ಬಿಹಾರದಲ್ಲಿ ಎಲೆಕ್ಷನ್ ಹತ್ತಿರವಾಗುತ್ತಿದೆ. ಚುನಾವಣಾ ಕಾರ್ಯತಂತ್ರದ ಕುರಿತು, ಕಾಂಗ್ರೆಸ್ ನಾಯಕರು ಮಹತ್ವದ ಕಾರ್ಯಕಾರಿ ಸಭೆ ನಡೆಸುತ್ತಿದ್ದಾರೆ. ಮತಗಳ್ಳತನ ವಿರುದ್ಧ ಹೋರಾಟದ ಬಳಿಕ ಮೊದಲ ಸಭೆ ಇದಾಗಿದೆ. ಬಿಹಾರದಲ್ಲಿ ನಡೆಯುತ್ತಿರುವ ಮೊದಲ ಸಿಡಬ್ಲ್ಯುಸಿ ಸಭೆ, ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿದೆ.
ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ ಅಧಿಕಾರ ಯಾತ್ರೆ ಬೆನ್ನಲ್ಲೇ ಸದಾಖತ್ ಆಶ್ರಮದಲ್ಲಿ ಈ ಸಭೆ...
ಇತ್ತೀಚಿಗೆ ಅಮೆರಿಕದ ಟೆಕ್ಸಾಸ್ ನಲ್ಲಿ 90 ಅಡಿ ಎತ್ತರದ ಬೃಹತ್ ಹನುಮಂತನ ಪ್ರತಿಮೆ ಸ್ಥಾಪನೆಯಾಗಿದೆ. ಇದನ್ನು ಸ್ಟ್ಯಾಚ್ಯೂ ಆಫ್ ಯೂನಿಯನ್ ಎಂದು ಕರೆಯಲಾಗಿದ್ದು, ಪ್ರತಿಮೆ ಭಕ್ತಿ, ಶಕ್ತಿ ಮತ್ತು ಏಕತೆಯನ್ನು ಸಂಕೇತಿಸುತ್ತದೆ. ಆದರೆ ಈಗ ಟೆಕ್ಸಾಸ್ನ ರಿಪಬ್ಲಿಕ್ ಪಕ್ಷದ ನಾಯಕರೊಬ್ಬರು ಹನುಮಂತನನ್ನು ಟೀಕಿಸಿದ್ದು, ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.
ನಮ್ಮದು ಕ್ರಿಶ್ಚಿಯನ್ ರಾಷ್ಟ್ರ ಆದರೆ ಸುಳ್ಳು ಹಿಂದೂ...
ಎಲ್ಲಾ ರಾಜ್ಯ ಸರ್ಕಾರಗಳಲಲಿ ಹಬ್ಬಗಳ ನೆಪದಿಂದ ಆಗುತ್ತಿದ್ದ ದುಂದು ವೆಚ್ಚಕ್ಕೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಡಿವಾಣ ಹಾಕಿದೆ. ಹಬ್ಬಗಳಿಗೆ ಎಂದು ಸರ್ಕಾರದ ಹಣದಿಂದ ಉಡುಗೊರೆಗಳನ್ನು ಕೊಡುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಎಲ್ಲಾ ಸಚಿವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ದೀಪಾವಳಿ ಸೇರಿ ಯಾವುದೇ ಹಬ್ಬಕ್ಕೆ ಸಾರ್ವಜನಿಕರ ಹನ ಬಳಕೆಗೆ ನಿರ್ಬಂಧ ಹೇರಲಾಗಿದೆ. ಸೆ.19...
ನವರಾತ್ರಿಯ ಮೊದಲ ದಿನದಿಂದಲೇ ಕೇಂದ್ರ ಸರ್ಕಾರ ಜಾರಿ ಮಾಡಿದ ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ದೇಶದಾದ್ಯಂತ ಖರೀದಿ ಜ್ವರ ಏರಿಕೆಯಾಗಿದೆ. ಕಾರು, ಫ್ರಿಜ್, ಟಿವಿ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ವಿಶೇಷವಾಗಿ, ಕಾರು ಖರೀದಿಗೆ ಗ್ರಾಹಕರು ಮುಗಿ ಬಿದ್ದಿದ್ದು, ಹಬ್ಬದ ಖರೀದಿ ಭಾವನೆಗೆ ಹೊಸ GST...
ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತ ಬಾಲಕನೊಬ್ಬ, ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿದ್ದಾನೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ, ಘಟನೆ ಬೆಳಕಿಗೆ ಬಂದಿದೆ. ಬಳಿಕ ಅದೇ ವಿಮಾನದಲ್ಲಿ ಬಾಲಕನನ್ನು ವಾಪಸ್ ಕಳಿಸಲಾಗಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವೇಳೆ ಹಲವರು, ಅಮೆರಿಕ ಯುದ್ಧ ವಿಮಾನದ ರೆಕ್ಕೆ ಮೇಲೆ ಸಿಕ್ಕ ಸಿಕ್ಕ ಕಡೆ ಕುಳಿತಿದ್ದರು. ವಿಮಾನ ಮೇಲಕ್ಕೆ...
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ರಾಜಕಾರಣದ ಕಾಲಘಟ್ಟವನ್ನು, ಜವಾಹರಲಾಲ್ ನೆಹರು ಅವರ ಕಾಲಘಟ್ಟದೊಂದಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಭಾರತದ ವಿದೇಶಾಂಗ ನೀತಿಗೆ ಬೆನ್ನೆಲುಬಾಗಿ ನಿಲ್ಲುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಾವಧಿ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಆಡಳಿತಾವಧಿಗಿಂತ ಉತ್ತಮ ಎಂದು...
ಇಂದಿನಿಂದ ಜಾರಿಗೆ ಬರುತ್ತಿರುವ ಹೊಸ ಜಿಎಸ್ ಟಿ ಸುಧಾರಣಾ ಕ್ರಮ ದೇಶದ ತೆರಿಗೆ ವ್ಯವಸ್ಥೆಗೆ ದೊಡ್ಡ ಬದಲಾವಣೆ ತಂದಿದೆ. ಈಗಾಗಲೇ ಇದ್ದ ನಾಲ್ಕು ಜಿಎಸ್ ಟಿ ಸ್ಲ್ಯಾಬ್ಗಳನ್ನು ಸರಳಗೊಳಿಸಿ ಎರಡು ಮುಖ್ಯ ಸ್ಲ್ಯಾಬ್ಗಳಿಗೆ ಇಳಿಸಲಾಗಿದೆ. ಇಂದಿನಿಂದ ಶೇ. 5 ಮತ್ತು ಶೇ. 18 ಎಂಬ ಎರಡು ದರಗಳಷ್ಟೇ ಜಾರಿಯಲ್ಲಿರುತ್ತವೆ. ಇದಕ್ಕೆ ಹೆಚ್ಚುವರಿಯಾಗಿ, ಐಷಾರಾಮಿ ಹಾಗೂ...
ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ನೀಡಿದ ಹಣದಲ್ಲಿ 100 ಕೋಟಿ ರೂ.ಕ್ಕೂ ಅಧಿಕ ಲೂಟಿ ನಡೆದಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಭಾನು ಪ್ರಕಾಶ್ ರೆಡ್ಡಿ ಮಾಡಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರಾಗಿರುವ ಭಾನು ಪ್ರಕಾಶ್, ದೇವಸ್ಥಾನದ ಸಿಬ್ಬಂದಿ...
ನವರಾತ್ರಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಡಬಲ್ ಬೋನಸ್ ಘೋಷಿಸಿದ್ದಾರೆ. ಸೆಪ್ಟೆಂಬರ್ 22ರಿಂದ ನವರಾತ್ರಿ ಆರಂಭವಾಗುತ್ತಿರುವ ಬೆನ್ನಲ್ಲೇ ದೇಶದ ಜನತೆಗೆ ಸಂದೇಶ ನೀಡಿದ ಅವರು, ನಾಳೆಯಿಂದಲೇ ಪರಿಷ್ಕೃತ ಜಿಎಸ್ಟಿ ನೀತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಮನೆ ಕಟ್ಟುವುದು, ಬೈಕ್, ಸ್ಕೂಟರ್, ಕಾರು ಖರೀದಿ, ದಿನನಿತ್ಯ ಬಳಕೆಯ ವಸ್ತುಗಳು, ಔಷಧಿ ಇನ್ನು ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ...
ಮುಂಬೈನ ಕಾಂಡಿವಲಿ ಉಪನಗರದ ದೇವಾಲಯದಲ್ಲಿ 52 ವರ್ಷದ ಅರ್ಚಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆತಂಕ ಮೂಡಿಸಿದೆ. 19 ವರ್ಷದ ಯುವತಿಯೊಬ್ಬಳು ಅರ್ಚಕರ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಕೆಲವೇ ಗಂಟೆಗಳಲ್ಲೇ ಈ ಘಟನೆ ನಡೆದಿದೆ. ದೇವಾಲಯದೊಳಗೆ ಸೀಲಿಂಗ್ ಫ್ಯಾನ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು...