Saturday, April 19, 2025

Latest Posts

ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದಕ್ಕೆ ಕಾರಣವೇನು ಗೊತ್ತೇ …?

- Advertisement -

Health tips:

ಮಾನವನ ದೇಹದಲ್ಲಿ ಜೀರ್ಣಕ್ರಿಯೆ ಅತೀ ಮುಖ್ಯ ಪಾತ್ರ ವಹಿಸುತ್ತದೆ, ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ಮನುಷ್ಯನಿಗೆ ಆರೋಗ್ಯ ಕೆಡುತ್ತದೆ. ಮೊದಲು ಹೊಟ್ಟೆಯು ಆರೋಗ್ಯವಾಗಿದ್ದರೆ ಸಂಪೂರ್ಣ ದೇಹ ಆರೋಗ್ಯವಾಗಿ ಇರುತ್ತದೆ ಎನ್ನುವ ಮಾತಿದೆ .

ಹಾಗಾದರೆ ಸರಿಯಾಗಿ ಜೀರ್ಣಕ್ರಿಯೆ ಆಗಬೇಕು ಎಂದರೆ ಏನು ಮಾಡಬೇಕು…? ಕೆಲವರು ಊಟ ಆದ ಬಳಿಕ ಹಣ್ಣನು ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಲೆಮನ್ ಟೀ ಕುಡಿದರೆ ಜೀರ್ಣಕ್ರಿಯೆ ಚೆನ್ನಾಗಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಬಿಸಿನೀರು ಕುಡಿದರೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ ಎನ್ನುತ್ತಾರೆ. ಹಾಗಾದರೆ ಜೀರ್ಣಕ್ರಿಯೆಗೆ ಯಾವುದು ಒಳ್ಳೆಯದು…?ಯಾವುದು ಕೆಟ್ಟದು ಎಂದು ತಿಳಿದುಕೊಳ್ಳೋಣ ಬನ್ನಿ .

ಕೆಲವೊಂದು ಆಹಾರಗಳನ್ನೂ ನಾವು ಯಾವುದು ಕೆಟ್ಟದೋ ಯಾವುದು ಒಳ್ಳೆಯದೋ ಎಂದು ತಿಳಿಯದೆ ಇಷ್ಟವಾದರೆ ಸಾಕು ತಿಂದು ಬಿಡುತ್ತೇವೆ. ಅದರೆ ರಿಂದ ಅಗುವ ಅಡ್ಡ ಪರಿಣಾಮಗಳು ನಮಗೆ ನಂತರ ತಿಳಿಯುತ್ತದೆ.ಕೆಲವೊಂದು ಆಹಾರಗಳು ತಿಂದು
ಜೀರ್ಣವಾಗದೆ ಗ್ಯಾಸ್, ಎದೆಯುರಿ,ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಹೊಟ್ಟೆಯಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಆಮ್ಲೀಯ ಪ್ರತಿರೋಧಕ ಮತ್ತು ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಆರೋಗ್ಯಕರವಾದ ಆಹಾರ ತಿನ್ನದೆ ಇದ್ದರೆ ಅದರಿಂದ ವಿವಿಧ ರೀತಿಯ ಅರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ ಇರುವುದು ಜೀರ್ಣಕ್ರಿಯೆಗೆ ತುಂಬಾ ಹಾನಿ ಉಂಟು ಮಾಡುತ್ತದೆ .

