Wednesday, June 19, 2024

Latest Posts

ಕೋರ್ಟ್ ನಲ್ಲಿ ನಟಿ ಸಮಂತಾಗೆ ಹಿನ್ನಡೆ..!

- Advertisement -

ನಟಿ ಸಮಂತಾ –ನಾಗಚೈತನ್ಯ ವಿಚ್ಚೇಧನ ಆಗಿ ಹೋಗಿದೆ. ಆದ್ರೆ  ಇದಕ್ಕೂ ಮೊದಲು ಇವರಿಬ್ಬರ ಬಗ್ಗೆ ಸಾಕಷ್ಟುಗಾಳಿ ಸುದ್ದಿಹರಿದಾಡುತ್ತಿದ್ವು. ಇದರಿಂದ ಸಿಡಿದೆದ್ದಿದ್ದ ಸಮಂತಾ ತಮ್ಮ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಅಪಪ್ರಚಾರ ಮಾಡಿದ್ದವರ ಮೇಲೆ ಕಾನೂನು ಸಮರ ಸಾರಿದ್ದಾರೆ.

ಹೌದು, ನಟಿ ಸಮಂತಾರವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳಿಂದ ಹಲವು ಸುದ್ದಿಗಳು ಹರಿದಾಡಿದ್ದವು. ಅದರಲ್ಲಯಾವ ಸುದ್ದಿ ನಿಜ ಯಾವುದು ಸುಳ್ಳು ಅನ್ನೋದೇ ಗೊತ್ತಾಗಿರ್ಲಿಲ್ಲ. ಕೆಲವರು ಸಮಂತಾನೇ ಸರಿಯಿಲ್ಲ, ಆಕೆಯ ನಡವಳಿಕೆ ಸರಿಯಿಲ್ಲ, ಕಾಸ್ಟೂಮ್ ಡಿಸೈನರ್ ಒಬ್ಬರ ಜೊತೆ ಸಮಂತಾಗೆ ಸಂಬಂಧವಿತ್ತು ಅಂತೆಲ್ಲಾ ಸುದ್ದಿ ಹಬ್ಬಿಸಿದ್ರು.

ಇದರಿಂದ ತೀರಾ ಜರ್ಜರಿತಗೊಂಡಿದ್ದ ನಟಿ ಸಮಂತಾ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ರು. ಆದ್ರೆ ನಾನು ಸುಮ್ಮನಿದ್ರೆ ನನ್ನ ಮೇಲೆ ಮತ್ತಷ್ಟು ಇಲ್ಲಸಲ್ಲದ ಆರೋಪ ಬರುತ್ತೆ ಅಂತ ಅರಿತ ಸಮಂತಾ ಸದ್ಯ ತಾವೇನು ಅನ್ನೋದನ್ನ ತೋರೋದಕ್ಕೆ ಹೊರಟಿದ್ದಾರೆ.

ಹೌದು, ತಮ್ಮ ಬಗ್ಗೆ ಗಾಸಿಪ್ ಹರಡಿಸಿದ್ದ ಕೆಲ ಯೂಟ್ಯೂಬರ್ಸ್ ಮೇಲೆ ಸಮಂತಾ ಕಾನೂನು ಸಮರಕ್ಕಿಳಿದಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇನ್ನು ನನ್ನ ಅರ್ಜಿಯನ್ನ ಆದಷ್ಟು ಬೇಗ ವಿಚಾರಣೆ ಮಾಡಬೇಕು ಅಂತ ಹೈದ್ರಾಬಾದ್ ನ್ಯಾಯಾಲಯಕ್ಕೆ ಕೋರಿದ್ದ ಸಮಂತಾಗೆ ಸದ್ಯ ಹಿನ್ನಡೆಯಾಗಿದೆ. ಯಾಕಂದ್ರೆ ಈ ಅರ್ಜಿಯನ್ನು ನಾವು ಕೂಡಲೇ ವಿಚಾರಣೆಗೆ ತೆಗೆದುಕೊಳ್ಳೋದಕ್ಕೆ ಸಾಧ್ಯವಿಲ್ಲ. ನೀವು ಸೆಲೆಬ್ರಿಟಿ ಎಂದಮಾತ್ರಕ್ಕೆ ತುರ್ತಾಗಿ ಈ ಕೇಸ್​ನ ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನಿಯಮದ ಪ್ರಕಾರವೇ ವಿಚಾರಣೆ ನಡೆಯುತ್ತೆ ಅಂತ ನ್ಯಾಯಾಲಯ ಹೇಳಿದೆ.

ಇನ್ನು ಸರ್ವಜನಿಕ ವಲಯದಲ್ಲಿರೋ ಸೆಲೆಬ್ರಿಟಿಗಳ ಬಗ್ಗೆ ಇಂತಹ ಸುದ್ದಿ ಹರಿದಾಡೋದು ಸಹಜ. ಇವುಗಳಿಗೆಲ್ಲಾ ಮಾನಹಾನಿ ಕೇಸ್ ದಾಖಲಿಸೋ ಬದಲಾಗಿ ಮಾಹಿತಿ ಪ್ರಸಾರ ಮಾಡಿದ್ದವರು ಕ್ಷಮೆ ಕೇಳಲಿ ಅಂತ ಸಮಂತಾ ಒತ್ತಾಯಿಸಬಹುದು ಅಂತಲೂ ಕೋರ್ಟ್ ಸಲಹೆ ನೀಡಿದೆ.

ಇನ್ನು ನಟಿ ಸಮಂತಾ ನಾಗಚೈತನ್ಯರಿಂದ ಡಿವೋರ್ಸ್ ಪಡೆದ ಬಳಿಕ ತಮ್ಮನ್ನು ತಾವು ಬ್ಯುಸಿಯಾಗಿಟ್ಟುಕೊಂಡಿದ್ದಾರೆ. ಶಿಯಲ್ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ಆಗಿರೋ ಸ್ಯಾಮ್,  ಹಲವು ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಪೂಜೆ, ಹೋಮಹವನಗಳನ್ನೂ ಮಾಡಿಸ್ತಿದ್ದಾರೆ.

ಇನ್ನು ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್  ಯಶಸ್ಸು ಸಿಕ್ಕ ಬಳಿಕ ಸಮಂತಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ತೆಲುಗಿನ ‘ಶಾಕುಂತಲಂ’ ಚಿತ್ರದಲ್ಲಿ ನಟಿಸುತ್ತಿರೋ ಸಮಂತಾ ಮತ್ತೊಂದು ಚಿತ್ರಕ್ಕೂ ಸಹಿ ಹಾಕಿದ್ದಾರೆ.

- Advertisement -

Latest Posts

Don't Miss