ಇಂಗ್ಲೆಂಡ್ : ಖಾಸಗಿ ಕಾರ್ಯಕ್ರಮ ನಿಮ್ಮಿತ್ತ ಇಂಗ್ಲೆಂಡ್ ಗೆ ತೆರಳಿರುವ ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಲಂಡನ್ ನ ಲ್ಯಾಂಬೆತ್ ನಗರದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ.
ಇಂಡುವಾಳು ಸಚ್ಚಿದಾನಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 42 ಸಾವಿರಕ್ಕೂ ಅಧಿಕ ಮತಗಳನ್ನ ಪಡೆಯುವ ಮೂಲಕ...
Mandya News: ಮಂಡ್ಯ: ಚುನಾವಣೆಯಲ್ಲಿ ಸೋತರೂ, ಬಿಜೆಪಿ ಅಭ್ಯರ್ಥಿ ಒಬ್ಬರು, ಕೊಟ್ಟ ಮಾತು ಉಳಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಡ್ಯದ ಮದ್ದೂರು ಬಿಜೆಪಿ ಅಭ್ಯರ್ಥಿಯಾಗಿದ್ದ ಸಾದೊಳಲು ಸ್ವಾಮಿ ಅವರು, ವಿಶ್ವೇಶ್ವರಯ್ಯ ಪ್ರತಿಮೆಗೆ ಛಾವಣಿ ನಿರ್ಮಿಸಲು ಚಾಲನೆ ನೀಡಿದ್ದಾರೆ. ಕ್ಷೇತ್ರದ ಮಾದರಹಳ್ಳಿ ಗ್ರಾಮದಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಛಾವಣಿ ಇರಲಿಲ್ಲ. ಹಾಗಾಗಿ ಇಲ್ಲಿನ ಜನ ಸಾದೊಳಲು ಸ್ವಾಮಿ ಅವರಲ್ಲಿ...
ಕೃಷ್ಣರಾಜನಗರ :- ಇಂದು ಕೃಷ್ಣರಾಜನಗರದಲ್ಲಿ ಎಲ್ಲಾ ಮುಸಲ್ಮಾನ ಬಾಂಧವರು ಸೇರಿ ಬಕ್ರಿದ್ ಹಬ್ಬವನ್ನು ಬಾರಿ ವಿಜೃಂಭಣೆಯಿಂದ ಆಚರಿಸಲಾಗಿತ್ತು ಇದೇ ಸಂದರ್ಭದಲ್ಲಿ ನೂತನ ಶಾಸಕರಾದಂತಹ ಡಿ. ರವಿಶಂಕರ್ ಅವರು ಭಾಗವಹಿಸಿ ಮಾತನಾಡಿದರು
ಬಕ್ರೀದ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈದ್-ಉಲ್-ಅಧಾ ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಬಕ್ರೀದ್ ಎಂದೂ...
Hubablli News: ಹುಬ್ಬಳ್ಳಿ: ಕಳೆದ ಎಂಟು ದಿನಗಳಿಂದ ತೆರವಾಗಿದ್ದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಹುದ್ದೆಗೆ ಪೊಲೀಸ್ ಇಲಾಖೆಯಿಂದ 2011 ಬ್ಯಾಚಿನ ಐಪಿಎಸ್ ಅಧಿಕಾರಿಯಾದ ಸಂತೋಷ್ ಬಾಬು ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
ರಮಣ್ ಗುಪ್ತ ಅವರ ವರ್ಗಾವಣೆ ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಸ್ಥಾನ ತೆರುವಾಗಿ ದಿನಗಳು ಕಳೆದರೂ ರಾಜ್ಯ ಸರ್ಕಾರ...
Dharwad News: ಧಾರವಾಡ: ಕಳೆದ ಒಂದು ವಾರದಿಂದ ಸುರಿದ ಮಳೆಗೆ ಧಾರವಾಡ ಜಿಲ್ಲೆಯಾದ್ಯಂತ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ವಾಡಕೆಯ ಪ್ರಮಾಣದಷ್ಟು ಸದ್ಯ ಬಿತ್ತನೆಗೆ ಎಷ್ಟು ಬೇಕು ಅಷ್ಟು ಮಳೆ ಆದ ಹಿನ್ನಲೆ, ಧಾರವಾಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೋಂಡಿದೆ.
ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಇನ್ನು ಕಳೆದ ವರ್ಷ ಜೂನ್...
