ಬಿಗ್‌ಬಾಸ್ ಕನ್ನಡ 12ನೇ ಸೀಸನ್‌ನಲ್ಲಿ, ಯಾರೂ ಊಹಿಸಿರದ ಸ್ಪರ್ಧಿಗಳು ಬಂದಿದ್ದಾರೆ. ಜೊತೆಗೆ ಪ್ರತಿ ಬಾರಿ 17 ಅಥವಾ 18 ಸ್ಪರ್ಧಿಗಳು ಬರೋದು ವಾಡಿಕೆ. ಆದರೆ, ಈ ಬಾರಿ ಸ್ಪರ್ಧಿಗಳ ಸಂಖ್ಯೆ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಇದೆ. ಈ ಅನುಮಾನಕ್ಕೆ ಕಾರಣವಾಗಿರೋದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪೋಸ್ಟರ್.
ಮೂವರ ಹೆಸರು ರಿವೀಲ್ ಮಾಡಿ, ಮಿಕ್ಕಿದವರು ಯಾರು ಎಂದು,...
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ, ಅತೀ ಹೆಚ್ಚಾಗಿ ಕೊಪ್ಪಳ ಜಿಲ್ಲೆಯ ಜನರು ಭಾಗಿಯಾಗಿದ್ದಾರೆ. ಸಮೀಕ್ಷೆಯ ಪ್ರಾರಂಭದಲ್ಲಿ ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ಎದುರಾಗಿತ್ತು.
ಆದರೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ, ಯಲಬುರ್ಗಾ, ಕುಷ್ಟಗಿ, ಕುಕನೂರ, ಗಂಗಾವತಿ ತಾಲೂಕುಗಳಲ್ಲಿ, ಅತ್ಯಂತ ವೇಗವಾಗಿ ಸಮೀಕ್ಷೆ ಸಾಗಿದೆ. ದಸರಾ ರಜೆಯಲ್ಲೂ ಜಾತಿ ಗಣತಿ ಕಾರ್ಯದಲ್ಲಿ ಶಿಕ್ಷಕರು ಭಾಗಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ...
ಎಲ್ಲಾ ಭಾಷೆಯ ಬಿಗ್‌ಬಾಸ್ ಸೀಸನ್‌ಗಳಲ್ಲಿ, ಗ್ರಾಮೀಣ ಪ್ರತಿಭೆಗಳ ಹವಾ ಶುರುವಾಗಿದೆ. ಬರೀ ಸ್ಟಾರ್‌ಗಳನ್ನೇ ಕರೆಸ್ತಾರೆ ಅನ್ನೋ ಆರೋಪಗಳ ಮಧ್ಯೆ, ಹಳ್ಳಿ ಸೊಗಡಿಗೂ ಆದ್ಯತೆ ಕೊಡಲಾಗ್ತಿದೆ. ಕೃಷಿ ಕೆಲಸ, ಕೂಲಿ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ ಸಾಮಾನ್ಯ ಮಹಿಳೆಯರು, ಯೂಟ್ಯೂಬರ್‌ಗಳಾಗಿ ಇದೀಗ ಬಿಗ್ ಮನೆಗೂ ಕಾಲಿಟ್ಟಿದ್ದಾರೆ.
ತೆಲುಗಿನ ಗಂಗವ್ವ ಭಾರತೀಯ ಯೂಟ್ಯೂಬರ್. ಮೈ ವಿಲೇಜ್ ಶೋನಲ್ಲಿ. ಗ್ರಾಮೀಣ ಸಂಸ್ಕೃತಿಯನ್ನು...
ಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಎಂಟ್ರಿಯಾಗಿದ್ದಾರೆ. ರೈತರ ಹೋರಾಟಕ್ಕೆ ಜೆಡಿಎಸ್ ಬೆಂಬಲ ಘೋಷಿಸಿದ್ದು, ಪ್ರತಿಭಟನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿದ್ದಾರೆ. ಜೆಡಿಎಸ್ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್‌ಡಿಕೆ ಭಾಗಿಯಾಗಿದ್ರು. ಈ ವೇಳೆ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅಕ್ಷರಶಃ ಗುಡುಗಿದ್ದಾರೆ.
ಡಿ.ಕೆ....
ಬಿಡದಿಯಲ್ಲಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಅನ್ನದಾತರ ಪರ ನಿಂತಿದ್ದಾರೆ.
ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ,
ಸರ್ಕಾರ ಎಷ್ಟೇ ದಬ್ಬಾಳಿಕೆ ಮಾಡಿದರು ರೈತರಿಂದ ಒಂದಿಂಚೂ ಭೂಮಿಯನ್ನ ಕಸಿದುಕೊಳ್ಳಲು ನಾವು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಸರ್ಕಾರ ಟೌನ್‌ಶಿಪ್...
