Thursday, May 14, 2026

ರಾಜಕೀಯ

ಮುಡಾ ಕೇಸ್ – CM ಸಿದ್ದರಾಮಯ್ಯ ಪತ್ನಿಗೆ ಬಿಗ್ ರಿಲೀಫ್

ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಇಡಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ, ಸುಪ್ರೀಂಕೋರ್ಟ್ ಇಂದು ತರಾಟೆ ತೆಗೆದುಕೊಂಡಿದೆ. ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್. ಗವಾಯಿ...

ಕಾಂಗ್ರೆಸ್ ಸರ್ಕಾರಕ್ಕೆ ‘ಮಂಜುನಾಥ’ನ ಶಾಪ!?

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ನೂರಾರು ಸಾವುಗಳ ತನಿಖೆಗೆ ರಾಜ್ಯ ಸರ್ಕಾರ ಎಸ್​ಐಟಿ ತಂಡವನ್ನು ರಚಿಸಿದೆ. ಇದು ದೇವರ ಅವಕೃಪೆಗೆ ಕಾರಣವಾಗುತ್ತಾ? ಹೀಗೊಂದು ಮಾತು ರಾಜ್ಯ ರಾಜಕೀಯದಲ್ಲಿ ಸದ್ದು ಮಾಡ್ತಿದೆ. ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶವಾಗಲಿದೆ ಅಂತಾ ಹೇಳಿದ್ದಾರೆ. ಇಂದಿನ ಕಾಂಗ್ರೆಸ್ ಸರ್ಕಾರ...

ಖರ್ಗೆನೂ ಪಿಎಂ ಆಗೇ ಆಗ್ತಾರೆ : ರಾಜಕೀಯದಲ್ಲಿ ಸಂಚಲನ ಸೃಷಿಸಿದ ರಾಯರೆಡ್ಡಿ ; ಮೋದಿ ಸರ್ಕಾರ ಪತನವಂತೆ ಯಾವಾಗ ಗೊತ್ತಾ?

ಹುಬ್ಬಳ್ಳಿ : ಬಿಜೆಪಿಯಲ್ಲಿ 75 ವರ್ಷ ತುಂಬಿದ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ. ವಯಸ್ಸಿನ ಕಾರಣಕ್ಕೆ ಪಕ್ಷ ಹಲವು ನಾಯಕರು ನಿವೃತ್ತಿಯಾಗುವಂತೆ ಮಾಡಿದೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕಾಂಗ್ರೆಸ್ ಹಿರಿಯ ಶಾಸಕರೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಮುಂಬರುವ ನವಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ಆಗುತ್ತದೆ....

ಇನ್ನು ಕೆಲವೇ ತಿಂಗಳಲ್ಲಿ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ..?: ಬಸವರಾಜ ರಾಯರೆಡ್ಡಿ

Hubli News: ಹುಬ್ಬಳ್ಳಿ: ಕೆಲವೇ ತಿಂಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ಆಗಬಹುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಮಾತನಾಡಿದ್ದಾರೆ. ಅವರು ಓರ್ವ ಹಿರಿಯ ನಾಯಕರಿದ್ದಾರೆ. ಯಾರು ಅವರನ್ನು ಮ್ಯಾಚ್ ಮಾಡಲು ಆಗಲ್ಲಾ.ಕೆಲವೇ ತಿಂಗಳಲ್ಲಿ ಅವರು ಪ್ರಧಾನಮಂತ್ರಿ...

Hubli News: ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್. ಇನ್ನು 2 ವರ್ಷ 10 ತಿಂಗಳು ಸಿದ್ದರಾಮಯ್ಯ ಅವರೇ ಸಿಎಂ: ರಾಯರೆಡ್ಡಿ

Hubli News: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ,  ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್. ಇನ್ನು 2 ವರ್ಷ 10 ತಿಂಗಳು ಸಿದ್ದರಾಮಯ್ಯ ಅವರೇ ಸಿಎಂ ಇರ್ತಾರೆ. ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ ಎಂದಿದ್ದಾರೆ. ಅಬ್ದುಲ್ ಕಲಾಂ ಅವರು ಸೋನಿಯಾ ಗಾಂಧೀ ಅವರಿಗೆ ಪ್ರಧಾನಮಂತ್ರಿ ಆಗೋಕೆ ತಿಳ್ಸಿದ್ರು. ಖರ್ಗೆ ಅವರ...

ರಾಜ್ಯ ಬಿಜೆಪಿಯಲ್ಲಿ ಬಹು ದೊಡ್ಡ ಕಂಪನ : BSYಗೆ ಬಿಜೆಪಿ ಹಿಡಿತ ಕಳೆದುಕೊಳ್ಳುವ ಭಯ!

