ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್‌ಗೆ ಇಂದು ಬೆಳ್ಳಂಬೆಳಿಗ್ಗೆ 6 ಗಂಟೆ ಸುಮಾರಿಗೆ ಸಿಬಿಐ ಶಾಕ್ ನೀಡಿದ್ದು, ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದೆ. ಇಷ್ಟೇ ಅಲ್ಲದೇ, ಡಿ.ಕೆ.ಸುರೇಶ್ ಮನೆ ಮೇಲೂ ಕೂಡ ಸಿಬಿಐ ದಾಳಿ ನಡೆಸಿದೆ.
ಸಿಬಿಐ ದಾಳಿ ವೇಳೆ 50 ಲಕ್ಷ ರೂಪಾಯಿ ಸಿಕ್ಕಿದ್ದು, ಮಗಳು ಐಶ್ವರ್ಯಾಗೆ ಸಂಬಂಧಿಸಿದ ಒಡವೆಗಳನ್ನ ಕೂಡ ಪರಿಶೀಲಿಸಲಾಗಿದೆ. ಈ ಬಗ್ಗೆ ಡಿಕೆಶಿ ತಾಯಿ ಗೌರಮ್ಮ ಕೂಡ ಆಕ್ರೋಶ ಹೊರಹಾಕಿದ್ದು, ನನ್ನ ಮಗನ ಮೇಲೆ ಸರ್ಕಾರಕ್ಕೆ ತುಂಬಾ ಪ್ರೀತಿ ಇದೆ. ಅದಕ್ಕೆ ಪದೇ ಪದೇ ಸಿಬಿಐ ರೇಡ್ ಮಾಡಿಸ್ತಿರ್ತಾರೆ ಎಂದಿದ್ದಾರೆ.
ಇನ್ನು ಸಿಬಿಐ ದಾಳಿ ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರು ರೋಡಿಗಿಳಿದು ಪ್ರತಿಭಟನೆ ನಡೆಸಿದರು. ಉಪಚುನಾವಣೆ ಹತ್ತಿರ ಬಂದಾಗಲೇ ಈ ರೀತಿ ಮಾಡುವುದು ತಪ್ಪು. ಇದು ಬಿಜೆಪಿ ದೌರ್ಜನ್ಯ ಎಂದು, ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಇಷ್ಟೇ ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಬಿಜೆಪಿಯವರಿಗೆ ನಾವು ಹೆದರಲ್ಲ. ಬಿಜೆಪಿ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರೇ ಮಕ್ಕಳಾಟ ಆಡಬೇಡಿ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಈ ಬಗ್ಗೆ ಮಾತನಾಡಿದ್ದು, ನಾವು ಪ್ರಾಮಾಣಿಕ ರಾಜಕಾರಣಿಯಾಗಿದ್ರೆ ಹೆದರಬೇಕಾಗಿಲ್ಲ. ನೋ ಕಾಮೆಂಟ್ಸ್ ಎಂದಿದ್ದಾರೆ.