ಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಾಸನಾಂಬ ಉತ್ಸವದ ಕುರಿತು ಪೂರ್ವಭಾವಿ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಆಗಮಿಸಿದ್ದರು. ಈ ವೇಳೆ ಬರಪಿಡಿತ ಪ್ರದೇಶವೆಂದು ಘೋಷಣೆ ಮಾಡದ ಹಿನ್ನೆಲೆ ಕರವೇ ಕಾರ್ಯಕರ್ತರು ಸಚಿವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ರಾಜ್ಯಾದ್ಯಂತ ಹಲವಾರು ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದರೂ ಹಾಸನ ಜಿಲ್ಲೆಯನ್ನು ಮಾತ್ರ ಬರಪೀಡಿತ ಪ್ರದೇಶದ...
ಹುಬ್ಬಳ್ಳಿ: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಕೊನೆ ಇಲ್ಲದಂತಾಗಿದೆ. ರೌಡಿಗಳ ಕಾಟದಿಂದಾಗಿ ನಗರದ ಜನತೆ ತತ್ತರಿಸಿ ಹೋಗಿದ್ದಾರೆ. ನಿನ್ನೆ ಸಾಯಂಕಾಲ ನಗರದ ಗಬ್ಬೂರಿನ ಆರ್ಟಿಒ ಕಛೇರಿ ಬಳಿ ಅಣ್ಣಿಗೆರೆ ಯುವಕನನ್ನು ಪುಡಿರೌಡಿಗಳು ಮನಬಂದಂತೆ ಥಳಿಸಿ ಚಾಕು ಇರಿದಿದ್ದಾರೆ.
ಪ್ರೇಮಿಗಳಿಗೆ ಸಹಾಯ ಮಾಡಿದ್ದಾನೆ ಎನ್ನುವ ಕಾರಣಕ್ಕೆ ನಿನ್ನೆ ಮಧ್ಯಾಹ್ನ 4.00 ಗಂಟೆ ಸುಮಾರಿಗೆ ಹೊನ್ನಪ್ಪ ಸೇರಿದಂತೆ ಐದು...
ಚಿಕ್ಕೋಡಿ : ಸಚಿವರಾದ ಬಳಿಕ ಪ್ರತಿ ತಾಲೂಕಿನಲ್ಲಿ ಕೆಡಿಪಿ ಸಭೆ ಮಾಡೋದಾಗಿ ಸಚಿವ ಸತೀಶ್ ಜಾರಕಿ ಹೊಳಿ ಹೇಳಿದ್ದರು. ಇದೇ ವಿಚಾರವಾಗಿ ಮಾಧ್ಯಮದವರು ಪ್ರಶ್ನಿಸಿದಾಗ ಈಗಾಗಲೇ ರಾಯಬಾಗ, ಸವದತ್ತಿ ತಾಲೂಕಿನಲ್ಲಿ ಸಭೆ ಮಾಡಿದ್ದೇನೆ. ಶಾಸಕರ ಬಳಿ ಮಾತನಾಡಿ ದಿನಾಂಕ ನಿಗದಿ ಮಾಡಿ ಸದ್ಯದಲ್ಲೇ ಚಿಕ್ಕೋಡಿಯಲ್ಲೂ ಸಭೆ ನಡೆಸುವುದಾಗಿ ಜಾರಕಿಹೊಳಿ ತಿಳಿಸಿದರು.
ಕೇಂದ್ರ ಬರ ಅಧ್ಯಯನ ತಂಡ...
ಚಿಕ್ಕೋಡಿ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಪ್ರವೇಶ ಮಾಡಿದ್ದರ ಕುರಿತು ಮಾಧ್ಯಮದವರು ಚಿಕ್ಕೋಡಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬರಗಾಲದ ಸಮಯದಲ್ಲಿ ಪ್ರದೀಪ್ ಅವರಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆಗೆ ಸಚಿವರು ಪ್ರತಿಕ್ರಿಸಿದ್ದಾರೆ.
ಅದು ಅವರ ವೈಯಕ್ತಿಕ ವಿಚಾರ ಮೇಲಾಗಿ ಅವರೊಬ್ಬ ಟ್ಯೂಷನ್...
ಧಾರವಾಡ: ಕಳೆದ ನಾಲ್ಕು ವರ್ಷಗಳಿಂದ ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಈ ಸಮುದಾಯದವರಿಗೆ ಮೀಸಲಾತಿ ಜಾರಿಯಾಗಿಲ್ಲ. ಕಳೆದ ಬಿಜೆಪಿ ಸರ್ಕಾರದಲ್ಲಿಯೂ ಸಹ ಸಾಕಷ್ಟು ದಿನಗಳ ಕಾಲ ಅನಿರ್ದಿಷ್ಟ ಧರಣಿ ಕೈಗೊಂಡರು ಯಾವುದೇ ಪ್ರತಿಫಲ ದೊರೆತಿಲ್ಲ ಹಾಗಾಗಿ ಮತ್ತೊಮ್ಮೆ ಧರಣಿ ಕೈಗೊಳ್ಳಲು ಮುಂದಾಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿಯಾದರೂ ನಮ್ಮ...
