ಬೈಂದೂರು ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ವಂಚಿಸಿ ಪರಾರಿಯಾಗಿದ್ದ ಬಳ್ಳಾರಿಯ ಹೂವಿನ ಹಡಗಲಿ ಮಠದ ಅಭಿನವ ಹಾಲಾಶ್ರೀ ಸ್ವಾಮಿಜಿಗಳು ಉದ್ಯಮಿ ಗೋವಿಂದ್ ಬಾಬು ಪೂಜಾರಿಯಿಂದ 1.5 ಕೋಟಿ ಹಣ ಪಡೆದುಕೊಂಡ ಆರೋಪದ ಮೇಲೆ ನಿನ್ನೆ ಕಟಕ್ ನಲ್ಲಿ ಪೊಲಿಸರು ಮಾರುವೇಷದಲ್ಲಿರುವ ಸ್ವಾಮಿಜಿಯನ್ನು ಬಂದಿಸಿದ್ದಾರೆ.
ಇಂದು ಇವರ ಮಠಕ್ಕೆ ತನಿಖೆ ಚುರುಕುಗೊಳಿಸಿದ ಸಿಸಿಬಿ ತಂಡ ಮಠದಲ್ಲಿ 56 ಲಕ್ಷ ಹಣವನ್ನು ವಶಪಡಿಸಿಕೊಂಡಿದೆ. ಆದರೆ ಸ್ವಾಮಿಜಿ ಪಡೆದುಕೊಂಡಿರುವುದು 1.5 ಕೋಟಿ ಆದರೆ ಅಲ್ಲಿ ದೊರೆತಿರುವುದು 56 ಲಕ್ಷ ಹಣ ಇನ್ನು ನಾಲ್ಕು ಲಕ್ಷ ಹಣವನ್ನು ವಕೀಲರಿಗೆ ನೀಡಿರುವುದಾಗಿ ಇನ್ನುಳಿದ ಹಣವನ್ನು ಅಪರಿಚಿತ ವ್ಯಕ್ತಿಯ ಕೈಯಲ್ಲಿ ಇಟ್ಟು ಹಾಲಾ ಶ್ರೀ ಸ್ವಾಮಿಜಿಯ ಕಾರು ಚಾಲಕ ಪರಾರಿಯಾಗಿದ್ದಾನೆ,
ಈ ಅಪರಿಚಿತ ವ್ಯಕ್ತಿ ಹಣವನ್ನು ಮಠದ ಅಡ್ಡ ಪಲ್ಲಕ್ಕಿಯಲ್ಲಿ ಇಟ್ಟು ವೀಡಿಯೋದ ಮೂಲಕ ಹಣ ಇರುವ ಸ್ಥಳದ ಮಾಹಿತಿ ತಿಳಿಸಿದ್ದಾನೆ. ಇನ್ನು ಈ ಅಪರಿಚಿತ ವ್ಯಕ್ತಿ ಮೈಸೂರಿನ ಕುವೆಂಪು ನಗರದ ನಿವಾಸಿ ಪ್ರಣವ್ ಪ್ರಸಾದ್ ಎಂದು ಗುರುತಿಸಿಲಾಗಿದೆ, ಇನ್ನು ಈ ಪ್ರಣವ್ ಪ್ರಸಾದ್ ಮತ್ತು ಸ್ವಾಮಿಜಿಯ ನಡುವೆ ಕಳೆದ 8 ತಿಂಗಳಿಂದ ನಂಟನ್ನು ಹೊಂದಿದ್ದರು.
Pratham: “ಕರ್ನಾಟಕದ ಅಳಿಯ” ನ ಹಾಡು ನೋಡಿ ಥ್ರಿಲ್ ಆದ “ಮುದ್ದಿನ ಅಳಿಯ”

