ಬೆಂಗಳೂರು:ರಾಜ್ಯ ಸರ್ಕಾರದಿಂದ ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಆಚರಣೆಗಾಗಿ ಅನುಮತಿ ಪಡೆಯಲು ಏಕಗವಾಕ್ಷಿ ಪದ್ದತಿಯಲ್ಲಿ ಅನುಮತಿ ಪಡೆಯಲು ವ್ಯವಸ್ಥೆ ಜಾರಿಗೊಳಿಸಿ ಆದೇಶಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ...
Mysoor news:
ಮೈಸೂರಿನಲ್ಲಿ ಇಂದು ಸಾವರ್ಕರ್ ರಥಯಾತ್ರೆಗೆ ಚಾಲನೆ ದೊರೆಯಿತು. 'ಸಾವರ್ಕರ್ ರಥಯಾತ್ರೆ'ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಚಾಲನೆ ನೀಡಿದರು.
"ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶೇಷ ಇತಿಹಾಸವಿದೆ. ಮೈಸೂರಿನಂಥ ಪುಣ್ಯ ಭೂಮಿಯಲ್ಲಿ ಸಾವರ್ಕರ್ ರಥ ಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯ ಎಂದ ಅವರು, ದೇಶದೊಳಗಿನ ವಿದ್ರೋಹಿಗಳ ಎಚ್ಚರಿಕೆ...
Ballari News:
ಗಣಿನಾಡಿನಲ್ಲಿ ಬಡ್ಡಿ ಆಸೆ ತೋರಿಸಿ ಪಂಗನಾಮ ಹಾಕಿದ ಘಟನೆ ನಡೆದಿದೆ. ಜನರು ಕಂಪೆನಿಯ ಮರುಳಿನ ಮಾತಿಗೆ ಕಿವಿಯೊಡ್ಡಿ ಇದೀಗ ಕೋಟಿ ಹಣವನ್ನೇ ಕಳೆದುಕೊಂಡಿದ್ದಾರೆ.ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಬಡ್ಡಿಕಡಿಮೆ ಬರುತ್ತದೆ. ನೀವೂ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದ್ರೆ ದಿನಕ್ಕೆ 2 ಪರ್ಸೆಂಟೇಜ್ ಬಡ್ಡಿ ನೀಡುತೇವೆ. ಹೂಡಿಕೆ ಮಾಡಿದ ಹಣಕ್ಕೆ ಕೆಲ ತಿಂಗಳಿಗೆ...
ಬೆಂಗಳೂರು: ರಾಜ್ಯ ಹೈಕೋರ್ಟ್ ಎಸಿಬಿ ರದ್ದುಗೊಳಿಸಿ, ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಹಿಸುವಂತೆ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದ್ರೇ ಎಸಿಬಿ ರದ್ದು ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಯಿಲ್ಲ ಎಂಬುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ...
kodagu news updates:
ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದ ಹಿನ್ನಲೆಯಲ್ಲಿ ಕಾಂಗ್ರೆಸ್ ಕೆಂಡಕಾರಿತ್ತು.ಹಾಗೆಯೇ ಇದರ ಪ್ರತಿಯಾಗಿ ಕಾಂಗ್ರೆಸ್ ಅವಮಾನವಾದಂತಹ ಸ್ಥಳದಲ್ಲಿಯೇ ಆರ್ಭಟ ಮಾಡೋದಾಗಿ ಸಿದ್ದವಾಗಿತ್ತು.ಆದರೆ ಇದೀಗ ಸರಕಾರ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಹಿನ್ನಲೆ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿದೆ. ಕೊಡಗು ಚಲೋ ಮುಂದೂಡುವುದಾಗಿ ಕಾಂಗ್ರೆಸ್ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಆದೇಶ ಎಂದರೆ ಸರ್ಕಾರದ ಆದೇಶ. ಜವಾಬ್ದಾರಿಯುತ ಪ್ರತಿಪಕ್ಷವಾಗಿ...
Kolar News:
ಮೊಟ್ಟೆ ಕದನದ ಹಿನ್ನಲೆ ಕೊಡಗು ಚಲೋ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿಗರಿಗೆ ಈಗ ನಿಷೇದಾಜ್ಞೆ ಬಿಸಿ ಮುಟ್ಟಿಸಿದೆ ಸರಕಾರ.ಇದೇ ವಿಚಾರವಾಗಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೊಡಗು ಚಲೋ ವಿಚಾರದಲ್ಲಿ ನನಗೆ ಯಾವ ಭಯವೂ ಇಲ್ಲ ಎಂದು ಕೋಲಾರ ಜಿಲ್ಲೆ ಕೆಜಿಎಫ್ನಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನೂತನ ಜಿಲ್ಲಾ ಮೀಸಲು...