ಧಾರವಾಡ : ರಾಜ್ಯದಲ್ಲಿ ವಿದ್ಯುತ್ ಕೊರತೆ ಎದ್ದು ಕಾಣುತ್ತಿದ್ದು ಸರಿಯಾಗಿ ಕರೆಂಟ್ ಬರದ ಕಾರಣ ರೈತರು ತಮ್ಮ ಜಮೀನುಗಳಿಗೆ ಸರಿಯಾಗಿ ಪಂಪ್ ಸೆಟ್ ಮೂಲಕ ನೀರನ್ನು ಹರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ಬೆಳೆಗಳು ಒಣಗಿ ಹೋಗುತ್ತಿವೆ ಇದರಿಂದ ಆತಂಕಕ್ಕೆ ಒಳಗಾದ ರೈತರು ಕೆಇಬಿ ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದಿದ್ದಾರೆ.
ಧಾರವಾಡ ಮತ್ತು ಬೆಳಗಾವಿ ರಸ್ತೆಯಲ್ಲಿರುವ ಹೆಸ್ಕಾಂ ವಿದ್ಯುತ್...
ಹುಬ್ಬಳ್ಳಿ: ಈ ಸರ್ಕಾರ ಮೊದಲನೆಯ ಕ್ಯಾಬಿನೆಟ್‌ನಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ. ಎನ್ಇಪಿ ರದ್ದು ಮಾಡಿ ಎಸ್‌ಇಪಿ ಮಾದರಿ ಮಾಡಲು ಹೊರಟಿದೆ. ಹೇಳವವರು ಕೇಳುವವರು ಇಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ. ಎಸ್‌ಇಪಿ ಯಾವ ಕಾರಣಕ್ಕಾಗಿ ಜಾರಿಗೆ ತರುತ್ತಿದ್ದಾರೆಂದು ಹೇಳಲಿ. ಎಸ್‌ಇಪಿ ಅಂದ್ರೆ ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿ ಏನೂ ಎಂದು ವ್ಯಂಗ್ಯ ಮಾಡಿದರು.
ಎಸ್‌ಇಪಿಯನ್ನ ಈ ಸರ್ಕಾರದ...
ರಾಜಕೀಯ ಸುದ್ದಿ : ಇಸ್ರೇಲ್ ಹಮಾಸರು ಉಗ್ರರ ದಾಳಿಯನ್ನ ಖಂಡಿಸುತ್ತೆನೆ. ಇಸ್ರೇಲ್‌ನಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದು ರಾಜ್ಯದ ಜನರು ತಲೆ ತಗ್ಗಿಸುವಂತ ಕೆಲಸವನ್ನ ಈ ಸರ್ಕಾರ ಮಾಡುತ್ತಿದೆ.
ಈ ಸರ್ಕಾರಕ್ಕೆ ಯಾವುದೇ ಗಂಭೀರತೆ ಇಲ್ಲ, ಎತ್ತ ಸಾಗುತ್ತಿದೆ. ತಾನೂ ಏನ್ ಮಾಡಬೇಕೆಂಬುದನ್ನ ಮರೆತು...
ಹುಬ್ಬಳ್ಳಿ: ಕೈಗೆ ಬಂದ ಅಡಿಕೆ ಬೆಳೆಯನ್ನು ಕಳ್ಳತನ ಮಾಡಿಕೊಂಡು ಹೋದಾಗ ಪೊಲೀಸರಿಗೆ ದೂರು ನೀಡಿದಾಗಲೂ ಪೊಲೀಸರು ನ್ಯಾಯ ದೊರಕಿಸಿ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲವಾಗಿದೆ. ಸಾಲ ಮಾಡಿ ಬೆಳೆದ ಬೆಳೆಯನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ ಎಂದು ರೈತರು ಕಣ್ಣೀರಿನ ಕಥೆಯನ್ನು ಹೇಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೆರೆಗಾಳ ಗ್ರಾಮದಲ್ಲಿ...
ಹುಬ್ಬಳ್ಳಿ: ಎಪಿಎಂಸಿಯಲ್ಲಿ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸದೇ ಇರುವ ಎರಡು ಸಾವಿರ ಎಪಿಎಂಸಿ ವ್ಯಾಪಾರಸ್ಥರು, ದಲ್ಲಾಳಿಗಳ ಪರವಾನಗಿಗಳನ್ನು ನಿಯಮಾನುಸಾರ ರದ್ದು ಪಡಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ರಾಜ್ಯಾದ್ಯಂತ ವರ್ತಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೌದು.. ಕೃಷಿ ಮಾರಾಟ ಇಲಾಖೆ ನಿರ್ದೇಶಕರು ರಾಜ್ಯದ ಎಲ್ಲಾ ಎಪಿಎಂಸಿ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮೂರು ವರ್ಷ ವ್ಯಾಪಾರ...
ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...