International News: ಸಿರಿಯಾಕ್ಕೆ ಬಂಡುಕೋರರು ನುಸುಳಿ ಅಲ್ಲಿನ ಅಧ್ಯಕ್ಷ ದೇಶ ಬಿಟ್ಟು ಪಲಾಯನ ಮಾಡುವಂತೆ ಮಾಡಿ, ಸಿರಿಯಾವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಭಾರತ ಸರ್ಕಾರ, ಸಿರಿಯಾದಲ್ಲಿ ಇದ್ದ 75 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಸದ್ಯ ಭಾರತೀಯ ನಾಗರಿಕರು ಲೆಬನಾನ್‌ನಲ್ಲಿ ಇದ್ದು ಕೆಲವೇ ದಿನಗಳಲ್ಲಿ ಅವರನ್ನು ಭಾರತಕ್ಕೆ ಕರೆತರಲಾಗುತ್ತದೆ. ಸಿರಿಯಾದ ಸೈದಾ ಜೈನಾಬ್ ಎಂಬ ಸ್ಥಳದಲ್ಲಿ ಭಾರತೀಯರು ಸಿಲುಕಿಕೊಂಡಿದ್ದರು. ವಿಷಯ ತಿಳಿದ ಅವರ ಸಂಬಂಧಿಕರು ಭಾರತ ಸರ್ಕಾರಕ್ಕೆ ಮನವಿ ಮಾಡಿ, ಭಾರತ ಸರ್ಕಾರ, ಸಿರಿಯಾದ ಭಾರತೀಯ ಅಂಬಾಸೀಡರ್ ಮೂಲಕ ಭಾರತೀಯರನ್ನು ರಕ್ಷಿಸಿದೆ. ಭಾರತೀಯ ನಾಗರಿಕರಿಗೆ ಸದಾ ಭಾರತದ ರಾಯಭಾರಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
ಅರ್ಧ ದಶಕಗಳ ಕಾಲ ಸಿರಿಯಾದಲ್ಲಿ ಒಂದೇ ಕುಟುಂಬದವರು ಆಳ್ವಿಕೆ ನಡೆಸಿದ್ದು, 2011ರಿಂದಲೇ ಅವರನ್ನು ಕೆಳಗಿಳಿಸಲು, ಅಂತರ್ಯುದ್ಧ ನಡೆಯುತ್ತಲೇ ಇತ್ತು. ಇದೀಗ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್‌ನನ್ನು ದೇಶ ಬಿಟ್ಟು ಓಡಿಸುವ ಮೂಲಕ, ಅಂತರ್ಯುದ್ಧ ಕೊನೆೊಗೊಂಡಿದೆ.
ಇಷ್ಟು ವರ್ಷ ಸಿರಿಯಾದ ಮಹಿಳೆಯರು ಧಾರ್ಮಿಕವಾಗಿ ಧರಿಸುವ ದಿರಿಸನ್ನೇ ಧರಿಸಬೇಕು ಎಂಬ ನಿಯಮವಿತ್ತು. ಆದರೆ ಈಗ ಬಂದಿರುವ ಬಂಡುಕೋರರು, ಹೆಣ್ಣು ಮಕ್ಕಳು ತಮಗಿಷ್ಟವಾದ ಬಟ್ಟೆಯನ್ನು ತಾವು ಧರಿಸಬಹುದು. ಉಡುಪು ಧರಿಸುವ ಪೂರ್ಣ ಸ್ವಾತಂತ್ರ್ಯವನ್ನು ಮಹಿಳೆಯರಿಗೆ ನೀಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ.