Bollywood Movie: ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಮ್ಮ ಪತ್ನಿ ಸೈರಾ ಬಾನುಗೆ ಕೆಲ ದಿನಗಳ ಹಿಂದಷ್ಟೇ ವಿಚ್ಛೇದನ ನೀಡಿದ್ದರು. ಕೆಲ ದಿನಗಳಲ್ಲೇ ನಾವು ನಮ್ಮ ಆ್ಯನಿವರ್ಸರಿ ಆಚರಿಸಿಕೊಳ್ಳಬೇಕಿತ್ತು. ಆದರೆ ನಮ್ಮ ವೈವಾಹಿಕ ಜೀವನವನ್ನು ಇಂದಿಗೆ ಅಂತ್ಯಗೊಳಿಸುತ್ತಿದ್ದೇವೆ ಎಂದಿದ್ದರು. ಈ ಸುದ್ದಿ ಹಲವರಿಗೆ ಶಾಕಿಂಗ್ ಸುದ್ದಿಯಾಗಿತ್ತು.
ಅದೇ ದಿನ ರೆಹಮಾನ್ ಬ್ಯಾಂಡ್‌ನಲ್ಲಿ ಇದ್ದ ಮೋಹಿನಿ ಡೇ ಎಂಬಾಕೆ ತನ್ನ ಪತಿಯ ಜೊತೆ ವಿಚ್ಛೇದನ ಘೋಷಿಸಿದ್ದಳು. ಹಾಗಾಗಿ ರೆಹಮಾನ್ ಮತ್ತು ಈಕೆಯ ನಡುವೆ ಸಂಬಂಧವಿರಬಹುದು. ಹಾಗಾಗಿ ರೆಹಮಾನ್ ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ಬಗ್ಗೆ ರೆಹಮಾನ್ ಪುತ್ರ ಮತ್ತು ಮಾಜಿ ಪತ್ನಿ ಸೈರಾಬಾನು ಇಬ್ಬರೂ ಸ್ಪಷ್ಟನೆ ನೀಡಿ, ರೆಹಮಾನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದರು.
ಇದೀಗ ಸ್ವತಃ ಮೋಹಿನಿ ಡೇ ಸೋಶಿಯಲ್ ಮೀಡಿಯಾದಲ್ಲಿ ಬಂದು, ರೆಹಮಾನ್ ಸರ್ ನನ್ನ ತಂದೆಗೆ ಸಮಾನ ಎಂದಿದ್ದಾರೆ. ನಾನು ರೆಹಮಾನ್ ಅವರ ಜೊತೆ ಬಾಲ್ಯದಿಂದ 8ವರೆ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ರೆಹಮಾನ್ ಸರ್ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು ನನ್ನ ತಂದೆಯ ಸಮಾನ. ಅವರಿಗೆ ನನ್ನ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ. ವಿನಾ ಕಾರಣ, ಅವರ ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ ಎಂದು ಹೇಳಿದ್ದಾರೆ.