Friday, October 18, 2024

Latest Posts

ಛಗನ್, ಕವಿತಾ ಹಾಫ್ ಮ್ಯಾರಾಥಾನ್ ವಿಜೇತರು

- Advertisement -

ಮುಂಬೈ: ಮಹಾರಾಷ್ಟ್ರದ ಛಗನ್ ಬೊಂಬಾಲೆ ಮತ್ತು ಆಂಧ್ರ್ರ ಪ್ರದೇಶದ ಕವಿತಾ ರೆಡ್ಡಿ  ಮುಂಬೈ ಹಾಫ್ ಮ್ಯಾರಾಥಾನ್‍ನ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ  ಪದಕ ಗೆದ್ದು ಮಿಂಚಿದರು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಫ್ ಮ್ಯಾರಾಥಾನ್‍ಗೆ ಚಾಲನೆ ನೀಡಿದರು.  13,500 ಓಟಗಾರರು ಪಾಲ್ಗೊಂಡಿದ್ದರು.

ಇಲ್ಲಿನ ಬಾಂದ್ರ ಕುರ್ಲ ಕಾಂಪ್ಲೆಕ್ಸ್‍ನಲ್ಲಿ ನಡೆದ ಹಾಫ್ ಮ್ಯಾರಾಥಾನ್‍ನಲ್ಲಿ ಛಗನ್  ಬೊಂಬಾಲೆ 21ಕೆ ಓಟದಲ್ಲಿ 1:16:11 ನಿಮಿಷಗಳಲ್ಲಿ  ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಭಗತ್ ಸಿಂಗ್ ವಾಲ್ವಿ 1:17:51 ನಿಮಿಷಗಳಲ್ಲಿ  ಗುರಿ ಮುಟ್ಟಿ ಎರಡನೆ ಸ್ಥಾನ ಹಾಗೂ ಅನಿಲ್ ಜಿಂದಾಲ್ 1:18:20 ನಿಮಿಷಗಳಲ್ಲಿ  ಮುಟ್ಟಿ ಮೂರನೇ ಸ್ಥಾನ ಪಡೆದರು.

ಮಹಿಳಾ ವಿಭಾಗದಲ್ಲಿ ಕವಿತಾ ರೆಡ್ಡಿ  1:37:03 ನಿಮಿಷಗಳಲ್ಲಿ ಗುರಿ ಮುಟ್ಟಿ  ಮೊದಲ ಸ್ಥಾನ ತನ್ಮಯ ಕರ್ಮಾಕರ್ 1;40;18 ನಿಮಿಷಗಳಲ್ಲಿ  ಮುಟ್ಟಿ ಎರಡನೆ ಸ್ಥಾನ ಪಡೆದರು.  ಕೀತಿ ಸಾಥೆ ಮೂರನೆ ಸ್ಥಾನ ಪಡೆದರು.

ಪುರುಷರ 10ಕೆ ಓಟದಲ್ಲಿ ಅಮಿತ್ ಮಾಲಿ 0:33:42 ನಿಮಿಷ, ಕರಣ್ ಶರ್ಮಾ 0:33:44 ನಿಮಿಷ, ಸಂಜಯ್ 0:33:50 ನಿಮಿಷ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.

ಮಹಿಳಾ ವಿಭಾಗದಲ್ಲಿ ರೋಹಿನಿ ಪಾಟೀಲ್ 0:41;32, ಪ್ರಿಯಾಂಕಾ 0:42:26 ಪ್ರಿಯಾಂಕಾ ಕೈಲೇಶ್ 0:33:44 ನಿಮಿಷ ಗುರಿ ಮುಟ್ಟಿ  ಮೊದಲ ಮೂರು ಸ್ಥಾನ ಪಡೆದರು.

 

 

 

- Advertisement -

Latest Posts

Don't Miss