ಹಾಟ್ ಲೆಮನ್ ಟೀ , ನಿಂಬೆ ಹಣ್ಣಿನ ಬಿಸಿ ಚಹಾ ಜೀರ್ಣಕ್ರಿಯೆಗೆ ಜೀರ್ಣಕ್ರಿಯೆಗೆ ಅತ್ಯುತ್ತಮ ಸಂಜೀವಿನಿ ಎಂದು ಡಾಕ್ಟರ್ಸ್ ಹೇಳುತ್ತಾರೆ. ಅದರ ಜೊತೆಗೆ ನಿಂಬೆ, ಶುಂಠಿ ಹಾಗೂ ನೀರು ಕೂಡ ಉತ್ತಮ ಆಯ್ಕೆ ಎಂದು ತಿಳಿಸಿದ್ದಾರೆ. ಯಾಕೆಂದರೆ ನಿಂಬೆ ಮತ್ತು ಶುಂಠಿ ಎರಡೂ ವಸ್ತುಗಳು ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಇದು ಅಜೀರ್ಣದಿಂದ ಉಂಟಾಗುವ ಸಣ್ಣ ಹೊಟ್ಟೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಹಾಗಾದರೆ ಜೀರ್ಣವಾಗಲು ಕಷ್ಟವಾಗುವಂ ಕೆಲವು ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
. ಕಾರ್ಬೊಹೈಡ್ರೇಟ್ಸ್ ಅಧಿಕವಾಗಿ ಇರುವಂತಹ ಆಹಾರವನ್ನು ಸೇವಿಸಿದರೆ ಇದರಿಂದ ಹೊಟ್ಟೆಯಲ್ಲಿ ಉರಿಯೂತ ಉಂಟಾಗುತ್ತದೆ ಮತ್ತು ಆಲೂಗಡ್ಡೆಯಲ್ಲಿ ಅಧಿಕ ಕಾರ್ಬೋಹೈಡ್ರೇಟ್ಸ್ ಇರುತ್ತದೆ , ಇದರ ಅತಿಯಾದ ಸೇವನೆಯಿಂ ಜೀರ್ಣಕ್ರಿಯೆಗೆ ತೊಂದೆರೆಯಾಗಬಹು .

. ಪಾಸ್ತಾದಲ್ಲಿ ಅಧಿಕವಾಗಿ ಕಾರ್ಬೊಹೈಡ್ರೇಟ್ಸ್ ಇರುವುದರಿಂದ ಅತಿಹೆಚ್ಚು ಸೇವಿಸಿದರೆ ಕರುಳಿಗೆ ಹಾನಿ ಉಂಟಾಗುತ್ತದೆ .

.ಕರಿದ ತಿಂಡಿಯನ್ನು ತಿನ್ನುವುದರಿಂದ ದೇಹಕ್ಕೆ ಹಾನಿ ಉಂಟು ಮಾಡುತ್ತದೆ ಹಾಗು ದೇಹದ ತೂಕ ಹೆಚ್ಚಿಸುತ್ತದೆ ಅಲ್ಲದೆ ಇದರಿಂದ ಜೀರ್ಣಕ್ರಿಯೆಗೆ ಕಷ್ಟವಾಗುತ್ತದೆ .

. ಕೊಬ್ಬು ಅಧಿಕವಾಗಿ ಇರುವಂತಹ ಆಹಾರವನ್ನು ಸೇವಿಸಬಾರದು. ಐಸ್ ಕ್ರೀಮ್, ಸ್ಟೀಕ್, ಫ್ರೆಂಚ್ ಫ್ರೈ ಮತ್ತು ಇತರ ಕೆಲವೊಂದು ಆಹಾರಗಳನ್ನು ಜೀರ್ಣಿಸಲು ತುಂಬಾ ಕಷ್ಟ ಆದ್ದರಿಂದ ಇವುಗಳನ್ನು ಸೇವಿಸಬಾರದು .

. ನಮ್ಮ ಆರೋಗ್ಯವನ್ನು ಕೆಡಿಸುವಲ್ಲಿ ಸಂಸ್ಕರಿತ ಆಹಾರ (Processed food )ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಯಾವುದೇ ರೀತಿಯ ಪೋಷಕಾಂಶ ,ನಾರಿನಾಂಶವು ಇರುವುದಿಲ್ಲ ಹಾಗು ಇದು ಆರೋಗ್ಯವನ್ನು ಕೆಡಿಸುತ್ತದೆ .ಸಂಸ್ಕರಿತ ಆಹಾರವು ಟೈಪ್ 2 ಮಧುಮೇಹವನ್ನು ಹೆಚ್ಚಿಸುತ್ತದೆ ಹಾಗು ಹೃದಯದ ಸಮಸ್ಯೆಗೂ ಕಾರಣವಾಗುತ್ತದೆ. ಬೊಜ್ಜು ನಿರ್ಮಾಣದ ಜತೆಗೆ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಸೆಳೆತ ಉಂಟು ಮಾಡುತ್ತದೆ .