Political News: ಕಲ್ಯಾಣ ಕರ್ನಾಟಕದಲ್ಲಿ, ಉತ್ತರಕರ್ನಾಟಕದ ಬೇರೆ ಬೇರೆ ಭಾಗದಲ್ಲಿ ವಿಪರೀತ ಮಳೆಯಿಂದಾಗಿ, ಬದುಕು ಬರ್ಬರವಾಗಿದೆ. ಭಾರೀ ಪ್ರವಾಹ ಹಿನ್ನೆಲೆ ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು, ಬೇಸರ ವ್ಯಕ್ತಪಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ಕಲಬುರಗಿ, ವಿಜಯಪುರ, ಬೀದರ್, ರಾಯಚೂರು ಮತ್ತು ಕೊಪ್ಪಳ ಸೇರಿ ವಿವಿಧ...
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹನಮಂತಾಪುರ ಗ್ರಾಮದಲ್ಲಿ ವಿಚಿತ್ರ ಗಂಭೀರ ಘಟನೆ ನಡೆದಿದೆ. ಕುಡಿಯುವ ನೀರು ಮತ್ತು ಸ್ವಚ್ಛತಾ ಸಮಸ್ಯೆಯಿಂದ ನರಳುತ್ತಿದ್ದ ಗ್ರಾಮಸ್ಥರ ಕೋಪ, ಕೊನೆಗೆ ತಾಲೂಕು ಪಂಚಾಯಿತ EO ಮತ್ತು PDO ಅನ್ನ ಕೋಣೆಯೊಳಗೆ ಕೂಡಿ ಹಾಕುವ ಮಟ್ಟಿಗೆ ತಲುಪಿದೆ. ಈ ದೃಶ್ಯಗಳೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಇತ್ತೀಚೆಗೆ ಚಾಮರಾಜನಗರದಲ್ಲಿ...
ದಸರಾ ಉತ್ಸವ ಎಂದರೆ ಮೈಸೂರಿನ ಅರಮನೆ, ದೀಪಗಳ ಅಲಂಕಾರ, ಜಂಬೂ ಸವಾರಿ. ಇದರ ನೆನಪು ಬರೋದು ಸಹಜ. ಅದರಂತೆ ಉತ್ತರ ಕರ್ನಾಟಕದಲ್ಲಿಯೂ ದಸರಾ ಹಬ್ಬ ಭಕ್ತಿ, ಸಂಸ್ಕೃತಿ ಮತ್ತು ವೈಭವದೊಂದಿಗೆ ಆಚರಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಮಹಾನವಮಿ ಹಾಗೂ ದಸರಾ ಉತ್ಸವವು ನಡೆಯುತ್ತಿದೆ.
ನಾಲ್ಕು ದಶಕದ...
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮೊದಲೇ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಹಲವಾರು ರಸ್ತೆಗಳು ಗುಂಡಿಬಿದ್ದ ಸ್ಥಿತಿಯಲ್ಲಿವೆ. ಹೀಗಿರುವಾಗ ಪ್ರತಿಷ್ಠಿತ ಅಂಗಡಿಗಳ ಮಾಲೀಕರು ಸಾರ್ವಜನಿಕರ ಸಂಚಾರದ ಹಕ್ಕನ್ನು ಉಲ್ಲಂಘಿಸಿ, ಫುಟ್ ಪಾತ್ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಹುಬ್ಬಳ್ಳಿಯ ಗೋಕುಲರಸ್ತೆಯಲ್ಲಿಯೇ ಫುಟ್ ಪಾತ್ ಒತ್ತುವರಿ ಮಾಡಲಾಗಿದೆ. ಇಲ್ಲಿನ ಮಾಂಗಲ್ಯ ಮಳಿಗೆಯ...
Dharwad News: ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಬಳಿಯ ಬೈಪಾಸ್ ರಸ್ತೆಯಲ್ಲಿ ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಅನೇಕರು ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಬೆಳಗಾವಿಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಲಾರಿಗೆ ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ನಾಲ್ವರು ಗಾಯಗೊಂಡಿದ್ದಾರೆ. ಒಂದು ಲಾರಿ ಡ್ರೈವರ್ ಲಾರಿಯಲ್ಲೇ ಸಿಲುಕಿಕೊಂಡಿದ್ದ....
ದಬ್ಬಳ್ಳಿಕಟ್ಟೆಯಲ್ಲಿ ಅಂಬಾರಿ ಆನೆ ಅರ್ಜುನನ ಪ್ರತಿಮೆ ಲೋಕಾರ್ಪಣೆ. ಹಲವು ಬಾರಿ ಮುಂದೂಡಿಕೆಯಾದ ಉದ್ಘಾಟನೆಗೆ ಇಂದು ಚಾಲನೆ ಸಿಗಲಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಮೀಸಲು ಅರಣ್ಯ...