ಕಾರ್ಮಿಕರ ಮಕ್ಕಳಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ – ₹25,000ವರೆಗೆ ವಿದ್ಯಾರ್ಥಿವೇತನ!

ಬೀಡಿ ಕಾರ್ಮಿಕರು, ಸಿನಿಮಾ ರಂಗದ ಕಾರ್ಮಿಕರು ಅಥವಾ ಗಣಿ ಕಾರ್ಮಿಕರ ಕುಟುಂಬದ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ 25 ಸಾವಿರ ರೂಪಾಯಿವರೆಗೆ ವಿದ್ಯಾರ್ಥಿವೇತನ ಸಿಗಲಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ 2026-27ನೇ ಸಾಲಿನ ಈ ಸ್ಕಾಲರ್‌ಶಿಪ್‌ಗೆ ಈಗ ಅಧಿಕೃತವಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಂದನೇ ತರಗತಿಯಿಂದ ಹಿಡಿದು ಪ್ರೊಫೆಷನಲ್ ಡಿಗ್ರಿ ಹಾಗೂ ಉನ್ನತ ಶಿಕ್ಷಣದವರೆಗೆ ಓದುವ ವಿದ್ಯಾರ್ಥಿಗಳಿಗೆ ಈ ಆರ್ಥಿಕ ನೆರವು ಲಭ್ಯವಿರಲಿದೆ. ಇದರ ಅಡಿಯಲ್ಲಿ 1 ರಿಂದ 4ನೇ ತರಗತಿಗೆ 1,000 ರೂ., 5 ರಿಂದ 8ನೇ ತರಗತಿಗೆ 1,500 ರೂ., 9-10ನೇ ತರಗತಿಗೆ 2,000 ರೂ. ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 3,000 ರೂ. ವರೆಗೆ ಧನಸಹಾಯ ಸಿಗಲಿದೆ.

ಇದಲ್ಲದೆ ಐಟಿಐ, ಪಾಲಿಟೆಕ್ನಿಕ್ ಹಾಗೂ ಸಾಮಾನ್ಯ ಪದವಿ ಓದುವವರಿಗೆ 6,000 ರೂಪಾಯಿ ದೊರೆತರೆ, ಎಂಜಿನಿಯರಿಂಗ್, ಮೆಡಿಕಲ್ ಮುಂತಾದ ವೃತ್ತಿಪರ ಪದವಿ ಕೋರ್ಸ್‌ಗಳನ್ನು ವ್ಯಾಸಂಗ ಮಾಡುವವರಿಗೆ ಗರಿಷ್ಠ 25,000 ರೂಪಾಯಿ ವರೆಗೆ ಸ್ಕಾಲರ್‌ಶಿಪ್ ಸಿಗಲಿದೆ ಎಂದು ತಿಳಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಬಾರಿ ಒನ್ ಟೈಮ್ ರಿಜಿಸ್ಟ್ರೇಷನ್ ಕಡ್ಡಾಯವಾಗಿದ್ದು, ವಿದ್ಯಾರ್ಥಿಯ ಫೋಟೋ, ಪೋಷಕರ ಲೇಬರ್ ಐಡಿ ಕಾರ್ಡ್, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ ಮತ್ತು ಅಂಕಪಟ್ಟಿಗಳು ಅಗತ್ಯವಿರುತ್ತವೆ.

ಸ್ವಂತವಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಿಎಸ್‌ಸಿ (CSC) ಕೇಂದ್ರಗಳ ಮೂಲಕ ಅರ್ಜಿ ಹಾಕಬಹುದು. 1 ರಿಂದ 10ನೇ ತರಗತಿಯವರೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31, 2026 ಹಾಗೂ 11ನೇ ತರಗತಿಯಿಂದ ವೃತ್ತಿಪರ ಕೋರ್ಸ್‌ಗಳವರೆಗೆ ಅಕ್ಟೋಬರ್ 31, 2026 ಕೊನೆಯ ದಿನವಾಗಿದೆ.

About The Author