ರಾಜ್ಯದ ನಗರಾಭಿವೃದ್ಧಿ ಇಲಾಖೆ ಕೈಗೊಂಡಿರುವ ಹೊಸ ನಿರ್ಧಾರವು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊರತುಪಡಿಸಿ, ಕರ್ನಾಟಕದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ವೈದ್ಯಕೀಯ ಆರೋಗ್ಯಾಧಿಕಾರಿ ಹುದ್ದೆಯನ್ನು ಪರೋಕ್ಷವಾಗಿ ರದ್ದುಪಡಿಸಲು ಇಲಾಖೆ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಮೈಸೂರು ಮಹಾನಗರ ಪಾಲಿಕೆಯನ್ನು ಒಳಗೊಂಡಂತೆ ಈ ನಿರ್ಧಾರ ಜಾರಿಯಾಗುವ ಸಾಧ್ಯತೆ ಇದ್ದು, ಆರೋಗ್ಯಾಧಿಕಾರಿಗಳ ಜವಾಬ್ದಾರಿಗಳನ್ನು ವೈದ್ಯರ ಬದಲು ಅಧೀಕ್ಷಕ...
ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿರುವ ಎಚ್‌ಪಿವಿ ವಿರುದ್ಧ ಹೋರಾಡಲು ಲಸಿಕೆ ಕಂಡುಹಿಡಿಯಲಾಗಿದೆ. ಇದನ್ನು ಮುಂಚಿತವಾಗಿಯೇ ನೀಡಿದ್ರೆ ಭವಿಷ್ಯದಲ್ಲಿಈ ಕಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯು ಮೈಸೂರು ಜಿಲ್ಲೆಯ 9ರಿಂದ 14 ವರ್ಷದ, ಸುಮಾರು 27 ಸಾವಿರ ಹೆಣ್ಣು ಮಕ್ಕಳಿಗೆ ಚುಚ್ಚುಮದ್ದು ನೀಡಲು ಸಿದ್ಧತೆ ಮಾಡಿಕೊಂಡಿದೆ. ಮೈಸೂರಿನಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ, ಒಟ್ಟು 27...
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿರುವ ಆರೋಪ ಮಾಡಲಾಗಿದೆ.
ಆಸ್ಪತ್ರೆ ಎದುರು ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡಿದ ಘಟನೆ, ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಚಿಮಕೋಡ್ ಗ್ರಾಮದ 26 ವರ್ಷದ ಮೀನಾಕ್ಷಿ ಎಂಬುವರನ್ನು, ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಎಫ್‌ಪಿಎ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಏನೋ ಮುಗಿದಿದೆ.
ಬಳಿಕ ಶೌಚಾಲಯಕ್ಕೆ ತೆರಳುವ ವೇಳೆ ಬಾಣಂತಿ ಕುಸಿದು ಬಿದ್ದಿದ್ದಾರೆ. ಆ ವೇಳೆ ವೈದ್ಯರು ಇಂಜಕ್ಷನ್...
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದ ಘಟನೆಯೊಂದು, ಇಡೀ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಮಲಗುಂಡಿಯೊಳಗೆ ಕೂಲಿ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸಿ, ಬಳಿಕ ಅದೇ ಮಲವನ್ನು ಅವರ ತಲೆ ಮೇಲೆ ಹೊತ್ತು ಸಾಗಿಸುವಂತೆ ಮಾಡಿದ ಘಟನೆ ಸಂಭವಿಸಿದೆ.
ಕೂಸನೂರು ಗ್ರಾಮದ ಸುರೇಶ್ ಪೂಜಾರ ಮತ್ತು ಬಸವರಾಜ್ ಪೂಜಾರ ಎಂಬುವರ ಮನೆಗಳ ಮಲಗುಂಡಿಯನ್ನು...
ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೇಹದ ಉಷ್ಣತೆ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯೂ ಕುಸಿದು, ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಬೇಗ ತಗುಲುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಬೆಚ್ಚಗಿನ ಪಾನೀಯಗಳು ದೇಹಕ್ಕೆ ಒಳಗಿನ ಶೀತವನ್ನು ತಡೆಯಲು ಸಹಾಯ ಮಾಡುತ್ತವೆ.
ಶುಂಠಿ ಮತ್ತು ಅರಿಶಿನ ಚಹಾ ಚಳಿಗಾಲದ ಉತ್ತಮ ಆಯ್ಕೆ. ಶುಂಠಿಯ...
