ನವದಹಲಿ: ಮೋದಿ ಸರ್ಕಾರ ಮಂಡಿಸಿರೋ 2ನೇ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿರೋ ಕೇಂದ್ರ ಕೆಲ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ.
ಪ್ರಸಕ್ತ ಸಾಲಿನ ಆಯ ವ್ಯಯ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳ್ಳಿ ಆಭರಣಗಳ ಮೇಲೆ ಶೇ. 2.5ರಷ್ಟು ತೆರಿಗೆ ಏರಿಕೆ ಮಾಡಲಾಗಿದ್ದು, ಗೋಡಂಬಿ, ಕಾರು, ಬೈಕ್ ಬೆಲೆ ಕೂಡ ದುಬಾರಿಯಾಗಿದೆ. ಪ್ಲಾಸ್ಟಿಕ್, ಸೀಲಿಂಗ್ ಕವರ್, ಇಂಡಸ್ಟ್ರಿಯಲ್ ಆಸಿಡ್, ಮುದ್ರಣ ಕಾಗದದ ಶೇ.10ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಸ್ಟೈನ್ಲೆಸ್ ಸ್ಟೀಲ್ ಮೇಲೆ ಶೇ.2.5 ತೆರಿಗೆ ಏರಿಕೆ ಸೆರಾಮಿಕ್ ಟೈಲ್ಸ್ ಮೇಲೆ ಶೇ.5 ತೆರಿಗೆ ಏರಿಕೆ, ಪೀಠೋಪಕರಣ, ಎಸಿ, ಪಾಮ್ ಆಯಿಲ್, ರಬ್ಬರ್, ವಾಹನಗಳ ಬಿಡಿಭಾಗಗಳು, ಪಿವಿಸಿ, ಮಾರ್ಬಲ್, ಸಿಸಿಟಿವಿ ಕ್ಯಾಮರಾ, ಡಿವಿಡಿ, ಐಪಿ ಕ್ಯಾಮರಾಗಳು ದುಬಾರಿಯಾಗಿವೆ. ಇನ್ನು ತಂಬಾಕು ಉತ್ಪನ್ನಗಳ ಬೆಲೆ ಕೂಡ ದುಬಾರಿಯಾಗಿದೆ.
ಚಿನ್ನಕ್ಕೂ ಹಾಕಿದ್ರು ಟ್ಯಾಕ್ಸ್…! ಮಿಸ್ ಮಾಡದೇ ಈ ವಿಡಿಯೋ ನೋಡಿ