ಆರೋಪ ಮಾಡಿದ್ದಕ್ಕೆ ಬೇಸರವಾಗಿ ದೇವರ ಮುಂದೆ ನಿಂತು ಅತ್ತ ಚೈತ್ರಾ ಕುಂದಾಪುರ

Bigg Boss Kannada: ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ಚೈತ್ರಾ ದೇವರ ಮುಂದೆ ನಿಂತು ಅತ್ತಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದು, ರಜತ್ ಕೂಡ ಮತ್ತೆ ಬಿಗ್ಬಾಸ್ ಮನೆಗೆ ಬಂದಿದ್ದಾರೆ.

ಅಣ್ಣನಂತಿದ್ದ ರಜತ್, ಚೈತ್ರಾ ಜತೆ ಜಗಳವಾಡಿದ್ದು, ಮನೆಯಲ್ಲಿ ಚೈತ್ರಾ ವಿರುದ್ಧ ಆರೋಪ ಮಾಡಲಾಗಿದ್ದು, ಇದು ಸುಳ್ಳು ಎಂದು ಚೈತ್ರಾ ದೇವರ ಮುಂದೆ ನಿಂತು ಕಣ್ಣೀರು ಹಾಕಿದ್ದಾರೆ. ಟಾಸ್ಕ್ ಆಡುವಾಗ ಚೈತ್ರಾ ರೂಲ್ಸ್ ಬ್ರೇಕ್ ಮಾಡುತ್ತಾರೆ. ಮತ್ತೆ ಆ ರೂಲ್ಸ್ ಬಗ್ಗೆ ನನಗೆ ತಿಳಿದೇ ಇರಲಿಲ್ಲವೆಂದು ಹೇಳುತ್ತಾರೆ. ಅವರು ಸುಳ್ಳು ಹೇಳಿಕ“ಂಡೇ ಆಟವಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ರಜತ್ ಮತ್ತು ಗಿಲ್ಲಿ ಸೇರಿ ಚೈತ್ರಾ ಕುಂದಾಪುರ ಅವರನ್ನು ರೇಗಿಸಿದ್ದು, ರಜತ್ ಚೈತ್ರಾ ಮಧ್ಯೆ ಜಗಳವಾಗಿದೆ. ಗಿಲ್ಲಿ ಕೂಡ ಕಳೆದ ಸೀಸನ್‌ನಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿ, ಚೈತ್ರಾ ಮನಸ್ಸನ್ನು ನೋಯಿಸಿದ್ದಾರೆ. ಹಾಗಾಗಿ ಚೈತ್ರಾ ನನ್ನ ಸುದ್ದಿಗೆ ಬರಬೇಡವೆಂದು ಗಿಲ್ಲಿ ಜತೆಯೂ ಜಗಳವಾಡಿದ್ದಾರೆ.

ಬಳಿಕ ಮರುದಿನ ಚೈತ್ರಾ ಅವರು ದೇವರ ಮುಂದೆ ನಿಂತು ಅತ್ತಿದ್ದಾರೆ. ಇದನ್ನು ಕಂಡ ರಾಶಿಕಾ, ಇದು ಕೂಡ ಡ್ರಾಮಾ ಎಂದಿದ್ದಾರೆ. ಸದ್ಯ ಧ್ರುವಂತ್ ಮತ್ತು ರಕ್ಷಿತಾ ಸಿಕ್ರೇಟ್ ರೂಮ್‌ನಲ್ಲಿದ್ದು, ಮನೆಯವರ ಆಟ ನೋಡುತ್ತ, ಜಗಳವಾಡುತ್ತ ಕಾಲ ಕಳೆಯುತ್ತಿದ್ದಾರೆ. ಮುಂದೇನಾಗತ್ತೆ ಅಂತಾ ಕಾದು ನೋಡಬೇಕಿದೆ.

About The Author