Friday, December 27, 2024

Latest Posts

ಕೇಂದ್ರ ಸರ್ಕಾರ ಹೊಸ ಸಹಕಾರಿ ನೀತಿಯನ್ನು ರೂಪಿಸಲು ನಿರ್ಧಾರ..!

- Advertisement -

www.karnatakatv.net: ಹೊಸ ಸಹಕಾರ ನೀತಿಯನ್ನು ರೂಪಿಸಲು ಕೇಂದ್ರ ಸರ್ಕಾರ  ನಿರ್ಧರಿಸಿದೆ  ಮತ್ತು ಸಹಕಾರಿ ಚಳುವಳಿಯನ್ನು ಬಲಪಡಿಸಲು ರಾಜ್ಯಗಳ ಜೊತೆ ಕೆಲಸವನ್ನು ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

 ಹಾಗೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆಗಳನ್ನು 3 ಲಕ್ಷಕ್ಕೆ ಮುಂದಿನ ಐದು ವರ್ಷಗಳಲ್ಲಿ ಹೆಚ್ಚಿಸಲಾಗುವುದು ಎಂದು ಹೇಳಿದರು. ಪ್ರಸ್ತುತ, ಸುಮಾರು 65,000 ಪಿಎಸಿಗಳಿವೆ.

ಶಾ ರಾಷ್ಟ್ರೀಯ ಸಹಕಾರಿ ಸಮಾವೇಶ ಉದ್ದೇಶಿಸಿ ಮಾತನಾಡಿ, ಈ ವರ್ಷ ಜುಲೈನಲ್ಲಿ ಸಹಕಾರಿ ಸಚಿವಾಲಯಗಳನ್ನು ರಚಿಸಲಾಯಿತು. ‘ಸಹಕಾರಿ ವಲಯ ರಾಜ್ಯದ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಏಕೆ ಈ ಹೊಸ ಸಚಿವಾಲಯವನ್ನು ರಚಿಸಿತು ಎಂದು ಕೆಲವರು ಯೋಚಿಸುತ್ತಾರೆ. ಆದರೆ ಅದಕ್ಕೆ ಕಾನೂನಾತ್ಮಕ ಪ್ರತಿಕ್ರಿಯೆ ನೀಡುತ್ತೇವೆ. ಈ ಬಗ್ಗೆ ನಾನು ಹೆಚ್ಚು ವಾದ ಮಾಡಲು ಬಯಸುವುದಿಲ್ಲ’ ಎಂದರು.

ಈ ವಿಚಾರವಾಗಿ ಕೇಂದ್ರ ಸರ್ಕಾರ ರಾಜ್ಯಗಳ ಜೊತೆಗೆ ಸಹಕರಿಸುತ್ತದೆ ಮತ್ತು ಯಾವುದೇ ಘರ್ಷಣೆ ಇರುವುದಿಲ್ಲ ಎಂದು ಅಮಿತ್ ಶಾ ತಿಳಿಸಿದ್ರು. ಹಾಗೇ ಈ ಸಮಾರಂಭದಲ್ಲಿ ವಿವಿಧ ಸಹಕಾರಿ ಸಂಘಗಳ 2100 ಪ್ರತಿನಿಧಿಗಳು ಮತ್ತು ಸುಮಾರು 6 ಕೋಟಿ ಜನರು ಆನ್ ಲೈನ್ ಮೂಲಕ ಭಾಗವಹಿಸಿದ್ದರು.

- Advertisement -

Latest Posts

Don't Miss