ಇತ್ತೀಚೆಗೆ ಗೋವಾದ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ ಸಮಾರೋಪ ವೇದಿಕೆಯಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜ್ಯದ ಚಿತ್ರಪರಿಸರದಲ್ಲಿ ಚರ್ಚೆ ಏರ್ಪಡಿಸಿದೆ. ‘ಕಾಂತಾರ’ ಚಿತ್ರ ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಸನ್ಮಾನ ಮಾಡುವ ಸಂದರ್ಭದಲ್ಲಿ, ಬಾಲಿವುಡ್ ನಟ ರಣವೀರ್ ಸಿಂಗ್ ವೇದಿಕೆಯಲ್ಲಿ ದೈವದ ಅನುಕರಣೆ ಮಾಡಿದ್ದರು.
ಈ ಸಂದರ್ಭ ವೇದಿಕೆಯ ಮುಂಭಾಗ...
ಈ ವರ್ಷ ದಕ್ಷಿಣ ಭಾರತದಲ್ಲಿ 1,06,000 ಟೊಯೋಟಾ ಕಾರುಗಳು ಮಾರಾಟಗೊಂಡಿದ್ದು, ಇದರಲ್ಲಿ ಬೆಂಗಳೂರಿನ ಪಾಲು ಶೇ.31 ರಷ್ಟಿದೆ ಅಂತ ಟೊಯೋಟಾ ಕಂಪನಿಯ ದಕ್ಷಿಣ ಭಾರತದ ಉಪಾಧ್ಯಕ್ಷ ವೈಸ್ಲೈನ್ ಸಿಗಮಣಿ ತಿಳಿಸಿದ್ದಾರೆ. ಬಿಡದಿಯ ಕಾರು ಉತ್ಪಾದನಾ ಘಟಕದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ದೇಶವ್ಯಾಪಿ ಕಾರು ಖರೀದಿಯಲ್ಲಿ ರಾಜ್ಯದ ಪ್ರಮಾಣ ಶೇ.11ರಷ್ಟಿದೆ, ಮತ್ತು ಕಳೆದ...
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ, ಶಾಲಾ–ಕಾಲೇಜುಗಳ ಸಮಯವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ.
ಚಳಿಗಾಲದ ತೀವ್ರತೆ ಕಡಿಮೆಯಾಗುವವರೆಗೆ LKG ಯಿಂದ PUC ವರೆಗೆ ಇರುವ ಎಲ್ಲಾ ತರಗತಿಗಳನ್ನು ಬೆಳಗ್ಗೆ 9.30ರಿಂದ ಆರಂಭಿಸುವಂತೆ ಆಯೋಗ ಸಲಹೆ ನೀಡಿದೆ. ಸದ್ಯ ರಾಜ್ಯದಲ್ಲಿ ಚಳಿ...
ರಾಜ್ಯದಲ್ಲಿ ಪದವಿಪೂರ್ವ, ಸ್ನಾತಕ ಹಾಗೂ ಸ್ನಾತಕೋತ್ತರ ಹಂತದ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗಂಭೀರ ಸಮಸ್ಯೆ ಎದುರಾಗಿದೆ. ಅನುದಾನದ ಕೊರತೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 1.60 ಲಕ್ಷ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಯಾಗದೆ ಬಾಕಿಯಾಗಿದೆ.
ಇದರಿಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸುವುದೇ ಕಷ್ಟವಾಗುವ ಆತಂಕ ಎದುರಿಸುತ್ತಿದ್ದಾರೆ. ರಾಜ್ಯ...
ಯಾವುದೇ ಪ್ರತಿಫಲ ಬಯಸದೆ ಕಿಡ್ನಿ ದಾನ ಮಾಡಲು ಮುಂದಾಗಿದ್ದ ಬೆಂಗಳೂರಿನ ವೈದ್ಯೆಯೊಬ್ಬರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಅನುಮತಿ ನೀಡಿದೆ. ಆಸ್ಪತ್ರೆ ಹಾಗೂ ಅಂಗಾಂಗ ಕಸಿ ಸಮಿತಿ ಅವಕಾಶ ನೀಡಿರಲಿಲ್ಲ ಎಂಬ ಕಾರಣದಿಂದ ವೈದ್ಯೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅಪರೂಪದ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ವೈದ್ಯೆಯ ಮನವಿಯನ್ನು ಪುರಸ್ಕರಿಸಿದೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ...
ಮೈಸೂರು ಜಿಲ್ಲೆಯ ವಿವಿಧ ಬ್ಯಾಂಕ್ಗಳಲ್ಲಿ ವಾರಸುದಾರರಿಲ್ಲದ ಠೇವಣಿ ಹಣವಾಗಿ ಸುಮಾರು ₹157 ಕೋಟಿ ಇರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿದೆ. ಈ ಹಣವನ್ನು ಅರ್ಹ ಗ್ರಾಹಕರು ಅಥವಾ ವಾರಸುದಾರರು ಪಡೆದುಕೊಳ್ಳುವಂತೆ ಆರ್ಬಿಐ ಅವಕಾಶ ನೀಡಿದೆ.
