ಸಾಮಾನ್ಯವಾಗಿ ನೆಗಡಿ-ಜ್ವರ, ತಲೆನೋವು, ಮೈಕೈ ನೋವು ಬಂದಾಗ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಇದೇ ಪ್ಯಾರಾಸಿಟಮಾಲ್ ಜೀವಕ್ಕೆ ಮಾರಕವಾಗಬಹುದು ಎಂಬ ವಿಷಯ ಬೆಳಕಿಗೆ ಬಂದಿದೆ.
ಔಷಧ ನಿಯಂತ್ರಣ ಮಂಡಳಿಯು ಜ್ವರ ಮತ್ತು ಇತರೆ ರೋಗಗಳನ್ನು ನಿಯಂತ್ರಿಸಲು ಬಳಸಲಾಗುವ ಕೆಲವು ಜೀವರಕ್ಷಕ ಔಷಧಗಳನ್ನು ಭಾರತದಾದ್ಯಂತ ಗುಣಮಟ್ಟದ ಔಷಧಿಗಳಲ್ಲ ಎಂದು ಕಂಡುಹಿಡಿದಿದೆ. ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಾಸಿಟಮಾಲ್, ಪ್ಯಾಂಟಾಪ್ರಜೋಲ್ ಸೇರಿದಂತೆ ಕೆಲ ಆ್ಯಂಟಿಬಯೋಟೆಕ್‌ಗಳು ಒಳಗೊಂಡು 52 ಔಷಧಗಳ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ರಾಷ್ಟ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹೇಳಿದೆ.
ಬ್ಯಾಕ್ಟಿರಿಯಾಗಳಿಂದ ಉಂಟಾಗುವ ಸೋಂಕುಗಳಿಗೆ ಚಿಕಿತ್ಸೆ ನೀಡುವಾಗ ಆ್ಯಂಟಿಬಯಾಟಿಕ್ ಆಗಿ ಬಳಸುತ್ತಿರುವ 52 ಔಷಧಗಳ ಮಾದರಿಯನ್ನು ಪರೀಕ್ಷಿಸಿದಾಗ ಅವು ಉತ್ತಮ ಗುಣಮಟ್ಟ ಹೊಂದಿಲ್ಲದಿರುವುದು ತಿಳಿದುಬಂದಿದೆ. ಈ ಪೈಕಿ 22 ಔಷಧಿಗಳು ಹಿಮಾಚಲ ಪ್ರದೇಶದಲ್ಲಿ ಉತ್ಪಾದನೆಯಾಗುತ್ತಿವೆ. ಹಿಮಾಚಲವನ್ನು ಹೊರತು ಪಡಿಸಿ ಗುಜರಾತ್, ಆಂಧ್ರಪ್ರದೇಶ, ಇಂದೋರ್‌ನಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿದೆ.
DCGI ಯ ಪಟ್ಟಿಯಲ್ಲಿರುವ ಇತರ ಔಷಧಿಗಳಲ್ಲಿ ಮಲಬದ್ಧತೆಗೆ ಚಿಕಿತ್ಸೆ ನೀಡಲು ಬಳಸುವ ಲ್ಯಾಕ್ಟುಲೋಸ್ ದ್ರಾವಣ, ಅಧಿಕ ರಕ್ತದೊತ್ತಡದ ಔಷಧಿ ಟೆಲ್ಮಿಸಾರ್ಟನ್ ಮತ್ತು ಅಮ್ಲೋಡಿಪೈನ್ ಐಪಿ ಮಾತ್ರೆಗಳು, ಡೆಕ್ಸಾಮೆಥಾಸೊನ್ ಸೋಡಿಯಂ ಫಾಸ್ಫೇಟ್ ಇಂಜೆಕ್ಷನ್ ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಗಂಭೀರ ಸೋಂಕುಗಳನ್ನು ನಿರ್ವಹಿಸಲು ಬಳಸಲಾಗುತ್ತದೆ. ಅಲ್ಲದೆ, ಸಾಮಾನ್ಯವಾಗಿ ಅನ್ವಯಿಸುವ ಹೆನ್ನಾ ಮೆಹಂದಿ ಕೂಡ ಕಳಪೆ ಗುಣಮಟ್ಟದ್ದಾಗಿದೆ ಮತ್ತು ಸೌಂದರ್ಯವರ್ಧಕಗಳ ವರ್ಗದ ಅಡಿಯಲ್ಲಿ ನಿಗದಿಪಡಿಸಿದ ನಿಬಂಧನೆಗಳ ಪ್ರಕಾರ ತಪ್ಪಾಗಿ ಬ್ರಾಂಡ್ ಮಾಡಲ್ಪಟ್ಟಿದೆ ಎಂದು ಡ್ರಗ್ ರೆಗ್ಯುಲೇಟರ್ ಕಂಡುಹಿಡಿದಿದೆ.
ಔಷಧದ ಮಾದರಿಗಳನ್ನು ಕೇಂದ್ರ ಮತ್ತು ರಾಜ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. ಫೆಬ್ರವರಿಯಲ್ಲಿ, ಭಾರತದ ಡ್ರಗ್ ಕಂಟ್ರೋಲರ್ಸ್ ಜನರಲ್ ರಾಜೀವ್ ರಘುವಂಶಿ ಅವರು ಔಷಧಿಗಳ ಮಾದರಿಯನ್ನು ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳ ಗುಣಮಟ್ಟದ ಮೇಲೆ ನಿಗಾ ವಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದರು. ದೇಶದಲ್ಲಿ ಔಷಧಿಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಸಚಿವ ಜೆಪಿ ನಡ್ಡಾ ಅಧಿಕಾರಿಗಳಿಗೆ ಸೂಚಿಸಿದರು.