Banglore news:
ಮೊಟ್ಟೆ ಮಹಾಯುದ್ಧದ ಬೆನ್ನಲ್ಲೇ ಕಾಂಗ್ರೆಸ್ ಕೊಡಗು ಚಲೋ ಕಾರ್ಯಕ್ರಮವನ್ನು ಆಯೋಜಿಸಿತ್ತು ಆದರೆ ಇದೀಗ ಕೊಡಗಿನಲ್ಲಿ ಸೆಕ್ಶನ್ ಜಾರಿ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ಸಿಗರು ಗರಂ ಆಗಿದ್ದಾರೆ.ಈ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಾವು ಹೋರಾಟ ಮಾಡುವಾಗ ಮಾತ್ರ ಇವರು ನಿಷೇಧಾಜ್ಞೆ ಜಾರಿ ಮಾಡುತ್ತಾರೆ. ನಮ್ಮ ಮೇಲೆ ಕೇಸ್ ಹಾಕುವುದು ಸರ್ಕಾರದ ಒಂದು ಚಾಳಿ. ನಮ್ಮ...
zomato news:
ಝೊಮ್ಯಾಟೋದ ಈ ಮಹಿಳಾ ಡೆಲಿವರಿ ಏಜೆಂಟ್ ಕೈಗೂಸನ್ನು ಎತ್ತಿಕೊಂಡೇ ಮನೆಮನೆಗೆ ತೆರಳಿ ಫುಡ್ ಡೆಲಿವರಿ ಮಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋ ಮೆಚ್ಚಿದ್ದಾರೆ. ಸೌರಭ್ ಪಂಜಾನ್ವಿ ಎನ್ನುವ ಫುಡ್ ಬ್ಲಾಗರ್ ಈ ವಿಡಿಯೋ ಚಿತ್ರೀಕರಿಸಿದ್ದಾರೆ. ಅಚ್ಚರಿಗೊಂಡು ನಿತ್ಯದ ಕಾರ್ಯವಿಧಾನದ ಬಗ್ಗೆ ಸೌರಭ್ ಅವಳೊಂದಿಗೆ ಮಾತಿಗಿಳಿದಾಗ,...
State News:
ರಾಜಸ್ಥಾನದ ಜೈಸಿಂಗಾಪುರ್ ಖೋರ್ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಸ್ಥಳೀಯ ಪೊಲೀಸರು ಬೆಂಗಳೂರಿನ ತಹಶೀಲ್ದಾರ್, ಕರ್ನಾಟಕ ಪೊಲೀಸ್ ಇನ್ಸ್ಪೆಕ್ಟರ್, ಪ್ರೊಫೆಸರ್ ರಮೇಶ್ ಸೇರಿದಂತೆ 84 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 13 ಮಹಿಳೆಯರು ಸೇರಿದ್ದಾರೆ. ಬಂಧಿತರ ಪೈಕಿ ತಹಸೀಲ್ದಾರ್ ಹೆಸರು ನಾಥ್, ಇನ್ಸ್ಪೆಕ್ಟರ್ ಹೆಸರು ಅಂಜಯ್ಯ ಮತ್ತು ಪ್ರೊಫೆಸರ್...
Belagavi News:
ಬೆಳಗಾವಿಯಲ್ಲಿ ಚಿರತೆಯೊಂದು 19 ದಿನಗಳಿಂದ ಅಡ್ಡಾಡುತ್ತಿದ್ದು, ಜನ ಆತಂಕಗೊಂಡಿದ್ದಾರೆ. ಚಿರತೆ ದಾಳಿ ಭೀತಿಯಿಂದಾಗಿ ಕಳೆದ 18 ದಿನಗಳಿಂದ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದರೂ ಅದು ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಓಡಾಡುತ್ತಿದೆ.
ಸೋಮವಾರ ಬೆಳಗಾವಿ ಹೃದಯ ಭಾಗದಲ್ಲಿರುವ ಗಾಲ್್ಫ ಕ್ಲಬ್ನಲ್ಲಿ ಚಿರತೆ ಕಂಡುಬಂದಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅರಣ್ಯ ಹಾಗೂ ಪೊಲೀಸ್...