Saturday, February 7, 2026

ಕ್ರೈಂ

ಪ್ರೀತಿಸಿದ್ಳು… ಚಿತ್ರ ಹಿಂಸೆ ಕೊಟ್ಟ – ಅಚಲಾಳ ದುರಂತ ಅಂತ್ಯ ಕಥೆ

ಸ್ಪೇಷಲ್‌ ಸ್ಟೋರಿ:- ಮದುವೆಯಾಗುವ ಕನಸು ಹೊತ್ತು ಮನಸ್ಸು ಕೊಟ್ಟವಳು ಇಂದು ಮಸಣ ಸೇರಿದ್ದಾಳೆ. ಬೆಂಗಳೂರು ನಗರ… ಕನಸುಗಳ ನಗರ… ಕಾಲೇಜು ಜೀವನ, ಹೊಸ ಕೆಲಸ, ಭವಿಷ್ಯದ ಪ್ಲ್ಯಾನ್‌ಗಳು—ಎಲ್ಲವೂ ಮುಂದೆ ಇತ್ತು. ಆದರೆ ಮದುವೆಯಾಗುವ ಕನಸು ಹೊತ್ತು ಬದುಕಿದ 22 ವರ್ಷದ ಅಚಲಾ, ಒಂದು ದುಡುಕಿನ ಕ್ಷಣದಲ್ಲಿ ತನ್ನ ಜೀವವನ್ನೇ ಕಳೆದುಕೊಂಡಳು. ನಟಿ ಆಶಿಕಾ ರಂಗನಾಥ್ ಅವರ ಮಾವನ...

BBM ವಿದ್ಯಾರ್ಥಿನಿ ನಿಗೂಢ ಸಾವು : ಗೆಳತಿಯ ರೂಮ್‌ನಲ್ಲಿ ಏನಾಯ್ತು?

ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಯುವತಿಯೊಬ್ಬಳು ಹತ್ಯೆಯಾಗಿರುವ ಭೀಕರ ಘಟನೆ ನಡೆದಿದೆ. ಸ್ನೇಹಿತೆಯ ರೂಂಗೆ ಕರೆದುಕೊಂಡು ಹೋದ ಯುವಕನೇ ಕೊಲೆಗೈದಿದ್ದಾನೆ ಎನ್ನಲಾಗಿದೆ. ಮೃತ ಯುವತಿ 21 ವರ್ಷದ ದೇವಿಶ್ರೀ, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಳು. ಭಾನುವಾರ ಬೆಳಗ್ಗೆ ಪ್ರೇಮ್ ವರ್ಧನ್ ಎಂಬಾತನೊಂದಿಗೆ ಸ್ನೇಹಿತೆಯ...

ಡಿಕೆ ಜೊತೆ ವೇದಿಕೆ ಶೇರ್‌ ಮಾಡಿದ್ದ ವಂಚಕ ಅಂದರ್

ಪ್ರಧಾನಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಉನ್ನತ ಅಧಿಕಾರಿ ಅಂತಾ ಹೇಳಿಕೊಂಡು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದತ್ತು ಪುತ್ರ ಎಂದು ಬಿಂಬಿಸಿಕೊಂಡು, ವೈದ್ಯರೊಬ್ಬರಿಗೆ ಬರೋಬ್ಬರಿ 2.7 ಕೋಟಿ ರೂಪಾಯಿ ಪಂಗನಾಮ ಹಾಕಿದ ವಂಚಕನನ್ನ, ವಿಜಯನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ವಿಜಯನಗರದ ನಿವಾಸಿ ಸುಜಯ್ ಅಲಿಯಾಸ್ ಸುಜಯೇಂದ್ರ ಎಂದು ಗುರುತಿಸಲಾಗಿದೆ. ಈತ...

7 ಕೋಟಿ ದೋಚಿದ ಗ್ಯಾಂಗ್, ವೆಬ್ ಸೀರೀಸ್ ಲೆವೆಲ್ ಗೆ ಪ್ಲ್ಯಾನ್!

