ಬೆಂಗಳೂರು: ಈ ಬಾರಿಯೂ ಆರ್‌ಸಿಬಿ ಕಪ್ ಮಿಸ್ ಮಾಡಿಕೊಂಡಿದ್ದು, ಹಲವು ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ, ಹಲವರು ಕಪ್ ಗೆಲ್ಲಲಿ, ಬಿಡಲಿ, ನಾವೆಂದು ಆರ್‌ಸಿಬಿ ಫ್ಯಾನ್ಸ್ ಎಂದು ಹೇಳಿದ್ದಾರೆ.
ಅಲ್ಲದೇ, ನಿನ್ನೆ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್‌ನಲ್ಲಿ ಕೊಹ್ಲಿ ರನ್‌ಗಳ ಸುರಿಮಳೆ ಸುರಿಸಿದ್ದು, ಆರ್‌ಸಿಬಿಗರು ಫುಲ್ ಫೀದಾ ಆಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಆರ್‌ಸಿಬಿ ಮ್ಯಾಚ್ ನೋಡಲು, ತಮ್ಮ ಪುತ್ರಿ ಐಶ್ವರ್ಯ ಮತ್ತು ಮಗನೊಂದಿಗೆ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದರು.
ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದು, ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಐಪಿಎಲ್ ಪಂದ್ಯ ವೀಕ್ಷಿಸಿದೆ. ನಮ್ಮ ಹುಡುಗರು ಈ ಸಾರಿ ಸೋತಿರಬಹುದು, ಆದರೆ ಅತ್ಯುತ್ತಮ ಆಟದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಏನೇ ಆದ್ರು ನನ್ನ ಫೇವರಿಟ್ ಆರ್‌ಸಿಬಿ ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತೆ. ನಿರಾಸೆ ಬೇಡ, ಆಶಾವಾದವಿರಲಿ ಎಂದು ಬರೆದುಕೊಂಡಿದ್ದಾರೆ.
ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಂತರ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ #IPL ಪಂದ್ಯ ವೀಕ್ಷಿಸಿದೆ.ನಮ್ಮ ಹುಡುಗರು ಈ ಸಾರಿ ಸೋತಿರಬಹುದು, ಆದರೆ ಅತ್ಯುತ್ತಮ ಆಟದಿಂದ ಎಲ್ಲರ ಹೃದಯ ಗೆದ್ದಿದ್ದಾರೆ.
ಏನೇ ಆದ್ರು ನನ್ನ ಫೇವರಿಟ್ #RCB
ಕಪ್ ನಮ್ಮದಾಗುವ ಸಮಯ ಬಂದೇ… pic.twitter.com/WvqzXCLhdH— DK Shivakumar (@DKShivakumar) May 22, 2023