. ಕೆಲವರಿಗೆ ಖಾರ ತಿನ್ನುವುದರಿಂದ ಗ್ಯಾಸ್, ಹೊಟ್ಟೆ ಉಬ್ಬರ, ಎದೆಯುರಿ, ಮತ್ತು ಹೊಟ್ಟೆಯ ಸೆಳೆತ ಕಂಡುಬರುತ್ತದೆ ರಾತ್ರಿ ಮಲಗುವ ಮೊದಲು ಹೆಚ್ಚು ಖಾರದ ಆಹಾರ ಸೇವನೆ ಮಾಡಬಾರದು. ಇದರಿಂದ ಜೀರ್ಣವಾಗಲು ಕಷ್ಟವಾಗುತ್ತದೆ .

. ಜಠರಕರುಳಿನ ಸಮಸ್ಯೆ ಇರುವವರಿಗೆ ನಾರಿನಾಂಶವು ಹೆಚ್ಚಾಗಿರುವಂತಹ ಆಹಾರ ಸೇವನೆ ಮಾಡಲು ಕಷ್ಟವಾಗಬಹುದು.

. ಆಲ್ಕೋಹಾಲ್ ಹೊಟ್ಟೆ ಮತ್ತು ಲಿವರ್ ಗೆ ಹಾನಿಕಾರಕ ಮತ್ತು ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ . ಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡಿದರೂ ಇದು ಹೊಟ್ಟೆಯಲ್ಲಿ ಆಮ್ಲೀಯ ಪ್ರತಿರೋಧಕ ಮತ್ತು ಎದೆಯುರಿ ಉಂಟು ಮಾಡುತ್ತದೆ .ಆಲ್ಕೋಹಾಲ್ ನಲ್ಲಿ ಯಾವುದೆ ಕ್ಯಾಲರಿ ಇಲ್ಲ ಮತ್ತು ಇದು ಹೊಟ್ಟೆಯಲ್ಲಿ ಕೊಬ್ಬನ್ನು ಕರಗಿಸುವುದನ್ನು ನಿಧಾನಗೊಳಿಸುವುದು.

. ಹಾಲು ಮತ್ತು ಹಾಲಿನ ಉತ್ಪನ್ನಗಳು ಜೀರ್ಣವಾಗಲು ಕಷ್ಟವಾಗಬಹುದು ಇದರಲ್ಲಿ ಲ್ಯಾಕ್ಟೋಸ್ ಹೆಚ್ಚಾಗಿದೆ ಮತ್ತು ಇದು ಹಾಲಿನ ಉತ್ಪನ್ನದಲ್ಲಿ ಇರುವ ಸಕ್ಕರೆ ಅಂಶವಾಗಿದೆ. ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಇನ್ನಿತರ ಸಮಸ್ಯೆಗಳು ಬರಬಹುದು.ಹಾಲಿನ ಉತ್ಪನ್ನಗಳನ್ನು ಅತಿಯಾಗಿ ಸೇವಿಸಿದರೆ ಅದರಿಂದ ದೊಡ್ಡ ಕರುಳಿನ ಮೇಲೆ ಪ್ರಭಾವ ಬೀರುತ್ತದೆ . ಹಾಲಿನ ಉತ್ಪನ್ನಗಳನ್ನು ಕಡಿಮೆ ಮಾಡಿ ಮೊಸರು ಮತ್ತು ಚೀಸ್ ತಿಂದರೆ ಅದರಲ್ಲಿ ಲ್ಯಾಕ್ಟೋಸ್ ಕಡಿಮೆ ಇದೆ.

ರಕ್ತಹೀನತೆಗೆ ಇವುಗಳೇ ಕಾರಣ…?!

ಮಖಾನ ಬೀಜದ್ಲಲಿ ಅಡಗಿರುವ ಆರೋಗ್ಯ ರಹಸ್ಯಗಳು ಇಷ್ಟೊಂದಾ..?!

ಡಾರ್ಕ್ ಚಾಕೊಲೇಟ್ ಸೇವನೆ ಆರೋಗ್ಯಕ್ಕೆ ಉತ್ತಮ..?!

 

- Advertisement -

Latest Posts

Don't Miss