www.karnatakatv.net: ಜೈಕೋವ್-ಡಿ ಮಕ್ಕಳ ಮೊದಲ ಕೊರೊನಾ ಲಸಿಕೆಯಾಗಿದ್ದು, ಇದರ ಬೆಲೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಾತನಾಡಿ, ”ಜೈಕೋವ್-ಡಿಲಸಿಕೆಯ ಬೆಲೆಯನ್ನು ಅಂತಿಮಗೊಳಿಸಲಾಗಿದೆ, ಭಾರತದ ಡ್ರಗ್ ಕಂಟ್ರೋಲರ್ ಜನರಲ್‌ನಿಂದ ತುರ್ತು ಬಳಕೆಯ ಅನುಮತಿಯನ್ನು ಪಡೆದ ಬಳಿಕ ತಯಾರಕರು ತಕ್ಷಣವೇ ಲಸಿಕೆಯ ಉತ್ಪಾದನೆ ಆರಂಭಿಸಿದ್ದಾರೆ” ಎಮದು ಹೇಳಿದರು. ಮೂಲಗಳ ಪ್ರಕಾರ ಲಸಿಕೆಯ ಬೆಲೆ ಕುರಿತು ಸರ್ಕಾರ ಮಾತುಕತೆ ನಡೆಸಿದೆ, ತಯಾರಕರು ಬೇಡಿಕೆ ಇಟ್ಟಿದ್ದಕ್ಕಿಂತ ಕಡಿಮೆ ಆದರೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ಗೆ ಸರ್ಕಾರವು ಪಾವತಿಸುವುದಕ್ಕಿಂತ ಹೆಚ್ಚು ಬೆಲೆ ಎನ್ನಲಾಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಖುದ್ದಾಗಿ ಈ ಕುರಿತು ಮಾಹಿತಿ ನೀಡಲಿದೆ.
12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆಯನ್ನು ನೀಡಬಹುದಾಗಿದ್ದು, ಭಾರತದಲ್ಲಿ ಜೈಡಸ್ ಕ್ಯಾಡಿಲಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಭಾರತೀಯ ಔಷಧ ನಿಯಂತ್ರಕ ಜೈಡಸ್ ಕ್ಯಾಡಿಲಾ ಅವರ ಮೂರು ಡೋಸ್ ಗಳ ಡಿಎ ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಅನುಮೋದಿಸಿದೆ.
ದೇಶದಲ್ಲಿ ಬಳಕೆಗೆ ಅಧಿಕೃತವಾಗಿ ಲಭ್ಯವಾದ 6ನೇ ಕೊರೊನಾ ಲಸಿಕೆ ಇದಾಗಿದೆ. ಭಾರತ ಮಕ್ಕಳಿಗೆ ಮೊದಲ ಲಸಿಕೆಯನ್ನು ಅನುಮೋದಿಸಿದೆ. ದೇಶದಲ್ಲಿ ಮುಂಬರುವ ಕೊರೊನಾ ಅಲೆ ಎಚ್ಚರಿಕೆಯ ನಡುವೆ ಸಕಾಲಿಕ ಕ್ರಮ ಇದಾಗಿದೆ. ಕೆಲವು ತಜ್ಞರು ಕೊರೊನಾ 3ನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ. . ಭಾರತದಲ್ಲಿ ಇದುವರೆ ನಡೆದ ಅತಿದೊಡ್ಡ ಲಸಿಕಾ ಪ್ರಯೋಗ ಇದಾಗಿದೆ.12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಈ ಜೈಕೋವ್-ಡಿ ಲಸಿಕೆ ಬಹಳ ಪರಿಣಾಮಕಾರಿಯಾಗಲಿದೆ.
ಮುಂದಿನ ವರ್ಷ ಆಗಸ್ಟ್ ವೇಳೆಗೆ ಪ್ರತಿ ತಿಂಗಳು 5 ಕೋಟಿ ಜೈಕೋವ್-ಡಿ ಲಸಿಕೆಗಳನ್ನು ಉತ್ಪಾದನೆ ಮಾಡಲಾಗುವುದು. ಭಾರತ ಮೂಲಕ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಗೆ ಈಗಾಗಲೇ ಅನುಮತಿ ಸಿಕ್ಕು, ಎಲ್ಲೆಡೆ ವಿತರಣೆ ಮಾಡಲಾಗುತ್ತಿದೆ. ಅದರ ಬಳಿಕ ಭಾರತ ಮೂಲದ ಎರಡನೇ ಕೊವಿಡ್ ಲಸಿಕೆಯೆಂಬ ಹೆಗ್ಗಳಿಕೆಗೆ ಜೈಕೋವ್-ಡಿ ಲಸಿಕೆ ಪಾತ್ರವಾಗಿದೆ. ಭಾರತದಲ್ಲಿ ಈಗಾಗಲೇ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ, ಮಾಡೆರ್ನಾ, ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳ ಬಳಕೆಗೆ ಅನುಮತಿ ಸಿಕ್ಕಿದೆ. ಇದರ ಜೊತೆಗೆ ಜೈಕೊವ್-ಡಿ ಮೂರು ಡೋಸ್ ನ ಲಸಿಕೆಯ ತುರ್ತು ಬಳಕೆಗೂ ಅನುಮತಿ ಸಿಗುವ ಮೂಲಕ ಭಾರತದಲ್ಲಿರುವ ಕೊವಿಡ್ ಲಸಿಕೆಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.