www.karnatakatv.net : ಖಾಸಗಿ ಅಭ್ಯರ್ಥಿಗಳ ಸಿಬಿಎಸ್ ಇ ಬೋರ್ಡ್ ಪರೀಕ್ಷೆಗಳು ಆಗಸ್ಟ್ 16, 2021 ರಿಂದ ನಡೆಯಲಿವೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಬುಧವಾರ ಘೋಷಿಸಿದೆ.
ಸಿಬಿಎಸ್ಇ ಮಂಡಳಿಯು ಆಗಸ್ಟ್ 16, 2021 ಮತ್ತು ಸೆಪ್ಟೆಂಬರ್ 15, 2021 ರ ನಡುವೆ ಖಾಸಗಿ ವರ್ಗದ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಗಳನ್ನ ನಡೆಸುತ್ತದೆ. ಇನ್ನು ಉನ್ನತ ಶಿಕ್ಷಣದ ಪ್ರವೇಶದಲ್ಲಿ ಅವರಿಗೆ ಯಾವುದೇ ತೊಂದರೆ ಎದುರಾಗದಂತೆ ಅವರ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಈ ಸಂಬಂಧ ಅಧಿಸೂಚನೆಯನ್ನ ಶೀಘ್ರದಲ್ಲೇ ಹೊರಡಿಸಲಾಗುವುದು ಎಂದಿದೆ.
ಶಾಲೆಗಳು ಅಥವಾ ಮಂಡಳಿಯು ಮೌಲ್ಯಮಾಪನ ದಾಖಲೆಗಳನ್ನು ಹೊಂದಿಲ್ಲದ ಕಾರಣ ಪರೀಕ್ಷೆಗಳನ್ನ ನಡೆಸದೆ ಖಾಸಗಿ ಅಭ್ಯರ್ಥಿಗಳ ಫಲಿತಾಂಶವನ್ನ ಸಿದ್ಧಗೊಳಿಸಲು ಸಾಧ್ಯವಿಲ್ಲ’ ಎಂದು ಸಿಬಿಎಸ್ ಇ ಮಂಡಳಿ ಹೇಳಿದೆ.