ಬೆಂಗಳೂರಿನಲ್ಲಿ RBI ಅಧಿಕಾರಿಗಳ ಸೋಗಿನಲ್ಲಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ನಡೆದಿದೆ. ಈ ಪ್ರಕರಣಕ್ಕೆ ಈಗ ವೆಬ್ ಸೀರೀಸ್‌ಗಳು ಸ್ಫೂರ್ತಿಯಾಗಿರಬಹುದೇ ಎಂಬ ಅನುಮಾನ ತನಿಖಾ ತಂಡಕ್ಕೆ ವ್ಯಕ್ತವಾಗಿದೆ. ಮೂರು ಪೊಲೀಸ್ ಠಾಣೆಗಳ ಗಡಿ ಭಾಗದಲ್ಲಿ ಆರೋಪಿಗಳು ದೋಚಿದ ವಾಹನವನ್ನು ಬಿಟ್ಟು ಹೋಗಿರುವುದು ಪ್ಲ್ಯಾನ್ ಬೇಸ್‌ನ ಆಪರೇಷನ್ ಆಗಿರಬಹುದೆಂಬ ಶಂಕೆಯನ್ನು ಗಾಢಗೊಳಿಸಿದೆ. ATM ಗಳಿಗೆ...

ರಿಯಲ್‌ ಲೈಫ್‌ ದೃಶ್ಯಂ ಮೂವಿ : ಭಯಾನಕ ಮರ್ಡರ್ ಮಿಸ್ಟರಿ!

ದೃಶ್ಯ ಸಿನಿಮಾ ನೆನಪಿಸುವಂತೆ ಸಾಲದ ಹಣಕ್ಕಾಗಿ ತನ್ನದೇ ಸೋದರ ಸಂಬಂಧಿಯನ್ನು ಆಂಧ್ರದ ಕುಪ್ಪಂಗೆ ಕರೆಸಿ, ಮನೆಯಲ್ಲಿ ಕೊಂದು, ನೆಲ ತೋಡಿ ಹೂತು, ಮೇಲಾಗಿ ನನಗೆ ಗೊತ್ತಿಲ್ಲ ಎಂದು ನಾಟಕವಾಡಿದ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಂಜಿನಿಯರ್‌ೊಬ್ಬರ ನಾಪತ್ತೆ ಪ್ರಕರಣ, ನಿಧಾನವಾಗಿ ಪೊಲೀಸರ ತೀವ್ರ ತನಿಖೆಯಿಂದ ಕ್ರೂರ ಕೊಲೆಕೇಸಾಗಿ ಮಾರ್ಪಟ್ಟಿದೆ. ಮೃತರಾದವರು 30 ವರ್ಷದ ಶ್ರೀನಾಥ್‌. ಆಂಧ್ರದ...

ಹುಬ್ಬಳ್ಳಿಯಲ್ಲಿ ಪ್ರೇಮ ಕಲಹ : ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರಿಗೆ ಚಾಕು ಇರಿತ!

ಹುಬ್ಬಳ್ಳಿ: ನಗರದ ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ನಡೆದ ಚಾಕು ಇರಿತ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ಪ್ರೇಮ ಸಂಬಂಧದ ಕಲಹವೇ ಈ ಹಿಂಸಾಚಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅಭಿಷೇಕ್ ಬಂಡಿವಂಡರ್ ಮತ್ತು ಮಾರುತಿ ಬಂಡಿವಂಡರ್ ಎಂಬ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ಮಣಿಕಂಠ ಮತ್ತು ಪವನ್ ಎಂಬ...

ಅಪ್ಪನ ಕೋಪಕ್ಕೆ ಹೊಟ್ಟೆಯಲ್ಲೇ ಮಗು ಸಾವು

ಮದುವೆಯಾದ 6 ತಿಂಗಳಿಗೆ ಪತ್ನಿಗೆ ಚಿತ್ರ ಹಿಂಸೆ ಕೊಡ್ತಿದ್ದ. ಗರ್ಭಿಣಿ ಅನ್ನೋದನ್ನೂ ನೋಡದೇ ಮಾರಕಾಸ್ತ್ರಗಳಿಂದಲೂ ಹಲ್ಲೆ ನಡೆಸಿದ್ದಾನೆ. ಪರಿಣಾಮ, ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು ಭೂಮಿಗೆ ಬರುವುದಕ್ಕೂ ಮುನ್ನವೇ ಸಾವನ್ನಪ್ಪಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ಘಟನೆ. ಮುಂಡಗೋಡ ತಾಲೂಕಿನ ಓಣಕೇರಿ ಗ್ರಾಮದ ಅಮೀರಬಿ ಮತ್ತು ಪಯಾಜ್ ಮತ್ತೆಸೂರು ಪ್ರೀತಿಸಿ ಮದುವೆಯಾಗಿದ್ರು. ಮದುವೆಗೆ ಮುಂಚಿತವೇ...

