ಹಾಸನ: ರಾಜ್ಯದ ಹೈವೋಲ್ಟೇಟ್ ಕ್ಷೇತ್ರ ಹಾಸನದಲ್ಲೂ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಕಾರ್ಯಕರ್ತರು ಸ್ವರೂಪ್ v/s ಪ್ರೀತಂಗೌಡ ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಹಾಸನದಲ್ಲಿ ಸ್ವರೂಪ್ ಮತ್ತು ಪ್ರೀತಂ ನಡುವೆ ಫುಲ್ ಫೈಟ್ ಇದ್ದು, ತಮ್ಮ ನಾಯಕ ಗೆಲ್ತಾರೆ ಎಂದು ಬೆಂಬಲಿಗರು ಬೆಟ್ಟಿಂಗ್ ಕಟ್ಟಿದ್ದಾರೆ. ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಹಾಸನದಲ್ಲಿ, ಈ ಬಾರಿ ಮತಗಳಿಕೆ, ಲೀಡ್, ಗೆಲುವು...
ಹಾಸನ: ಭಾರೀ ಕುತುಹಲ ಕೆರಳಿಸಿರುವ ಏಳು ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶಕ್ಕಾಗಿ ಜನತೆ ಕಾಯುತ್ತಿದ್ದು, ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಮತ ಏಣಿಕೆಯನ್ನು ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.
ನಗರದ ಡೈರಿ ವೃತ್ತ, ರಿಂಗ್ ರಸ್ತೆ ಬಳಿ ಇರುವ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವಣದಲ್ಲಿ...
ಹಾಸನ: ಈಗಾಗಲೇ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದು ಎಲ್ಲಾ ಮಂತಯಂತ್ರಗಳು ಹಾಸನ ನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಸ್ಟ್ರಾಂಗ್ ರೂಮ್ ನಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದು, ಮೇ.13ರ ರಂದು ನಡೆಯುವ ಮತ ಏಣಿಕೆ ಕಡೆ ಮತದಾರರು ಲೆಕ್ಕಚಾರದಲ್ಲಿ ತೊಡಗಿದ್ದಾರೆ.
ಶನಿವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುವ ಮತ ಏಣಿಕೆಗೆ ಸಕಲ...
ಬೆಂಗಳೂರು: ನಿನ್ನೆ ತಾನೇ ಎಲೆಕ್ಷನ್ ಮುಗಿದಿದೆ. ಮೊನ್ನೆ ತನಕ ಆಯಾ ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದರು. ಹಲವೆಡೆ ತೆರಳಿ ಪ್ರಚಾರವನ್ನೂ ಮಾಡಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನನ್ನದೊಂದು ವಿಶೇಷ ಮನವಿ:...
ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಹಾಗೂ ಇಡೀ ಕುಟುಂಬವೇ ಬಂದು ನನ್ನ ಮೇಲೆ ಸವಾರಿ ಮಾಡಿದ್ರು ಕೂಡ ಹಾಸನ ಜನತೆ ನನಗೆ ಆಶೀರ್ವದಿಸಿದ್ದಾರೆ ಎಂದು ಚುನಾವಣೆ ಮುಗಿದ ನಂತರ ಹಾಸನ ಶಾಸಕ, ಪ್ರೀತಂ ಗೌಡ ತಮ್ಮ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿಕೊಂಡರು.
ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ...
ಮಂಡ್ಯ: ಮಂಡ್ಯದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಠಿ ನಡೆಸಿದ್ದು, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯೂ ಹಲವು ಸಮೀಕ್ಷೆಗಳು ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ಹೇಳ್ತಾ ಇದ್ದವು. ಕುಮಾರಸ್ವಾಮಿ ಅವರ ಪಂಚರತ್ನ ಪ್ರವಾಸ ನಮಗೆ ಶಕ್ತಿ ನೀಡಿದೆ. ದೇವೇಗೌಡರು ಚುನಾವಣೆ ಪ್ರಚಾರ ಮಾಡಿರುವುದು ನಮಗೆ ಬಲ ತಂದಿದೆ....
