Wednesday, April 30, 2025

Latest Posts

Cauvery Water : ಕಾವೇರಿ ಕಿಚ್ಚು..! ನಾಳೆ ಮಂಡ್ಯ ಜಿಲ್ಲೆ ಬಂದ್

- Advertisement -

Mandya News : ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶದ ನೀಡಿದ್ದು, ಈ ಆದೇಶದ ವಿರುದ್ಧ ಈಗಾಗಲೇ ರಾಜ್ಯದೆಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಈ ವಿಚಾರವಾಗಿ ಇಂದು ಮಂಡ್ಯದಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ನಟ ಅಭಿಷೇಕ್‌ ಅಂಬರೀಶ್ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಭಾಗಿಯಾಗಿದ್ದರು.

– ಮಂಡ್ಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಹಲವಾರು ದಶಕಗಳಿಂದ ಕಾವೇರಿ ಸಮಸ್ಯೆ ಹಾಗೇ ಉಳಿದಿದೆ. ಆದ್ಯತೆ ಮೇರೆಗೆ ಕುಡಿಯುವ ನೀರು ಕೊಡಬೇಕು. ನಂತರ ವ್ಯವಸಾಯಕ್ಕೆ, ಬಳಿಕ ಕೈಗಾರಿಕಾ ಮತ್ತು ಇತರೆ ಬಳಕೆಗೆ ಎಂದು ಹೇಳಿದ್ದಾರೆ.
– ಅಭಿಷೇಕ್ ಅಂಬರೀಶ್​ – ಮತ್ತೆ ನೀರು ಹರಿಸಿದರೆ ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ
– ಜಿ ಪರಮೇಶ್ವರ್‌ : ಬಿಜೆಪಿಯವರು ಬೇರೆ ವಿಷಯದಲ್ಲಿ ರಾಜಕೀಯ ಮಾಡಲಿ, ಕಾವೇರಿ ವಿಚಾರದಲ್ಲಿ ಬೇಡ

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದೇ ತಡ ಇತ್ತ ಕರ್ನಾಟಕದಲ್ಲಿ ಆಕ್ರೋಶ ಭಯಗಿಲೆದ್ದಿದೆ. ಅನ್ನದಾತರು, ಕನ್ನಡಪರ ಸಂಘಟನೆಗಳ ಆಕ್ರೋಶದ ಕಟ್ಟೆಯೊಡೆದಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ರಸ್ತೆಗಳಿದು ಪ್ರತಿಭಟನೆ ಮಾಡಿವೆ. ನಾಳೆ ಮಂಡ್ಯ ಬಂದ್​ಗೆ ರೈತ ಸಂಘಟನೆಗಳು ಕರೆ ಕೊಟ್ಟಿವೆ. ಇನ್ನೊಂದೆಡೆ ನಾಳೆ ರಾಜ್ಯ ಸಂಸದರ ಮನೆಗಳಿಗೆ ಮುತ್ತಿಗೆ ಹಾಕಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ. ಇನ್ನೊಂದೆಡೆ ನಾಳೆ ಮಂಡ್ಯ ಬಂದ್ ನಡೆಯಲಿದ್ದು, ತಯಾರಿ ಮಾಡಿಕೊಳ್ಳಲಾಗ್ತಿದೆ.

ಪ್ರತಿಭಟನೆ ಎಲ್ಲೆಲ್ಲಿ?
– ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ. ರೈತರನ್ನು ವಶಕ್ಕೆ ಪಡೆದ ಪೊಲೀಸರು
– ಮಂಡ್ಯ : ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ
– ಬೆಂಗಳೂರಿನ ಎಸ್​ಬಿಎಂ ವೃತ್ತದಲ್ಲಿ ನಮ್ಮ ಕರ್ನಾಟಕ ಸೇನೆ ಪ್ರತಿಭಟನೆ
– ಧಾರವಾಡದ ಡಿಸಿ ಕಚೇರಿ ಎದುರು ಕರವೇ ಪ್ರತಿಭಟನೆ
– ದಾವಣಗೆರೆ : ಕರವೇ ಕಾರ್ಯಕರ್ತರಿಂದ ಸಂಸದ ಜಿಎಂ‌. ಸಿದ್ದೇಶ್ವರ ಕಚೇರಿಗೆ ಮುತ್ತಿಗೆ

 

Praladh jnoshi: ಕಾವೇರಿ ವಿಚಾರಕ್ಕೆ ಜೋಶಿ ರಾಜಿನಾಮೆ ಕೊಡಬೇಕು; ಮಹದೇವಪ್ಪ..!

- Advertisement -

Latest Posts

Don't Miss