Saturday, May 25, 2024

Latest Posts

ಕಾಟೇರ ಶೂಟಿಂಗ್ಗೆ ಬ್ರೇಕ್.. ಮಹಾರಾಷ್ಟ್ರಕ್ಕೆ ಹೋಗಿದ್ಯಾಕೆ ಡಿ ಬಾಸ್..?

- Advertisement -

Movie News: ದರ್ಶನ್‌ ಅವರ ಬಹುನಿರೀಕ್ಷಿತ ಚಿತ್ರ ಕಾಟೇರ ಸೆಟ್ಟೇರಿ, ಶೂಟಿಂಗ್ ಆರಂಭಿಸಿದೆ. ಆದರೆ ಕಾರಣಾಂತರಗಳಿಂದ ಕಾಟೇರ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ. ಅಲ್ಲದೇ, ಶೂಟಿಂಗ್‌ ನಿಲ್ಲಿಸಿದ ಡಿ ಬಾಸ್, ಮಹಾರಾಷ್ಟ್ರಕ್ಕೆ ಹೋಗಿದ್ದಾರೆ. ಹಾಗಾದ್ರೆ ಯಾಕೆ ಶೂಟಿಂಗ್‌ಗೆ ಬ್ರೇಕ್‌ ಬಿತ್ತು..? ಡಿ ಬಾಸ್ ಅಚಾನಕ್‌ ಆಗಿ ಮಹಾರಾಷ್ಟ್ರಕ್ಕೆ ಹೋಗೋಕ್ಕೆ ಕಾರಣವೇನು ಅಂತಾ ನೋಡೋಣ ಬನ್ನಿ..

ಕೆಲ ದಿನಗಳ ಹಿಂದೆ ರವಿಶಂಕರ್‌ ಗುರೂಜಿ ಆಶ್ರಮದಲ್ಲಿ ದರ್ಶನ್ ಆ್ಯಂಡ್ ಟೀಂ, ಕಾಟೇರ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ ನಡೆಸಿತ್ತು. ಇನ್ನು ಕೆಲ ದಿನಗಳ ಶೂಟಿಂಗ್ ಇದೆ ಎಂದು ಟೀಂ ಹೇಳಿತ್ತು. ಆದರೆ ಕಾಟೇರ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಬಿದ್ದಿದ್ದು, ದರ್ಶನ್ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ. ಅವರ ಫೋಟೋಗ್ರಾಫರ್ ಫ್ರೆಂಡ್ಸ್ ಜೊತೆ ಈ ಟ್ರಿಪ್ ಕೈಗೊಂಡಿರುವ ದರ್ಶನ್, ಮಹಾರಾಷ್ಟ್ರದ ಕಾಡುಗಳಿಗೆ ಭೇಟಿ ನೀಡಿ, ಫೋಟೋ ಕ್ಯಾಪ್ಚರ್ ಮಾಡಿದ್ದಾರೆ.

ದರ್ಶನ್‌ಗೆ ಮೊದಲೇ ಕಾಡು ಪ್ರಾಣಿಗಳು, ಕಾಡುಗಳೆಂದರೆ ಇಷ್ಟ. ಹಾಗಾಗಿ ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿ ಒಂದಿಷ್ಟು ಕಾಡುಪ್ರಾಣಿಗಳನ್ನು ಸಾಕುತ್ತಿದ್ದಾರೆ. ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿ, ಅದನ್ನು ಮಾರಾಟ ಮಾಡಿ, ಆ ದುಡ್ಡಿನಿಂದ ಅರಣ್ಯ ರಕ್ಷಣೆಯೂ ಮಾಡಿದ್ದಾರೆ. ಹೀಗಾಗಿ ದರ್ಶನ್ ರನ್ನು ಅರಣ್ಯ ಇಲಾಖೆಯ ರಾಯಭಾರಿಯೂ ಮಾಡಲಾಗಿದೆ.

ಇದೀಗ ಮಹಾರಾಷ್ಟ್ರದ ಕಾಡಿನಲ್ಲಿ ದರ್ಶನ್‌ ಮತ್ತು ಟೀಂ ವೈಲ್ಡ್‌ಲೈಫ್ ಫೋಟೋಗ್ರಫಿ ಮಾಡುತ್ತಿದ್ದು, ಈ ಟ್ರಿಪ್ ಮುಗಿದ ಬಳಿಕ, ಕಾಟೇರ ಶೂಟಿಂಗ್ ಮುಂದುವರೆಯಲಿದೆ. ದರ್ಶನ್ ಬರ್ತ್‌ಡೇ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

- Advertisement -

Latest Posts

Don't Miss