ತನ್ನ ಪಾಡಿಗೆ ತಾನು ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಜಿಮ್ ಟ್ರೈನರ್ ಒಬ್ಬ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಡೆದಿದೆ. ಆಟವಾಡುತ್ತಿದ್ದ ಬಾಲಕನನ್ನು ಪಕ್ಕದ ಮನೆಯಿಂದ ಹೊರಗೆ ಬಂದ ವ್ಯಕ್ತಿ ಕಾಲಿನಿಂದ ಒದ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅಜ್ಜಿ ಮನೆಗೆ ಬಂದಿದ್ದ...
ನಮಗೆ ನ್ಯಾಯ ಸಿಕ್ಕಿಲ್ಲ ಅಂತ ಅದೆಷ್ಟೋ ಜನ ಪ್ರತಿನಿತ್ಯ ಕೋರ್ಟ್ ಗೆ ಅಲೆದಾಡುತ್ತಾರೆ,ಕೆಲವರಿಗಂತು ವಕೀಲರನ್ನು ಇಟ್ಟು ತಮ್ಮ ಕೇಸ್ ನಡೆಸುವುದಕ್ಕಾಗದೆ ಇರುವುದನ್ನು ಸಹ ನೋಡಿದ್ದೇವೆ.ಆದರೆ ಇದೀಗ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಂ.ಎಸ್ ರಾಮಯ್ಯ ಕಾನೂನು ಮಹಾವಿದ್ಯಾಲಯದ ವತಿಯಿಂದ ನ್ಯಾಯ ರಥವನ್ನು ಲೋಕಾರ್ಪಣೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿ ಕೊಟ್ಟಿದೆ.
ಹಾಗಿದ್ರೆ ಏನಿದು?...
ರೌಡಿ ಬಿಕ್ಲು ಶಿವ ಕೊಲೆ ಕೇಸ್ನಲ್ಲಿ ಬೈರತಿ ಬಸವರಾಜ್ಗೆ ಬಂಧನದ ಭೀತಿ ಶುರುವಾಗಿದೆ. ಬೈರತಿ ಬಸವರಾಜ್ಗೆ ಬಂಧನದಿಂದ ರಕ್ಷಣೆ ನೀಡಲು ಕೋರ್ಟ್ ನಿರಾಕರಿಸಿದೆ. ಹೈಕೋರ್ಟ್ಗೆ ನಿರೀಕ್ಷಣಾ ಜಾಮೀನು ನೀಡುವಂತೆ ಬೈರತಿ ಬಸವರಾಜ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತು ವಿಚಾರಣಾ ನ್ಯಾಯಾಲಯದಲ್ಲೇ ಸೂಕ್ತ ಅರ್ಜಿ ಸಲ್ಲಿಸುವಂತೆ...
ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ವಾರು ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆಯ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗವು ಒಂದೂವರೆ ತಿಂಗಳು ವಿಸ್ತರಿಸಿದೆ. ರಾಜ್ಯ ಚುನಾವಣಾ ಆಯೋಗವು 2025ರ ಅಕ್ಟೋಬರ್ 27ರಂದು ಪ್ರಕಟಿಸಿದ್ದ ವೇಳಾಪಟ್ಟಿಯ ಪ್ರಕಾರ, 2026ರ ಜನವರಿ 29ರಂದು ವಾರ್ಡ್ವಾರು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು.
ಆದರೆ ಪ್ರಕ್ರಿಯೆಗಳು ಮುಂದುವರಿದಿರುವ ನಡುವೆಯೇ ವೇಳಾಪಟ್ಟಿಯನ್ನು...
Mandya News: ಮಾಜಿ ಶಾಸಕ ಹಾಗು ಕುಟುಂಬ ಸದಸ್ಯರಿಂದ ವಕೀಲ ನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಈ ಘಟನೆ ನಡೆದಿದೆ.
ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹಾಗು ಪುತ್ರ ಶ್ರೀಕಾಂತ್ ಸೇರಿ ಅವರ ಕುಟುಂಬ ಸದಸ್ಯರಿಂದ ದೌರ್ಜನ್ಯ ನಡೆದಿದ್ದು, ಜಮೀನು ಮಾಲೀಕತ್ವ ವಿಚಾರಕ್ಕೆ ಪಟ್ಟಣದ ವಕೀಲ ಶ್ರೀನಿವಾಸ್ ಮೇಲೆ...
