ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆ ಒಂದಾಗಿದೆ. ಆದ್ರೆ, ಕೆಲ ತಿಂಗಳುಗಳಿಂದ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ. ಈ ಸಂಬಂಧ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಅಧಿವೇಶನದಲ್ಲಿ ಗಮನಸೆಳೆದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ...
ಬೀದರ್ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ಮತ್ತೆ ವಿಷಾದನೀಯ ಘಟನೆಗೆ ಕಾರಣವಾಗಿದೆ. ಭಾಲ್ಕಿ ತಾಲೂಕಿನ ಮೊರಂಬಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಬಿದ್ದು, ಹತ್ತಿರ ನಿಂತಿದ್ದ ಹೋಂಡಾ ಕಾರು ಸಂಪೂರ್ಣ ಜಖಂಗೊಂಡಿದೆ.
ಸೌಭಾಗ್ಯವಶಾತ್, ಕಾರಿನೊಳಗೆ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿ ಹೋಗಿದೆ. ಈ ಅಪಘಾತ ಶಾಲೆಯ ಕಾಂಪೌಂಡ್...
ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ಬಾಂಬ್ ಬೆದರಿಕೆ ಸಂದೇಶದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ವಲಯದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಚಿಕ್ಕಪೇಟೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಬೆಳಗ್ಗೆ ಅಜ್ಞಾತ ವ್ಯಕ್ತಿಯಿಂದ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದ ಹಿನ್ನೆಲೆಯಲ್ಲಿ, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಹೈ ಅಲರ್ಟ್ ಘೋಷಿಸಿದರು.
ಬಾಂಬ್ ಬೆದರಿಕೆಯ ಕಾರಣದಿಂದ ಕಚೇರಿ ಸಿಬ್ಬಂದಿಗಳನ್ನು ತಕ್ಷಣ ಕಟ್ಟಡದ ಹೊರಗೆ...
ರಾಜ್ಯ ಸರ್ಕಾರದ ವಿರುದ್ಧ ವಿಕಲಚೇತನರಿಂದ ಬೀದಿ ಬದಿಯಲ್ಲಿ ಅಗ್ರಹ ವ್ಯಕ್ತವಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕರ್ನಾಟಕ ಅಂಗವಿಕಲ ರಾಜ್ಯ ಒಕ್ಕೂಟ (KARO) ಜಿಲ್ಲೆಯ ಘಟಕದ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಆಡಳಿತ ಭವನದ ಎದುರು ಗುರುವಾರ ಭಾರೀ ಪ್ರತಿಭಟನೆ ನಡೆಯಿತು. ಜಿಲ್ಲೆಯ ವಿಕಲಚೇತನರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮೌನಧರಣೆಯಿಂದ ಹಿಡಿದು ಘೋಷಣೆಗಳವರೆಗೆ...
ರಾಷ್ಟ್ರ ಪ್ರಶಸ್ತಿ ವಿಜೇತ ‘ತಿಥಿ’ ಚಿತ್ರದ ನಾಯಕ ನಟ ಅಭಿಯ ನೈಜ ಬದುಕು ಈಗ ಎಲ್ಲರ ಗಮನಸೆಳೆದಿದೆ. ಚಿತ್ರರಂಗದಲ್ಲಿ ಹೆಸರು ಮಾಡಿದ್ದರೂ, ಅವಕಾಶಗಳ ಕೊರತೆಯಿಂದ ಅಭಿನಯವನ್ನು ಬದಿಗಿಟ್ಟು ಗ್ರಾಮದಲ್ಲಿ ಕೂಲಿ ಕೆಲಸ ಮೂಲಕ ಜೀವನ ಸಾಗಿಸುತ್ತಿರುವುದು ವಾಸ್ತವ.
ಮಂಡ್ಯ ತಾಲೂಕಿನ ಹುಲಿಕೆರೆ ಕೊಪ್ಪಲು ಗ್ರಾಮದ ನಿವಾಸಿಯಾದ ಅಭಿ, ಇಂದಿಗೂ ಕೂಡಾ ಮರ ಕಟಾವು ಮತ್ತು ಮರಗಳನ್ನು...
Tumakuru News: ತುಮಕೂರು: ಕುಡಿದ ಅಮಲಿನಲ್ಲಿ ಸ್ನೇಹಿತರ ನಡುವೆ ನಡೆದಿದ್ದ ಜಗಳ ಹತ್ಯೆಯಲ್ಲಿ ಅಂತ್ಯವಾದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಅಪ್ಪಾಜಿಹಳ್ಳಿ ಬಳಿ ನಡೆದಿದೆ.
