Sunday, September 8, 2024

Latest Posts

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ನಟಿ ಸುಧಾಗೆ ಆದ ಅವಮಾನಕ್ಕೆ ಕ್ಷಮೆ ಕೇಳಿದೆ..!

- Advertisement -

www.karnatakatv.net: ಕೃತಕ ಕಾಲುಗಳನ್ನು ಬಿಚ್ಚಿ ತಪಾಸಣೆ ಮಾಡಿ ಸಮಸ್ಯೆಯನ್ನು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವುದನ್ನು ಕುರಿತು ನಟಿ, ನೃತ್ಯಪಟು ಸುಧಾ ಚಂದ್ರನ್ ವಿಡಿಯೋ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಸುಧಾ ಚಂದ್ರನ್ ಅವರಿಗೆ ಆದ ಸಮಸ್ಯೆಯನ್ನು ಅವರು ವಿಡಿಯೋ ಮಾಡುವ ಮೂಲಕ ತಮ್ಮ ಬೇಸರವನ್ನು ವ್ತಕ್ತಪಡಿಸಿ ಅದರಲ್ಲಿಯೇ ನೇರವಾಗಿ ಮೋದಿ ಅವರಿಗೆ ಮನವಿಯನ್ನು ಸಹ ಮಾಡಿಕೊಂಡಿದ್ದಾರೆ. ಆದರೆ ಈಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ವಿಮಾನ ನಿಲ್ದಾಣದಲ್ಲಿ ಅವರಿಗಾದ ಅವಮಾನಕ್ಕೆ ಕ್ಷಮೆಯನ್ನು ಸಹ ಕೇಳಿದೆ. ಸಾಮಾಜಿಕ ಜಾಲತಾಣದ ಮುಖಾಂತರ ಸಿಐಎಸ್ ಎಫ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮಹಿಳಾ ಅಧಿಕಾರಿ ಸುಧಾ ಅವರಿಗೆ ಕೃತಕ ಕಾಲನ್ನು ಬಿಚ್ಚಿಸಿ ತಪಾಸಣೆ ನಡೆಸಿದ ಕಾರಣವನ್ನು ಪರಿಶೀಲಿಸಲಾಗುವುದು ಎಂದಿದೆ.

ಸುಧಾ ಅವರು ಮೋದಿ ಅವರಿಗೆ ಟ್ಯಾಗ್ ಮಾಡಿ ವಿಡಿಯೋವನ್ನು ಹಂಚಿಕೊoಡಿದ್ದ ಪೋಸ್ಟ್ ಗೆ ಸಿಐಎಸ್ ಫ್ ಪ್ರತಿಕ್ರಿಯೆಯಬನ್ನು ನೀಡಿದ್ದಾರೆ, ‘ಸುಧಾ ಚಂದ್ರನ್ ಅವರಿಗಾಗಿರುವ ಸಮಸ್ಯೆಗೆ ವಿಷಾದಿಸುತ್ತೇವೆ. ತಪಾಸಣೆಯ ಸಮಯದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕೃತಕ ಕಾಲನ್ನು ಬಿಚ್ಚಿ ಪರಿಶೀಲಿಸಲಾಗುತ್ತದೆ. ಈ ಪ್ರಕರಣದಲ್ಲಿ ಮಹಿಳಾ ಅಧಿಕಾರಿ ಕಾಲನ್ನು ಬಿಚ್ಚಿಸಲು ಕಾರಣವೇನು ಎಂಬುದನ್ನು ಪರಿಶೀಲಿಸುತ್ತೇವೆ. ನಮ್ಮೆಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ನಿಯಮಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಸುಧಾ ಚಂದ್ರನ್ ಅವರಿಗೆ ಭರವಸೆ ನೀಡುತ್ತೇವೆ. ಈ ಮೂಲಕ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಸಿಐಎಸ್?ಎಫ್ ತಿಳಿಸಿದೆ.

ಹಾಗೇ ”ನನಗಾಗುತ್ತಿರುವ ಸಮಸ್ಯೆ ಮಾನವೀಯ ದೃಷ್ಟಿಯಿಂದ ಸಾಧುವೇ, ಇದೇ ದೇಶವೇ ನನ್ನ ಸಾಧನೆಯ ಬಗ್ಗೆ ಕೊಂಡಾಡಿದ್ದು? ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಗೆ ನೀಡುವ ಗೌರವವೇ ಇದು? ಪ್ರಧಾನಿಯವರೇ ದಯವಿಟ್ಟು ಹಿರಿಯ ನಾಗರಿಕರಿಗೆ ಹಿರಿಯ ನಾಗರಿಕ ಎಂಬ ಗುರುತಿನ ಚೀಟಿ ನೀಡಿ. ಇದು ನನ್ನ ವಿನಮ್ರ ಕೋರಿಕೆ” ಎಂದು ಕೋರಿಕೊಂಡಿದ್ದರು. ಬಪ್ರತೀ ಬಾರಿ ಕೃತಕ ಕಾಲನ್ನು ಬಿಚ್ಚಿ ತೋರಿಸುವುದು ಸಂಪೂರ್ಣವಾಗಿ ನೋವುಂಟು ಮಾಡುತ್ತದೆ ಎಂದು ಅವರು ಬೇಸರ ಹೊರಹಾಕಿದ್ದರು. ತಮ್ಮ ಸಂದೇಶ ಕೇಂದ್ರದ ಅಧಿಕಾರಿಗಳಿಗೆ ತಲುಪಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತಾಗಲಿ ಎಂದೂ ಅವರು ಆಶಿಸಿದ್ದರು. ಇದೀಗ ಸಿಐಎಸ್ ಎಫ್ ಈ ಕುರಿತು ಪ್ರತಿಕ್ರಿಯಿಸಿದ್ದು, ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.

- Advertisement -

Latest Posts

Don't Miss