ಬದಲಾದ ಜೀವನಶೈಲಿ, ಆಹಾರ ಪದ್ಧತಿ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಮಧುಮೇಹ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜಾರಿಗೆ ತಂದಿರುವ ‘ಗೃಹ ಆರೋಗ್ಯ’ ಯೋಜನೆಯಡಿ ನಡೆಸಿದ ತಪಾಸಣೆಯಲ್ಲಿ 27.62 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.
ಆರಂಭಿಕ ಹಂತದಲ್ಲಿಯೇ ಮಧುಮೇಹ ಸೇರಿದಂತೆ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಒದಗಿಸುವ...
Mandya News: ಮಂಡ್ಯ: ಮಂಡ್ಯದಲ್ಲಿ ಆಸ್ತಿ ಕಬಳಿಕೆಗಾಗಿ ಸಂಚು ನಡೆಸಿ 15ಕ್ಕೂ ಹೆಚ್ಚು ಜನ ಮನೆ ಮೇಲೆ ದಾಳಿ ಮಾಡಿ ಕಾಂಪೌಂಡ್ ಧ್ವಂಸ ಮಾಡಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾ. ಕೃಷ್ಣಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಕೃಷ್ಣಾಪುರ ನಿವಾಸಿ ಚಂದ್ರಶೇಖರ ಹಲ್ಲೆಗೊಳಗಾದ ಬಡಕುಟುಂಬವಾಗಿದೆ. ಚೌಡೇನಹಳ್ಳಿ ನಿವಾಸಿ ಶಂಕರ್ ಸೇರಿ 15ಕ್ಕೂ ಹೆಚ್ಚು...
ರೈತರ ಮಕ್ಕಳಿಗೆ ವಿವಾಹಕ್ಕೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪವಾಗಿ ಕೆಲಕಾಲ ಸದನವನ್ನು ನಗೆ ಕಡಲಿನಲ್ಲಿ ತೇಲುವಂತೆ ಮಾಡಿತು. ರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲ ಎಂಬ ಅಸಾಮಾನ್ಯ ಸ್ಥಿತಿಯನ್ನು ಉಲ್ಲೇಖಿಸಿ, ಈ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪುಟ್ಟಣ್ಣ,...
ಪತ್ನಿಯ ದಬ್ಬಾಳಿಕೆ ವರ್ತನೆಯಿಂದ ಬೇಸತ್ತು, ಆಕೆಯ ಹತ್ಯೆಗೆ ಸುಪಾರಿ ನೀಡಿದ ಪತಿ ಜೈಲು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಪತ್ನಿ ನಾಗರತ್ನ (46) ಅವರ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಪಾನಿಪೂರಿ ವ್ಯಾಪಾರಿ ಮಹೇಶ್ (44) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. “ನಾನು ಗಳಿಸಿದ್ದ ಹಣವನ್ನೆಲ್ಲ ಕಿತ್ತುಕೊಂಡು, ಬಡ್ಡಿ ವ್ಯವಹಾರ ನಡೆಸುತ್ತಿದ್ದ ಪತ್ನಿ...
Tumakuru News: ತುರುವೇಕೆರೆ ತಾಲೂಕಿನ ವಾಸಿಯಾದ ರವಿಕುಮಾರ್ ಬಿ ಎಸ್ ಬಿನ್ ಸಿದ್ದೇಗೌಡ ಎಂಬುವರ ಜಮೀನಿನಲ್ಲಿದ್ದ ಸುಮಾರು ಮೂರು ಸಾವಿರ ರೂ ಬೆಲೆ ಬಾಳುವ ಗಂಧದ ಮರಗಳ ಕಳ್ಳತನವಾಗಿದೆ.
ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಆಕ್ಟ್ ಕಲಂ 303(2) ಪ್ರಕಾರ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬೆನ್ನೆತ್ತಿದ ಪೊಲೀಸರು ಕೊನೆಗೂ ಗಂಧದ ಮರ ಕಳ್ಳರನ್ನು ತಾಲೂಕಿನ ಗೋಣಿ...