- Advertisement -
ಹೊಸದಿಲ್ಲಿ: ಯುವ ಎಡಗೈ ವೇಗಿ ಆರ್ಷದೀಪ್ ಕುರಿತು ತಪ್ಪು ಮಾಹಿತಿಯನ್ನು ಪ್ರಕಟಿಸಿದಕ್ಕಾಗಿ ಕೇಂದ್ರ ಸರ್ಕಾರ ವಿಕಿಪೀಡಿಯಾ ವಿರುದ್ಧ ಕಿಡಿಕಾರಿದೆ.
ಸದ್ಯ ಏಷ್ಯಾಕಪ್ ಆಡುತ್ತಿರುವ ವೇಗಿ ಆರ್ಷದೀಪ್ ಮೊನ್ನೆ ಪಾಕಿಸ್ಥಾನ ವಿರುದ್ಧದ ಕದನದಲ್ಲಿ ಪ್ರಮುಖ ಘಟ್ಟದಲ್ಲೆ ಕ್ಯಾಚ್ ಕೈಚೆಲ್ಲಿ ಭಾರೀ ಟೀಕೆಗಳಿಗೆ ಒಳಗಾಗಿದ್ದರು.
ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಕಿಪೀಡಿಯಾದಲ್ಲಿ ಆರ್ಷದೀಪ್ ಕುರಿತು ಮಾಹಿತಿಯನ್ನು ತಿರುಚಲಾಗಿದೆ. ವೇಗಿ ಕುರಿತ ವಿವರಗಳನ್ನು ತಿದ್ದಲಾಗಿದೆ. ಭಾರತೀಯ ಎಂಬುದನ್ನು ನಮೂದಿಸುವ ಬದಲು ಖಲಿಸ್ಥಾನಿ ಎಂದು ಬರೆಯಲಾಗಿದೆ.
ಈ ಘಟನೆ ನಂತರ ಎಚ್ಚೆತ್ತ ಕೇಂದ್ರ ಸರ್ಕಾರ ವಿಕಿಪೀಡಿಯಾ ವಿರುದ್ಧ ಹರಿಹಾಯ್ದಿದೆ. ಈ ರೀತಿಯ ಘಟನೆಗಳಿಗೆ ಅವಕಾಶ ನೀಡಲು ಅಸಾಧ್ಯ ಎಂದು ಹೇಳಿದೆ.
- Advertisement -

