Movie News: ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ವೀಡಿಯೋಗಳನ್ನು ನೋಡಬಹುದು. ಅದರಲ್ಲಿ ಸೆಲೆಬ್ರಿಟಿಗಳು ಏರ್ಪೋರ್ಟ್‌ನಲ್ಲಿ ಇಳಿದು ಸ್ಟೈಲ್ ಆಗಿ ಕೈ ಬೀಸ್ಕೋಂಡ್ ಬರ್ತಾರೆ. ಅವರ ಬಳಿ ಲಗೇಜ್ ಇರೋದಿಲ್ಲಾ. ಹಾಗಾದ್ರೆ ಅವರು ಲಗ್ಗೇಜ್ ಯ್ಯೂಸ್ ಮಾಡೋದೇ ಇಲ್ವಾ..? ಖಂಡಿತಾ ಮಾಡ್ತಾರೆ. ಆದರೆ ಆ ಲಗ್ಗೇಜ್ ಬೇರೆಯವರ ಬಳಿ ಇರತ್ತೆ.
ಹೌದು.. ಸೆಲೆಬ್ರಿಟಿಗಳು ಏರ್ಪೋರ್ಟ್‌ಗೆ ಇಳಿದ ತಕ್ಷಣ, ಆರಾಮವಾಗಿ ಬರ್ತಾರೆ. ಅವರ ಹಿಂದೆ ಮುಂದೆ ಸೆಕ್ಯೂರಿಟಿ, ಪಿಎ ಇರುತ್ತಾರೆ. ಇದು ಹೇಗೆ ಸಾಧ್ಯ, ನಾರ್ಮಲ್ ಪೀಪಲ್ ಈ ರೀತಿ ಬರಲು ಸಾಧ್ಯವಾ ಅಂತಾ ನೀವು ಕೇಳಿದ್ರೆ, ಖಂಡಿತ ಸಾಧ್ಯ.
ಯಾಕಂದ್ರೆ ಸೆಲೆಬ್ರಿಟಿಗಳು ಪ್ರಿಮಿಯಮ್ ಏರ್ಪೋರ್ಟ್ ಕೋನ್‌ಸೈರ್ಸ್ ಸರ್ವಿಸಸ್ ಯ್ಯೂಸ್ ಮಾಡ್ತಾರೆ. ಈ ಸರ್ವಿಸ್‌ನಲ್ಲಿ ಸೆಲೆಬ್ರಿಟಿಗಳ ಲಗೇಜ್‌ನ್ನ ಏರ್ಪೋರ್ಟ್‌ನ ಸಿಬ್ಬಂದಿಗಳು ತರುತ್ತಾರೆ. ಸೆಲೆಬ್ರಿಟಿಗಳು ತಮ್ಮ ವಾಹನದ ಬಳಿ ಹೋಗುವವರೆಗೂ ಈ ಸರ್ವಿಸ್ ಲಭ್ಯವಿರುತ್ತದೆ.
ಅಲ್ಲದೇ ಇನ್ನೋರ್ವ ಸಿಬ್ಬಂದಿ, ವಿಐಪಿ ಚೆಕಿಂಗ್, ಫಾಸ್ಟ್ರ್ಯಾಕ್ ಸೆಕ್ಯೂರಿಟಿ ಮತ್ತು ಸ್ಮೂತ್ ಎಂಟ್ರಿ ಸಿಗುವಂತೆ ಮಾಡುತ್ತಾರೆ. ಹಾಗಾಗಿ ವಿಮಾನ ಪ್ರಯಾಣ ಆರಾಮದಾಯಕವಾಗಿ ಇರುವುದಲ್ಲದೇ, ವಿಮಾನದಿಂದ ಇಳಿದ ಬಳಿಕ ಚೆಕಿಂಗ್, ಲಗ್ಗೇಜ್ ಯಾವುದೇ ಕಿರಿಕಿರಿ ಇಲ್ಲದೇ, ಸೆಲೆಬ್ರಿಟಿಗಳು ಆರಾಮನಾಗಿ ವಿಮಾನ ನಿಲ್ದಾಣದಿಂದ ಆಚೆ ಬರುವವರೆಗೂ ವಿಐಪಿ ಟ್ರೀಟ್‌ಮೆಂಟ್ ಪಡೆಯುತ್ತಾರೆ.
ಇದು ಬರೀ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ. ಸಾಧಾರಣ ಜನರೂ ಈ ಸರ್ವಿಸ್ ಪಡೆಯಬಹುದು. 2ರಿಂದ3 ಸಾವಿರ ರೂಪಾಯಿ ನೀಡಿದ್ರೆ, ಈ ಸರ್ವಿಸ್ ಲಭ್ಯವಿರುತ್ತದೆ. ನೀವೂ ಇನ್ಮೇಲೆ ಏರ್ಪೋರ್ಟ್‌ಗೆ ಹೋದಾಗ ಈ ಸೌಲಭ್ಯ ಪಡೆಯಬಹುದು.




