Sunday, December 1, 2024

Latest Posts

Joshi: ಚೈತ್ರಾ ಕುಂದಾಪುರಗೆ ಗರಿಷ್ಠ ಶಿಕ್ಷೆಯಾಗಬೇಕು: ಪ್ರಹ್ಲಾದ್ ಜೋಶಿ..!

- Advertisement -

ಜಿಲ್ಲಾ ಸುದ್ದಿ: ಚೈತ್ರಾ ಕುಂದಾಪುರ ವಿರುದ್ದ ವಂಚನೆ ಪ್ರಕರಣದ ಕುರಿತು ಸಿಸಿಬಿ ಪೊಲೀಸರು ಬಂಧಿಸಿರುವ ವಿಚಾರವಾಗಿ ಮಾತನಾಡಿರುವ ಜೋಷಿಯವರು. ಚೈತ್ರ ಕುಂದಾಪುರಗೆ ಗರಿಷ್ಠ ಶಿಕ್ಷೆ ಕೊಡಬೇಕು ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಯಾರ್ ಯಾರೋ ದೊಡ್ಡವರ ಹೆಸರು ಹೇಳಿ ಟೋಪಿ ಹಾಕ್ತಿರ್ತಾರೆ.ಇದನ್ನು ಒಂದು ಪಕ್ಷಕ್ಕೆ ಜೋಡಿಸೋದು ಸರಿಯಲ್ಲ.

ಅವರು ಬಿಜೆಪಿ ಸ್ಟಾರ್ ಪ್ರಚಾರಕಿ ಅಲ್ಲಾ, ಸ್ಟಾರ್ ಪ್ರಚಾರಕಿ ಆಗೋಕೆ ಪದಾಧಿಕಾರಿಗಳಾಗಿರಾಬೇಕು. ನಮ್ಮ ಪಕ್ಷಕ್ಕೂ ಅವರಿಗೂ ಸಂಬಂಧ ಇಲ್ಲಾ ಅದರ ಬಗ್ಗೆ ತನಿಖೆ ಆಗ್ತಾ ಇದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ತುಂಬಾ ಮಾತಾಡ್ತಾ ಇದೆ ಕಾಂಗ್ರೆಸ್ ಪಕ್ಷ ಕಳೆದ ಹಲವು ವರ್ಷಗಳ ಹಿಂದೆ ಮಾರ್ಗರೆಟ್ ಆಳ್ವ ಅವರು ಟಿಕೆಟ್ ಮಾರಿದ್ದಾರೆ ಅಂದಿದ್ರು

ಕಾಂಗ್ರೆಸ್ ಪಕ್ಷ ನಿಮ್ಮ ನಡುವಳಿಕೆ ನೋಡಿಕೊಳ್ಳಿ ಚೈತ್ರಾ ಕುಂದಾಪುರ ಅವರ ಬಗ್ಗೆ ತನಿಖೆ ಆಗಲಿ, ಶಿಕ್ಷೆ ಆಗಲಿ ಕಾಂಗ್ರೆಸ್ ಪಕ್ಷ ತಲೆತಲಾಂತರದಿಂದ ಟಿಕೆಟ್ ಮಾರಾಟ ಮಾಡ್ತಾ ಇದ್ದೀರಿ. ಸರ್ಕಾರದ ಕಟ್ಟುನಿಟ್ಟಿನ ಕಾನೂನು ಇದೆ.20 ಸಾವಿರಕ್ಕಿಂತ ಹೆಚ್ಚು ಹಣವನ್ನು ಟ್ರಾನ್ಸಾಕ್ಷನ್  ಮಾಡಬಾರದು ಅಂತ ಇದೆ, ದುಡ್ಡು ಕೊಟ್ಟ ಉದ್ಯಮಿಗೆ ಬುದ್ಧಿ ಬೇಡ್ವಾ?

ಕುಂದಾಪುರ ಅವರ ಬಗ್ಗೆ ಯಾರಿಗೂ ಅನುಕಂಪ ಬರುವಂತಹ ಪ್ರಶ್ನೆನೇ ಇಲ್ಲ ತನಿಖೆ ಮಾಡುವಂತಹ ವಿಶೇಷ ತಂಡ ಈ ಬಗ್ಗೆ ತನಿಖೆ ಮಾಡಬೇಕು. ಇಷ್ಟು ದುಡ್ಡು ಎಲ್ಲಿಂದ ಬಂತು, ಇದು ಗಂಭೀರ ವಿಷಯ ರಾಜಕಾರಣದಲ್ಲೂ ಇದು ನಡೆದಿದೆ ಅಂತ ದೊಡ್ಡ ಸುದ್ದಿಯಾಗಿದೆ.ಈ ಕುರಿತು ಸಮಗ್ರ ತನಿಖೆ ನಡೆಸಲಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಜೋಷಿ ಹೇಳಿದರು.

Shakthi yojane century; ಶಕ್ತಿ ಯೋಜನೆಯ ಶತದಿನದ ಸಂಭ್ರಮ ಹಂಚಿಕೊಂಡ ಸಿಎಂ..!

ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಮುತಾಲಿಕ್ ವಿರುದ್ದ ದೂರು ದಾಖಲು..!

Chandrayana Ganesh; ಮದಿಹಾಳದಲ್ಲಿ ಪ್ರತಿಷ್ಠಾಪನೆಗೊಂಡಿದೆ ಚಂದ್ರಯಾನ-3 ಗಣಪತಿ

- Advertisement -

Latest Posts

Don't Miss