Friday, August 29, 2025

Latest Posts

ವೃಷಭಾವತಿ ಲೆಕ್ಕಕೊಟ್ಟ ಚಕ್ರವರ್ತಿ ಸೂಲಿಬೆಲೆ

- Advertisement -

ವೃಷಭಾವತಿ ನದಿ ಉಳಿಸಲು ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ದೊಡ್ಡ ಆಂದೋಲನ ರೂಪುಗೊಳ್ತಿದೆ. ಇದರ ಪ್ರಾರಂಭಿಕ ಹಂತದಲ್ಲಿ ಭಾನುವಾರ ಬೃಹತ್ ಮ್ಯಾರಥಾನ್ ಅನ್ನ ಯಶಸ್ವಿಯಾಗಿ ನಡೆಸಿದ್ದಾರೆ. ಇನ್ನೂ ಈ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಯ್ತು ಅನ್ನೋದನ್ನ ಚಕ್ರವರ್ತಿ ಸೂಲಿಬೆಲೆ ಪಿನ್ ಟು ಪಿನ್ ವಿವರಿಸಿದ್ದಾರೆ‌. ಫೇಸ್ ಬುಕ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ವೃಷಭಾವತಿಗಾಗಿ ಓಟ ಯಶಸ್ವಿಯಾಗಿ ನಡೆಯಿತು. ಇದರ ಒಟ್ಟಾರೆ ಖರ್ಚು ವೆಚ್ಚದ ವಿವರಗಳನ್ನು ಎಂದಿನಂತೆ ನಿಮ್ಮೆದುರಿಗಿಡುವುದು ನಮ್ಮ ಕರ್ತವ್ಯ. ಇದಕ್ಕೆ ಪೂರ್ವಭಾವಿಯಾಗಿ ನಡೆದ ತಜ್ಞರ ಸಮಾಲೋಚನಾ ಸಭೆಯನ್ನು ಹೊರತುಪಡಿಸಿ ಓಟಕ್ಕಂದೇ ನಡೆದ ತಯಾರಿಯ ಖರ್ಚು ಸುಮಾರು 66,000 ರೂಪಾಯಿಯಾಗಿದೆ. ಇನ್ನು ಕಾರ್ಯಕ್ರಮದ ದಿನ ಮಂಟಪದಿಂದ ಹಿಡಿದು ಹಂಚಿದ ಗ್ಲೂಕೋಸ್‌ನವರೆಗೂ ಸುಮಾರು 52,000 ರೂಪಾಯಿ ಖರ್ಚಾಗಿದೆ. ಎರಡನ್ನೂ ಸೇರಿಸಿದರೆ 1,20,000 ದಷ್ಟು ವೆಚ್ಚವಾಯ್ತು. ಇದರ ನಡುವೆ ಶಿವಮೊಗ್ಗದ ಮಿತ್ರ ಫಣಿ 6000 ಅಡಿಕೆ ಹಾಳೆಗಳನ್ನು ಕಳಿಸಿದ್ದರು, ಆರ್.ಆರ್ ನಗರದ ರೋಟರಿ ಕ್ಲಬ್ 19000 ರೂಪಾಯಿ ಕೊಟ್ಟಿದ್ದರೆ ಮಿತ್ರ ಬಾಲರಾಜ್ ಕಟ್ಟಿಗೆಯ ಚಮಚಗಳಿಗಾಗಿ 7500 ರೂಪಾಯಿ ಕೊಟ್ಟಿದ್ದರು. ಉತ್ತರಾದಿ ಮಠದ ಕಾರ್ಯಕ್ರಮಕ್ಕೆ ಹೋಗಿದ್ದಾಗ ಹಿರಿಯರಾದ ಸುರೇಶ್ ಕಾಮತ್‌ರು ಕೊಟ್ಟ ಕವರಿನಲ್ಲಿ 10000 ರೂಪಾಯಿ ಇತ್ತು. ಅದನ್ನೂ ಇದಕ್ಕೆ ಬಳಸಿದ್ದೇವೆ. ಆರು ದಾನಿಗಳು ಸೇರಿ 6000 ಟೀಶರ್ಟ್‌ಗಳನ್ನು ಕೊಟ್ಟಿದ್ದರೆ ಶ್ರೇಷ್ಠ ಭಾರತ ಪ್ರತಿಷ್ಠಾನದ ಮಿತ್ರ ಆನಂದ್ ಮತ್ತವರ ಪರಿವಾರದವರು ಇಡಿಯ ಉಪಾಹಾರದ ವ್ಯವಸ್ಥೆಯನ್ನು ನೋಡಿಕೊಂಡರು. ಓಡಾಟಕ್ಕೆಂದು ಬಂದ ಬಸ್ಸುಗಳು ಶಕುಂತಲಕ್ಕ ಮತ್ತು Iron Mountain ಮಿತ್ರರ ಕಡೆಯಿಂದ ಆದುದ್ದಾದರೆ‌ ನೀರು ಕುಡಿಸಿದ್ದು ಕಾರ್ಯಕರ್ತ ಮಹೇಂದ್ರ ಅಚಲ್. ವಸ್ತುಗಳ ರೂಪದಲ್ಲಿ ಬಂದುದ್ದನ್ನು ಪಕ್ಕಕ್ಕಿಟ್ಟು ಹಣ ಸಂಗ್ರಹಣೆಯ ದೃಷ್ಟಿಯಿಂದ ನೋಡುವುದಾದರೆ ಒಟ್ಟು ಸಂಗ್ರಹಗೊಂಡಿದ್ದು 36,000 ರೂಪಾಯಿ. ಇನ್ನೂ ಸಂಗ್ರಹವಾಗಬೇಕಿರುವುದು 81000 ರೂಪಾಯಿ. ಆಸಕ್ತರು ಸಹಕರಿಸಬಹುದು. ಸಹಕಾರ ಮಾಡಿದವರೆಲ್ಲರಿಗೂ ಧನ್ಯವಾದಗಳು – 9686049412

- Advertisement -

Latest Posts

Don't Miss