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಸನದ ಹೊಳೆನರಸಿಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ, ಮತ ಚಲಾಯಿಸಿದರು. ಬೆಂಗಳೂರಿನಿಂದ ಹೊರಟ ಹೆಲಿಕಾಪ್ಟರ್ ಹೊಳೆನರಸಿಪುರದ, ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಲ್ಯಾಂಡಿಂಗ್ ಆಯಿತು. ಇದಾದ ಬಳಿಕ, ಹೊಳೆನರಸಿಪುರ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿ, ಮತಗಟ್ಟೆ ಸಂಖ್ಯೆ 251ರಲ್ಲಿ ಮತ ಚಲಾಯಿಸಿದರು. ಇವರೊಂದಿಗೆ ಪತ್ನಿ ಚೆನ್ನಮ್ಮ ಮತ ಚಲಾಯಿಸಿ, ದೇವೇಗೌಡರಿಗೆ ಸಾಥ್...
ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಮಂಡ್ಯದ ದೊಡ್ಡರಸಿಕೆರೆ ಗ್ರಾಮದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಈ ಬಗ್ಗೆ ತಮ್ಮ ಫೇಸ್‌ಬುಕ್ನಲ್ಲಿ ಪೋಸ್ಟ್ ಮಾಡಿರುವ ಸುಮಲತಾಾ, ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ. ಅಮೂಲ್ಯವಾದ ಮತದಾನ ಮಾಡುವ ಮೂಲಕ ಪ್ರಜ್ಞಾವಂತ ಅಭ್ಯರ್ಥಿಯ ಆಯ್ಕೆಯಲ್ಲಿ ಭಾಗಿಯಾಗಿರುವೆ. ತಾವೂ ಕೂಡ ಸಂಜೆ 6 ಗಂಟೆ ಒಳಗೆ...
ಹಾಸನ: ಹಾಸನದ ಮತಗಟ್ಟೆಯಲ್ಲಿ ಶಾಸಕ ಪ್ರೀತಂಗೌಡ ಮತ ಚಲಾಯಿಸಿದ್ದು, ಅವರಿಗೆ ಅವರ ಪತ್ನಿ ಸಾಥ್ ಕೊಟ್ಟಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಕೂಡಾ ಪತತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ, ಬಳಿಕ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
ಕೋಲಾರ : ಕೋಲಾರದ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್, ಕೋಲಾರದ ಸೆವೆಂತ್ ಡೇ ಅಡ್ವೆಟಿಂಸ್ಟ್ ಆಂಗ್ಲ ಪ್ರಾಥಮಿಕ...
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಶತಾಯುಷಿಗಳು, ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು, ಬಾಣಂತಿಯರು, ಗರ್ಭಿಣಿಯರು, ಮಧುಮಗಳು ಹೀಗೆ ಹಲವರು ಮತಗಟ್ಟೆ ತನಕ ಬಂದು, ಮತ ಚಲಾಯಿಸಿ ಹೋಗಿದ್ದಾರೆ.
ಅದೇ ರೀತಿ ಚಿಕ್ಕಬಳ್ಳಾಪುರದ ಬಾದಾಮ್ ಕುಟುಂಬಸ್ಥರೆಲ್ಲ ಸೇರಿ, ಮತಗಟ್ಟೆ ತನಕ ಬಂದು, ಮತ ಚಲಾಯಿಸಿದ್ದಾರೆ. ಅರೇ ಇದರಲ್ಲೇನು ಆಶ್ಚರ್ಯ ಎಂದು ಕೇಳುತ್ತಿದ್ದೀರಾ. ಇದರಲ್ಲಿ ಇರುವ ವಿಶೇಷತೆ ಅಂದ್ರೆ,...