ಬೆಂಗಳುರು: ಪೊಲೀಸ್ ಇಲಾಖೆ ಇಷ್ಟೇ ಎಚ್ಚರದಿಂದ ಕೆಲಸ ಮಾಡಿದರೂ ಎಷ್ಟೇ ಜಜ ಸಿಬ್ಬಂದಿಗಳನ್ನು ನೇಮಿಸಿದ್ರೂ ನಗರಗಳಲ್ಲಿನ ಕಳ್ಳತನ ಕೊಲೆ ಅತ್ಯಾಚಾರ ಪ್ರಕರಣಗಳು ನಿಲ್ಲುತ್ತಿಲ್ಲ ಹಾಡು ಹಗಲು ಅಥವಾ ರಾತ್ರಿಯಲ್ಲಿ ಕಳ್ಳರು ಯಾವುದೇ ಭಯವಿಲ್ಲದೆ ಕೃತ್ಯಗಳನ್ನು ಎಸೆಯುತ್ತಿದ್ದಾರೆ. ಅದೇರೀತಿ ಇಲ್ಲೊಂದು ತಂಡ ಮಧ್ಯರಾತ್ರಿಯ ವೇಳೆ ಕಳ್ಳತನಕ್ಕೆ ಇಳಿಯುತಿದ್ದಾರೆ. ಅದೇ ಚಡ್ಡಿ ತಂಡ
ಹೌಡು ಸ್ನೇಹಿತರೆ ಇಲ್ಲಿರುವ ತಂಡದ ಸದಸ್ಯರು ಎಲ್ಲರೂ ಚಡ್ಡಿ ಹಾಕಿಕೊಂಡು ಮಖಕ್ಕೆ ಕರವಸ್ತ್ರ ಸುತ್ತಿಕೊಂಡು ಗುರುತೇ ಸಿಗದಂತೆ ಕಣ್ಣು ಮುಚ್ಚಿ ಬಿಡುವುದರೊಳಗೆ ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಬೆಂಗಳೂರಿನ ಆನೆಕಲ್ ಸಮೀಪದ ಸರ್ಜಾಪುರದ ವಿಲ್ಲಾಗಳಲ್ಲಿ ಕಳ್ಳತನಕ್ಕೆ ಬಂದಂತಹ ಸಮಯದಲ್ಲಿ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಕೆಲವುತಿಂಗಳ ಹಿಂದೆ ಕಳ್ಳತನ ಪ್ರಕರಣಗಳು ಈ ಭಾಗದಲ್ಲಿ ಕಡಿಮೆಯಾಗಿದ್ದವು ಆದರೆ ಈ ಚಡ್ಡಿ ತಂಡಗಳು ಮತ್ತೆ ವಿಲ್ಲಾಗಳಲ್ಲಿ ಕಳ್ಳತನ ಶುರುಮಾಡಿಕೊಂಡಿವೆ ಇದರಿಂದ ಈ ಭಾಗದ ಜನರು ಭಯಭಿತರಾಗಿದ್ದಾರೆ.