ಫ್ರೆಂಡ್‌ ಅಣ್ಣನ ಮೋಸಕ್ಕೆ 3 ತಿಂಗಳ ಗರ್ಭಿಣಿ ಸೂಸೈಡ್

ಸ್ನೇಹಿತೆಯ ಅಣ್ಣನನ್ನೇ ಪ್ರೀತಿಸುತ್ತಿದ್ದ ಯುವತಿ ಗರ್ಭಿಣಿಯಾಗಿದ್ಲು. ಮದುವೆಯಾಗುವಂತೆ ಕೇಳಿದ್ರೆ ಪ್ರೇಮಿ ನಿರಾಕರಿಸಿದ್ದಾನೆ. ಇದರಿಂದ ಮರ್ಯಾದೆಗೆ ಹಂಜಿದ ಯುವತಿ ಸಾವಿನ ದಾರಿ ಹಿಡಿದಿದ್ದಾಳೆ. ಪ್ರೇಮಿಯ ಬಣ್ಣದ ಬಣ್ಣ ಮಾತಿಗೆ ಮರಳಾಗಿ ಆತನ ಜೊತೆ ಯುವತಿ ಬೆರೆತುಹೋಗಿದ್ಲು. ಇದಕ್ಕೆ ಸಾಕ್ಷಿಯಾಗಿ ಒಡಲಲ್ಲಿ ಕುಡಿಯೊಂದು ಜೀವ ತಳೆದಿತ್ತು. ಈ ವಿಷಯವನ್ನ ಪ್ರೇಮಿಯ ಜೊತೆ ಹೇಳಿಕೊಂಡು, ಮದುವೆಯಾಗುವಂತೆ ಯುವತಿ ಕೇಳಿದ್ಲು. ಜೊತೆಗಿರುವಷ್ಟು...

ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಗು ಬಲಿ

ಮನೆಯ ಗೋಡೆ ಕುಸಿದು ಬಿದ್ದು ತಾಯಿ ಕಣ್ಣೆದುರೇ ಮಗು ಸಾವನ್ನಪ್ಪಿರುವ ಘಟನೆ, ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ. ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ, 1 ವರ್ಷದ 8 ತಿಂಗಳ ಪ್ರಣವ್ ಮೃತಪಟ್ಟಿದೆ. ನವೆಂಬರ್‌ 7ರ ಸಂಜೆ ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ, ಸಿಮೆಂಟ್ ಮಿಕ್ಸರ್ ಲಾರಿ ಹೋಗುತ್ತಿತ್ತು. ಈ ವೇಳೆ ಮೇಲೆ ಹಾದು...

ಇರುವೆಗಳಿಗೆ ಹೆದರಿ ಮಹಿಳೆ ಸೂಸೈಡ್

ತೆಲಂಗಾಣದಲ್ಲಿ ಮಹಿಳೆಯೊಬ್ರು ಇರುವೆಗಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಗಾರೆಡ್ಡಿ ಜಿಲ್ಲೆಯ 25 ವರ್ಷದ ಮಹಿಳೆಗೆ ಮೊದಲಿನಿಂದಲೂ ಇರುವೆ ಅಂದ್ರೆ ಭಯ ಇತ್ತಂತೆ. ಈ ಹಿಂದೆ ಮಂಚೇರಿಯ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇರುವೆಗಳಿಗೆ ಹೆದರುವ ರೋಗ ವಾಸಿಯಾಗಿರಲಿಲ್ಲ. ಆ ಮಹಿಳೆಗೆ 2022ರಲ್ಲಿ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಎಂದಿನಂತೆ ಪತಿ ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಹಿಂದಿರುಗಿದಾಗ ಬಾಗಿಲು...
- Advertisement -spot_img

Latest News

ಅಗ್ನಿ-3 ಕ್ಷಿಪಣಿ ಲಾಂಚ್ ಸಕ್ಸಸ್: ಪಾಕಿಸ್ತಾನ–ಚೀನಾಗೆ ನಡುಕ!

ಕಾರ್ಯತಂತ್ರದ ಪಡೆಗಳ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ–3...
- Advertisement -spot_img