ಹವಾಮಾನ ತಂಪಾಗಿರುವಾಗ ಒಂದು ಕಪ್ ಬಿಸಿ ಕಾಫಿ ಅಥವಾ ಚಹಾ ಕುಡಿಯಬೇಕೆನಿಸುವುದು ಸಹಜ. ಚಳಿಯಲ್ಲಿ ಬಿಸಿ ಪಾನೀಯಗಳನ್ನು ಸಿಪ್ ಮಾಡುವುದು ಒಂದು ವಿಶೇಷ ಅನುಭವ. ಆದರೆ ಚಳಿಯನ್ನು ತಡೆಯಲು ಮತ್ತು ಸೋಮಾರಿತನ ಹೋಗಲಾಡಿಸಲು ಅದನ್ನು ಅತಿಯಾಗಿ ಸೇವಿಸುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ಚಳಿಗಾಲದಲ್ಲಿ ಜನರು ಬಿಸಿ ಆಹಾರ ಮತ್ತು ಪಾನೀಯಗಳಿಗೆ ಹೆಚ್ಚು...
ಸೀಬೆ ಅಥವಾ ಪೇರಳೆ ಹಣ್ಣಿನಲ್ಲಿ ಪೌಷ್ಟಿಕಾಂಶದ ಪ್ರಮಾಣ ತುಂಬಾ ಹೆಚ್ಚಾಗಿರುವುದರಿಂದ, ಇದನ್ನು ನಿಯಮಿತವಾಗಿ ಆದರೆ ಮಿತವಾಗಿ ಸೇವನೆ ಮಾಡುವುದರಿಂದ ಗರ್ಭಿಣಿಯರಿಗೆ ಅನೇಕ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ. ವಿಟಮಿನ್ ಸಿ ಹಾಗೂ ಶಕ್ತಿವರ್ಧಕ ಆಂಟಿ ಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ದೊಡ್ಡ ಪಾತ್ರವಹಿಸುತ್ತವೆ. ಕಿತ್ತಳೆ ಹಣ್ಣಿಗಿಂತಲೂ ಅಧಿಕ ವಿಟಮಿನ್ ಸಿ ಪೇರಳೆಯಲ್ಲಿ ದೊರೆಯುವುದರಿಂದ, ಚಳಿಗಾಲದಲ್ಲಿ ಇದನ್ನು...
ಟೊಮೇಟೊ ಹೆಚ್ಚು ತಿಂದರೆ ಕಿಡ್ನಿ ಸ್ಟೋನ್ ಬರುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ. ಇದರಿಂದ ಕೆಲವರು ಟೊಮೇಟೊ ಸೇವನೆ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಆದರೆ ಇದು ನಿಜವಾಗಿಯೂ ಕಾರಣವಾಗುತ್ತದೆಯೇ ಎಂಬ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯ ತಿಳಿದುಕೊಳ್ಳುವುದು ಮುಖ್ಯ.
ಆರೋಗ್ಯ ತಜ್ಞರ ಪ್ರಕಾರ, ಟೊಮೇಟೊ ಕಿಡ್ನಿ ಸ್ಟೋನ್‌ಗೆ ನೇರ ಕಾರಣವಾಗುವುದಿಲ್ಲ. ಟೊಮೇಟೊದಲ್ಲಿ ಆಕ್ಸಲೇಟ್ ಅಂಶ ಇರುವುದಾದರೂ ಅದು...
ಮೊಟ್ಟೆಗಳು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಅತ್ಯುತ್ತಮ ಆಹಾರ. ಮೊಟ್ಟೆಗಳು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತವೆ, ಸಕ್ಕರೆಯೊಂದಿಗೆ ಬೇಯಿಸಿದ ಅಥವಾ ಮೊಟ್ಟೆ ತಿಂದ ತಕ್ಷಣ ಸಿಹಿತಿಂಡಿ ಸೇವನೆ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಮೊಟ್ಟೆಗಳಲ್ಲಿರುವ ಅಮೈನೋ ಆಮ್ಲಗಳು ಸಕ್ಕರೆಯೊಂದಿಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.
ಸೋಯಾ ಹಾಲು ಮತ್ತು...
ನೀವು ದಿನವಿಡೀ ಕುಳಿತು ಕೆಲಸ ಮಾಡ್ತೀರಾ? ಆರೋಗ್ಯ ಕಾಪಾಡಿಕೊಳ್ಳಲು ಸಂಜೆ ಅಥವಾ ಬೆಳಿಗ್ಗೆ 10,000 ಹೆಜ್ಜೆ ನಡೆಯುತ್ತೀರಾ? ಹಾಗಿದ್ರೆ ಒಂದಷ್ಟು ಜಾಗ್ರತೆ, ವೈದ್ಯರ ಪ್ರಕಾರ, ದಿನವಿಡೀ ಒಂದೇ ಕಡೆ ಕುಳಿತುಕೊಂಡು ನಂತರ ಸಾವಿರ ಸಾವಿರ ಹೆಜ್ಜೆ ನಡೆದರೂ ಅದರ ಫಲ ಶೂನ್ಯ. ಬೆಳಿಗ್ಗೆ 9 ರಿಂದ ಸಂಜೆ 7ರವರೆಗೂ ಚಲನೆಯೇ ಇಲ್ಲದಿದ್ದರೆ, ನಂತರ ಮಾಡಿದ...