ಕೇಂದ್ರ ಸರ್ಕಾರದ ‘ನಿಮ್ಮ ಹಣ – ನಿಮ್ಮ ಅಧಿಕಾರ’ ಅಭಿಯಾನದಡಿ, ವರ್ಷಗಳಿಂದ ವಾಪಸ್ ಪಡೆಯದೇ ಉಳಿದಿರುವ ಹಣದ ಬಗ್ಗೆ ಗ್ರಾಹಕರಿಗೆ...
Tumakuru: ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ನೆಲ್ಲಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡೆಹಳ್ಳಿ ಬುರುಡೆಘಟ್ಟ ಅಕ್ಕ ಪಕ್ಕ ಗ್ರಾಮಗಳಲ್ಲಿ ಚಿರತೆ ಹಾವಳಿ ಜೋರಾಗಿತ್ತು.
ಕೆಲ ದಿನಗಳ ಹಿಂದೆ ಯಡೆಹಳ್ಳಿ ಗ್ರಾಮದ ಭಾರತಮ್ಮ ತೋಟದ ಮನೆಯಲ್ಲಿ ಮೇಕೆಗಳ ಮೇಲೆ ದಾಳಿ ನಡೆಸಿ ರಕ್ತ ಹಿರಿತ್ತು. ಹಾಗಾಗಿ ಇಲ್ಲಿನ ಗ್ರಾಮಸ್ಥರು ಭಯ ಭೀತರಾಗಿ ಜೀವನ ಸಾಗಿಸುತ್ತಿದ್ದರು. ಹಾಗೂ ದನ...
Tumakuru: ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ದುಷ್ಕರ್ಮಿಗಳು ಬಾಂಬ್ ಸ್ಪೋಟದ ಬೆದರಿಕೆಯ ಸಂದೇಶ ರವಾನಿಸಿದ ಘಟನೆ ನಡೆದಿದೆ.
ಈ-ಮೇಲ್ ಮೂಲಕ ಸಂದೇಶ ರವಾನೆ ಮಾಡಲಾಗಿದ್ದು, ಇಂದು ಮುಂಜಾನೆ ಬೆಳಗ್ಗೆ 6.59 ಕ್ಕೆ ಮೇಲ್ ತಲುಪಿದೆ. ಈ ಮೇಲ್ ಕಂಡ ಕೂಡಲೇ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಕೂಡಲೇ ಪೊಲೀಸರು ಜಿಲ್ಲಾಧಿಕಾರಿಗಳ ಕೊಠಡಿ, ಆಪ್ತ ಸಹಾಯಕರ...
ಸ್ನೇಹಿತರೊಂದಿಗೆ ಲಾಡ್ಜ್ನಲ್ಲಿ ಪಾರ್ಟಿ ನಡೆಸುತ್ತಿದ್ದ ವೇಳೆ ಪೊಲೀಸರು ಬಂದಿದ್ದಾರೆ ಎಂಬ ಕಾರಣಕ್ಕೆ ಗಾಬರಿಗೊಂಡ ಯುವತಿಯೊಬ್ಬಳು ಬಾಲ್ಕನಿಯಿಂದ ಕೆಳಗೆ ಇಳಿಯಲು ಯತ್ನಿಸಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾರತ್ತಹಳ್ಳಿ ನಿವಾಸಿ ವೈಷ್ಣವಿ (21) ಗಾಯಗೊಂಡ ಯುವತಿ. ಅವರನ್ನು ತಕ್ಷಣವೇ ಮಹಾನಂದಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುಂದನಹಳ್ಳಿ...
ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಮತ್ತು ಅಕ್ರಮ ಪ್ರಯಾಣ ಪ್ರಕರಣಗಳು ಗಣನೀಯವಾಗಿ ಪತ್ತೆಯಾಗಿದ್ದು, ಇಲಾಖೆಗೆ ದಂಡದ ರೂಪದಲ್ಲಿ ಬಂದ ಆದಾಯ ಹೆಚ್ಚಳವಾಗಿದೆ.
2025-26ರ ಪ್ರಸಕ್ತ ಆರ್ಥಿಕ ವರ್ಷದ 2025 ನವೆಂಬರ್ ತಿಂಗಳಿನಲ್ಲಿ ಒಟ್ಟು 67,000 ಟಿಕೆಟ್...
Political News: ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಂಗಾಳದಲ್ಲಿ ಇಷ್ಟು ದಿನ ದೀದಿ ಮಮತಾ ಬ್ಯಾನರ್ಜಿ ಆಡಳಿತವಿತ್ತು....