ರಾಜ್ಯ ಬಿಜೆಪಿ ಪಾಳಯದಲ್ಲಿ ಬಹುದೊಡ್ಡ ಬೆಳವಣಿಗೆ ಆಗುತ್ತಿದೆ. ಬಿ.ವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲೇಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದ್ದು, ಅತಿದೊಡ್ಡ ಕಂಪನ ಶುರುವಾಗಿದೆ. ಈಗಾಗಲೇ ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿರುವುದನ್ನು ಬಹುತೇಕ ಬಿಜೆಪಿ ಹಿರಿಯ ನಾಯಕರು ಇಷ್ಟಪಡುತ್ತಿಲ್ಲ. ರಾಜ್ಯಾಧ್ಯಕ್ಷರು ಬದಲಾಗಬೇಕು ಎಂಬುದು ಸಾಕಷ್ಟು ಹಿರಿಯ ನಾಯಕರ ಅಭಿಪ್ರಾಯ ಆಗಿದೆ. ಈ...

ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಶ್ರೀಗಳಿಗೆ ವಿಷ ಪ್ರಾಶನ ಪ್ರಯತ್ನ ನಡೆದಿದೆ: ಬೆಲ್ಲದ್ ಹೊಸ ಬಾಂಬ್

Political News: ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಶ್ರೀಗಳಿಗೆ ವಿಷ ಪ್ರಾಶನ ಪ್ರಯತ್ನ ನಡೆದಿದೆ.. ಶ್ರೀಗಳ ಆಹಾರವನ್ನು ವಿಷ ಮಾಡಿ ಅವರನ್ನು ಮುಗಿಸಬೇಕು ಅಂತ ಯೋಚನೆ ಮಾಡಿದ್ದಾರೆ ಅಂತ,ವಿಧಾನ ಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ ಹೊಸ ಬಾಂಬ್ ಸಿಡಿಸಿದ್ದಾರೆ.. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಎದುರು ಗಂಭೀರ ಆರೋಪ ಮಾಡಿರುವ ಅವರು,ಶ್ರೀಗಳ ಆರೋಗ್ಯ ಹದಗೆಟ್ಟಿದೆ...

ಪತ್ನಿಯನ್ನೇ ಬಿಟ್ಟು ಬಂದ ಕೇಂದ್ರ ಸಚಿವ : ಮಂತ್ರಿಯ ಮರೆಗುಳಿತನಕ್ಕೆ ಜನರೇ ಶಾಕ್!

ನವದೆಹಲಿ : ಗಣ್ಯರು, ರಾಜಕೀಯ ನಾಯಕರಿಗೆ ಭದ್ರತೆ ಅಧಿಕವಾಗಿರುತ್ತದೆ. ಹಲವು ರೀತಿಯ ಕಾರಣಗಳಿಗಾಗಿ ಅವರು ಪ್ರಯಾಣಿಸುವ ಮಾರ್ಗದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಅಲ್ಲದೆ ವಿವಿಐಪಿಗಳದ್ದು ಅವಸರದ ಜೀವನವಾಗಿರುತ್ತದೆ. ಒಂದು ಕಾರ್ಯಕ್ರಮದ ಬಳಿಕ ಇನ್ನೊಂದು ಸಭೆ, ಸಮಾರಂಭಗಳಲ್ಲಿ ಭಾಗವಹಿಸಬೇಕಿರುತ್ತದೆ. ಹೀಗಾಗಿ ಗಡಿಬಿಡಿಯ ಬದುಕಿಗೆ ಒಗ್ಗಿರುತ್ತಾರೆ. ಆದರೆ ಕೆಲವೊಂದು ತಮ್ಮದೇ ಲೋಕದಲ್ಲಿರುವ ರಾಜಕಾರಣಿಗಳು ತಮ್ಮ ಜೊತೆಗಿದ್ದವರನ್ನೇ ಮರೆತು ಬಿಡುತ್ತಾರೆ. ಇದೇ...

ಮೇಕೆದಾಟು ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯ!?

ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ವಿರುದ್ಧ, ಸಚಿವ ಕೃಷ್ಣ ಭೈರೇಗೌಡ ಗುಡುಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್​​ ಯುವ ಪರ್ವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ರು. ಈ ವೇಳೆ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮ್ಮನ್ನು ಗೆಲ್ಲಿಸಿದ್ರೆ 1 ಗಂಟೆಯಲ್ಲಿ ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇವೆ ಅಂತಾ, ಕಳೆದ ಲೋಕಸಭಾ...

ಧರ್ಮಸ್ಥಳ ಶವ ಹೂತಿದ್ದ ಕೇಸ್, ಎಸ್​​ಐಟಿ ರಚನೆ ಸ್ವಾಗತಿಸಿದ ಮಹಿಳಾ ಆಯೋಗ : ತನಿಖೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ ಏನು?

ಬೆಂಗಳೂರು : ಧರ್ಮಸ್ಥಳ ಭಾಗದಲ್ಲಿ ಶವಗಳನ್ನು ಹೂತಿರುವ ಬಗ್ಗೆ ವ್ಯಕ್ತಿಯೊಬ್ಬ ಹೇಳಿದ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಆರೋಪದ ಕುರಿತು ತನಿಖೆಗಾಗಿ ಸರ್ಕಾರಕ್ಕೆ ಒತ್ತಾಯಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡಿ ಆದೇಶ ಹೊರಡಿಸಿದೆ. ಇನ್ನೂ ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img