್ದಾರೆ. ರಾಜ್ಯ ಸರ್ಕಾರ ಕಾಟಾಚಾರಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದು, ಕಳಪೆ ಮಟ್ಟದ ಡಾಂಬರೀಕರಣ ಮಾಡಲಾಗ್ತಿದೆ ಎಂದು ಆರೋಪಿಸಿದೆ. ಹೀಗಾಗಿ ಬೆಂಗಳೂರಿನ ರಸ್ತೆಗಳನ್ನು ತಡೆದು, ಗುಂಡಿ ಮುಚ್ಚುವ ಅಭಿಯಾನವನ್ನು ಬಿಜೆಪಿಗರು ಕೈಗೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆಗೆ ಇಳಿದಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ನಾಯಕರು ರೋಡಿಗಿಳಿದಿದ್ದಾರೆ....
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...