ಬಿಹಾರ ಮೂಲದ ಅವಿದ್ ಅಲಿ( 23) ಕೊಲೆಯಾದ ಯುವಕನಾಗಿದ್ದು, ಈತನ ಹತ್ಯೆಗೈದ ಈತನ ಗೆಳೆಯನಾಗಿರುವ ಆರೋಪಿ ಬಿಹಾರ ಮೂಲದ ಷಂಷಾದ್ ( 25)ನನ್ನು ಬಂಧಿಸಲಾಗಿದೆ. ಇವರಿಬ್ಬರು ಎಸ್ಟೇಟ್‌ನಲ್ಲಿ ಕೆಲಸ...
ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕುಟುಂಬ ಕಲಹದ ಹಿನ್ನೆಲೆ, ತಮ್ಮನ ಕೈಯಲ್ಲಿ ಅಣ್ಣನೇ ಹತ್ಯೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಯಾರಬ್ ನಗರದ ಶೆಟ್ಟಿ ಗಾರ್ಡನ್ ನಿವಾಸಿ ಮೊಹಮ್ಮದ್ ಮುಜಾಯಿದ್ (37) ಕೊಲೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ಎಸಗಿದ ಆರೋಪದಲ್ಲಿ ಮೃತನ ತಮ್ಮ ಮೊಹಮ್ಮದ್ ಮುಸಾದ್ (34) ಕೂಡ ಕೈಗಾಯದಿಂದ ಈಗ ಆಸ್ಪತ್ರೆಗೆ...
ರಾಜ್ಯದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವುದಾಗಿ ಅಧಿಕಾರಕ್ಕೆ ಬಂದ ಬಳಿಕ ಭರವಸೆ ನೀಡಿದ್ದ ಸರ್ಕಾರ, ಇ ದೀಗ ಎರಡೂವರೆ ವರ್ಷದ ನಂತರ ಮೊದಲ ಹಂತದ ನೇಮಕಾತಿಗೆ ಹಸಿರು ನಿಶಾನೆ ತೋರಿಸಿದೆ. ಎಲ್ಲವೂ ಯೋಜನೆಯಂತೆ ನಡೆದರೆ 2026ರ ಆರಂಭದಲ್ಲೇ 24,300 ಹುದ್ದೆಗಳ ನೇಮಕಾತಿ ಪೂರ್ಣಗೊಳ್ಳಲಿದೆ.
ಬೆಳಗಾವಿ ಅಧಿವೇಶನದಲ್ಲಿ ಗುರುವಾರ ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,...
ವಿಶ್ವಪ್ರಸಿದ್ಧ ಮೈಸೂರು ಅರಮನೆಯ ನಿರ್ವಹಣೆಯಲ್ಲಿ ನಡೆಯುತ್ತಿರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಅರಮನೆಯ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಒಂದಾದ ವರಹ ಗೇಟ್‌ನ ಮೇಲ್ಛಾವಣಿ ದಿಢೀರ್ ಕುಸಿದು, ಅಲ್ಲಿ ಓಡಾಡುತ್ತಿದ್ದ ಪ್ರವಾಸಿಗರ ಗೈರಿಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯ ಸಮಯದಲ್ಲಿ ಗೇಟ್ ಕೆಳಗೆ ನಿಲ್ಲಿಸಲಾಗಿದ್ದ ಅರಮನೆ ಸಿಬ್ಬಂದಿಯೊಬ್ಬರ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಟ್ಟಡಗಳ ಸುರಕ್ಷತಾ ಕ್ರಮಗಳ...
ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಕಡ್ಡಾಯದಿಂದ ವಿನಾಯ್ತಿ ಕೊಟ್ಟಾಯ್ತು. ನಗರ ಸ್ಥಳೀಯ ಸಂಸ್ಥೆಗಳಿಗೂ ಕೊಡಲು ನಿರ್ಧರಿಸಿ ಆಯ್ತು. ಈಗ ಗ್ರಾಮ ಪಂಚಾಯ್ತಿಗಳ ಸರದಿ.
ಹೌದು, ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ 1200 ಚದರಡಿ ವಿಸ್ತೀರ್ಣದ ಅನಧಿಕೃತ ವಸತಿ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲು ಅನುಕೂಲವಾಗುವಂತೆ 'ಸ್ವಾಧೀನಾ ನುಭವ ಪ್ರಮಾಣಪತ್ರ...
ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಕ್ರೂರ ಹತ್ಯೆಯನ್ನು ಖಂಡಿಸಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ...