Political News: ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಂಗಾಳದಲ್ಲಿ ಇಷ್ಟು ದಿನ ದೀದಿ ಮಮತಾ ಬ್ಯಾನರ್ಜಿ ಆಡಳಿತವಿತ್ತು. ಆದರೆ ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಬಂಗಾಳದ ಜನರ ಸ್ಪಷ್ಟ ಜನಾದೇಶ – ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣ ಮತ್ತು ಅವರ ವಿಕಸಿತ ಭಾರತದ ಪರಿಕಲ್ಪನೆಗೆ ಬಂಗಾಳದ ಜನತೆ ಸುಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ್ದಾರೆ, ಭಾರತೀಯ ಜನತಾ ಪಾರ್ಟಿಗೆ ನಿರ್ಣಾಯಕ ಜನಾದೇಶ ನೀಡಿದ್ದಾರೆ. ಇದು ಕೇವಲ ಚುನಾವಣಾ ವಿಜಯವಲ್ಲ, ಹಿಂಸೆ, ಅರಾಜಕತೆ, ಅಶಾಂತಿಯನ್ನು ಕೈಬಿಟ್ಟು ಜನತೆ ಪ್ರಗತಿ, ಶಾಂತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ನಡೆಯಲು ತೀರ್ಮಾನಿಸಿದ್ದಾರೆ. ಅಸಾಧ್ಯವನ್ನು ಸಾಧ್ಯವಾಗಿಸಿದ ಹೆಮ್ಮೆಯ ನಾಯಕ ಶ್ರೀ ನರೇಂದ್ರ ಮೋದಿ ಜೀ ಹಾಗು ಅವರನ್ನು ನಂಬಿದ ಬಂಗಾಳದ ಜನತೆಗೆ ಅಭಿನಂದನಾಪೂರ್ವಕ ಕೃತಜ್ಞತೆಗಳು ಎಂದು ವಿಜಯೇಂದ್ರ ಅಭಿನಂದಿಸಿದ್ದಾರೆ.
ದಶಕಗಳ ಕಾಲ, ಬಂಗಾಳದ ಜನರು ಭಯದಿಂದ ಬದುಕುತ್ತಿದ್ದರು. ಮಮತಾ ಬ್ಯಾನರ್ಜಿಯವರ ಟಿಎಂಸಿಯ ಕ್ರೂರ ಆಡಳಿತದಲ್ಲಿ, ಪ್ರಜಾಪ್ರಭುತ್ವವನ್ನು ನಿಗ್ರಹಿಸಲಾಗಿತ್ತು, ಹಿಂಸೆ, ಹತ್ಯೆ, ಹಲ್ಲೆಗಳ ಮೂಲಕ ಜನಧ್ವನಿಯನ್ನು ನಿಗ್ರಹಿಸಲಾಗಿತ್ತು ಮತ್ತು ಹಿಂಸಾಚಾರವೇ ಎಲ್ಲ ಭಿನ್ನಾಭಿಪ್ರಾಯಕ್ಕೆ ಉತ್ತರ ಎನ್ನುವಂತಾಗಿತ್ತು. ಆದರೆ ಈ ಬಾರಿ ಬಂಗಾಳದ ಜನರು ಹೆದರಲಿಲ್ಲ. ಅವರು “ಭಯ ಇಲ್ಲ, ಭರವಸೆ ಇದೆ” ಎಂದರು, ಬಿಜೆಪಿಯಲ್ಲಿ ನಂಬಿಕೆ ಮೋದಿ ಜಿ ನಾಯಕತ್ವದಲ್ಲಿ ನಂಬಿಕೆಯಿಟ್ಟರು ಮತ್ತು ಆ ನಂಬಿಕೆಯೊಂದಿಗೆ ಐತಿಹಾಸಿಕ ಜನಾದೇಶವನ್ನು ನೀಡಿದರು.
ಈ ಅಭೂತಪೂರ್ವ, ಐತಿಹಾಸಿಕ ಗೆಲುವಿಗೆ, ನಮ್ಮ ರಾಷ್ಟ್ರೀಯ ನಾಯಕರು, ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆಗಳು. ಅವರನ್ನು ಆಧುನಿಕ ಭಾರತದ ಚಾಣಕ್ಯ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಈ ಗೆಲುವಿನೊಂದಿಗೆ ಅವರು ಮತ್ತೆ ಸಾಬೀತುಪಡಿಸಿದ್ದಾರೆ. ಅವರ ಕಾರ್ಯತಂತ್ರ ಮತ್ತು ಅವಿರತ ಬದ್ಧತೆ ಅಸಾಧ್ಯವನ್ನು ಸಾಧ್ಯವಾಗಿಸಿದೆ. ಬಂಗಾಳದಲ್ಲಿ ಪಕ್ಷಕ್ಕೆ ಈ ಅದ್ಭುತ ಫಲಿತಾಂಶಕ್ಕೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬಿನ್ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಹಾಗೆಯೇ, ಪಶ್ಚಿಮ ಬಂಗಾಳದ ನಮ್ಮ ನಾಯಕ ಸುವೆಂದು, ಪಕ್ಷದ ರಾಜ್ಯಾಧ್ಯಕ್ಷ ಸಾಮಿಕ್ ಮತ್ತು ಈ ವಿಜಯೋತ್ಸವದ ಅಭಿಯಾನವನ್ನು ದಿಟ್ಟತನ, ನಿರಂತರ ಪರಿಶ್ರಮ ಮತ್ತು ದೃಢನಿಶ್ಚಯದಿಂದ ನಡೆಸಿದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಅಭಿನಂದನೆಗಳು. ಪ್ರಮುಖವಾಗಿ ಈ ಗೆಲುವು ಬಂಗಾಳದ ಜನರದ್ದು! ಎಂದು ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಬಂಗಾಳದಲ್ಲಿ ಅರಳಿದ ಕಮಲ – ಅಸಾಧ್ಯವಾದದನ್ನು ಸಾಧ್ಯವಾಗಿಸಿದ ಮೋದಿಜೀ ನಾಯಕತ್ವ
ಬಂಗಾಳದ ಜನರ ಸ್ಪಷ್ಟ ಜನಾದೇಶ – ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಯವರ ಅಭಿವೃದ್ಧಿ ರಾಜಕಾರಣ ಮತ್ತು ಅವರ ವಿಕಸಿತ ಭಾರತದ ಪರಿಕಲ್ಪನೆಗೆ ಬಂಗಾಳದ ಜನತೆ ಸುಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ್ದಾರೆ, ಭಾರತೀಯ ಜನತಾ ಪಾರ್ಟಿಗೆ ನಿರ್ಣಾಯಕ ಜನಾದೇಶ… https://t.co/9uMJUzdnw5
— Vijayendra Yediyurappa (@BYVijayendra) May 4, 2026