Mysuru News: ಮೈಸೂರು: ರಾಜ್ಯದೆಲ್ಲೆಡೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಯಾಗಿದ್ದು, ಕೆಲವರು ಬಸ್ ಪ್ರಯಾಣವನ್ನ ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು ವಾರಗಟ್ಟಲೇ ಟ್ರಿಪ್ ಹೊರಟಿದ್ದಾರೆ. ಇಂಥ ಘಟನೆಗಳಿಂದಲೇ ಪುರುಷರು, ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಡುವಂತಾಗಿದೆ.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾಗಿರುವ ಕೆ.ವೆಂಕಟೇಶ್ ಅವರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಟ ನಡೆಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ...
Hosakote News: ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ವ್ಯಕ್ತಿಯೋರ್ವ, ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನೂ ಬಂದಿಲ್ಲವೆಂದು ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾನೆ.
ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಈ ಡ್ರಾಮಾ ನಡೆದಿದ್ದು, ಕುಡುಕನೋರ್ವ ನನ್ನ ಹೆಂಡತಿ, ಫ್ರಿ ಬಸ್ ಎಂದು ಪ್ರವಾಸಕ್ಕೆ ಹೋದವಳು ಇನ್ನೂ ಮನೆಗೆ ಬಂದಿಲ್ಲ ಎಂದು...
Hassan News: ಹಾಸನ: ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರು ಅಟ್ಟಹಾಸ ಮೆರೆದಿದ್ದು, ವೀಲ್ಹಿಂಗ್ ಮಾಡುತ್ತಿದ್ದ ಕಿಡಿಗೇಡಿಗಳು ಹುಡುಗಿಯರು ಇದ್ದ ಗಾಡಿಗೆ ಗುದ್ದಿದ್ದಾರೆ. ಅಪಘಾತದಿಂದ ಇಬ್ಬರು ಯುವತಿಯರಿಗೆ ಗಂಭೀರವಾದ ಗಾಯವಾಗಿದ್ದು, ಭೂಮಿಕಾ ಸಿಂಚ ಎಂಬ ಯುವತಿಯರ ಸ್ಥಿತಿ ಗಂಭೀರವಾಗಿದೆ.
ಹಾಸನ ನಗರದ, ಸಾಲಗಾಮೆ ರಸ್ತೆಯ, ಕನ್ನಡ ಸಾಹಿತ್ಯ ಪರಿಷತ್ ಭವನದ ಎದುರು ನಿನ್ನೆ ರಾತ್ರಿ ಈ ಘಟನೆ...
Hassan News: ಹಾಸನ : ಸಂಜೆ ತರಕಾರಿ ತರಲು ಹೋಗಿದ್ದ ವೃದ್ಧೆಯನ್ನು ಹಿಂಬಾಲಿಸಿದ ಯುವಕ, ಹೊಂಚು ಹಾಕಿ, ಆಕೆಯ ಚಿನ್ನದ ಸರವನ್ನು ಕದ್ದಿದ್ದಾನೆ.
ಹಾಸನ ಜಿಲ್ಲೆ, ಅರಸೀಕೆರೆ ಪಟ್ಟಣದ, ರಾಷ್ಟ್ರೀಯ ಹೆದ್ದಾರಿ 206 ಟಿಎಚ್ ರಸ್ತೆಗೆ ಹೊಂದಿಕೊಂಡಿರುವ ಯೂನಿಯನ್ ಬ್ಯಾಂಕ್ ಪಕ್ಕದಲ್ಲಿ ಈ ಘಟನೆ ನಡೆದಿದೆ. ಸುಭದ್ರಮ್ಮ(74) ಎಂಬುವವರು ತಮ್ಮ ಚಿನ್ನದ ಸರವನ್ನು ಕಳೆದುಕೊಂಡವರಾಗಿದ್ದು, ಇವರು...
Hassan News: ಹಾಸನ: ಅಕ್ರಮ ಗೋಮಾಂಸ ಮಾರಾಟ ಜಾಲದಿಂದ ಅಮಾನವೀಯ ಕೃತ್ಯ ನಡೆದಿದ್ದು, ಮಾಂಸಕ್ಕಾಗಿ ಜಾನುವಾರು ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೆನ್ನೆ ಸಂಜೆ ಕಾಫಿತೋಟದಲ್ಲಿದ್ದ ಎಮ್ಮೆ ಮೇಲೆ ಗುಂಡು ಹಾರಿಸಲಾಗಿದೆ. ಎಮ್ಮೆಯನ್ನು ಕೊಂದು ಮಾಂಸ ಕಟ್ ಮಾಡುತ್ತಿದ್ದವೇಳೆ ಮಾಹಿತಿ ತಿಳಿದು...