- Advertisement -
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್‌ನಲ್ಲಿ ಗಣತಿದಾರರ ಮೇಲೆ ಹಲ್ಲೆ ಮತ್ತು ದಾಖಲೆ ಕಿತ್ತುಕೊಂಡ ಘಟನೆ ನಡೆದಿದೆ. ಸಮೀಕ್ಷೆಗಾಗಿ ಮನೆಗೆ ತೆರಳಿದ್ದ ಗಣತಿದಾರ ಜನಾರ್ಧನ ಅವರ ಬಳಿ, ಒಂದು ಕುಟುಂಬ ದಾಖಲೆ ಕಿತ್ತುಕೊಂಡು ನಂತರ ವಾಪಸು ಕಳಿಸಿದ್ದೆಂದು ಆರೋಪಿಸಲಾಗಿದೆ.
ಆ ಮನೆಯ R.R ನಂಬರ್ ಹಾಗೂ ರೇಷನ್ ಕಾರ್ಡ್ ಮಾಹಿತಿ ಕೇಳಿದ್ದಕ್ಕೆ ಕುಟುಂಬದ ಸದಸ್ಯರು ಗಣತಿದಾರರೊಂದಿಗೆ ವಾಗ್ವಾದ ನಡೆಸಿ ಗಲಾಟೆ ಮಾಡಿದ್ದಾರೆ. ವಿಚಾರ ತಿಳಿದ ಮೇಲ್ವಿಚಾರಕರು ಸ್ಥಳಕ್ಕೆ ಬಂದಾಗಲೂ ಅವರಿಗೆ ಅವಾಜ್ ಹಾಕಿ ವಾಪಸ್ಸು ಕಳಿಸಿರುವ ಘಟನೆ ನಡೆದಿದೆ.
ಈ ಘಟನೆ ಬಳಿಕ ಗಣತಿದಾರರು ಸಮೀಕ್ಷೆ ನಡೆಸಲು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಗಣತಿ ಕಾರ್ಯದ ಸಮಯದಲ್ಲಿ ಸುರಕ್ಷತೆ ಕೊರತೆಯಿಂದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ
- Advertisement -